ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ಕಾಂಗ್ರೆಸ್‍ಗೆ `ಕಾಗೆ’
ಮೈಸೂರು

ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ಕಾಂಗ್ರೆಸ್‍ಗೆ `ಕಾಗೆ’

November 12, 2019

ಬೆಂಗಳೂರು, ನ.11(ಕೆಎಂಶಿ)- ಅನರ್ಹ ಶಾಸಕ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಜೆಡಿಎಸ್ ನಿಂದ ಬಂದ ಶಾಸಕರಿಗೆ ಟಿಕೆಟ್ ನೀಡಲು ಪಕ್ಷ ನಿರ್ಧರಿಸುತ್ತಿದ್ದಂತೆ, ಬಿಜೆಪಿಯಲ್ಲಿ ಬಂಡಾಯ ಭುಗಿಲೆದ್ದಿದೆ. ಕಾಗವಾಡ ಕ್ಷೇತ್ರದಲ್ಲಿ ತಮಗೆ ಟಿಕೆಟ್ ದೊರೆಯು ವುದಿಲ್ಲ ಎಂದು ಖಚಿತವಾಗುತ್ತಿದ್ದಂತೆ ಮಾಜಿ ಶಾಸಕ ರಾಜು ಕಾಗೆ ಬಿಜೆಪಿಗೆ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರಲು ತೀರ್ಮಾನಿಸಿದ್ದಾರೆ. ಇದೇ ರೀತಿ 4 ರಿಂದ 5 ಕ್ಷೇತ್ರಗಳಲ್ಲಿ ಈ ಮೊದಲು ಬಿಜೆಪಿಯನ್ನು ಪ್ರತಿನಿಧಿಸುತ್ತಿದ್ದ ಸ್ಥಳೀಯ ಮಾಜಿ ಶಾಸ ಕರು, ಮುಖಂಡರು, ಕಾಂಗ್ರೆಸ್ ಕದ ತಟ್ಟಿ ದ್ದಾರೆ. ಇಂದು ನಡೆದ ಕಾಂಗ್ರೆಸ್ ಮುಖಂ ಡರ ಸಭೆಯಲ್ಲೂ
ಇದರ ಪ್ರಸ್ತಾಪವಾಗಿದ್ದು, ರಾಜು ಕಾಗೆ ಮತ್ತು ಪೂಜಾರಿ ಯವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ರಾಜು ಕಾಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನವ ರನ್ನುಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ತೊರೆದು, ಕಾಂಗ್ರೆಸ್ ಸೇರುತ್ತಿರುವುದಾಗಿ ಅಧಿಕೃತವಾಗಿ ಪ್ರಕಟಿಸಿದರು. ನಾನು ಬಿಜೆಪಿಯಿಂದ ಹೊರ ಬಂದಿದ್ದೇನೆ. ಬಿಜೆಪಿಗೆ ರಾಜೀನಾಮೆ ನೀಡಿದ್ದೇನೆ, ರಾಜ್ಯ ಕಚೇರಿಗೇ ರಾಜೀನಾಮೆ ಪತ್ರ ಕಳಿಸಿದ್ದೇನೆ. ನಾನು ನ.13ಕ್ಕೆ ಕಾಂಗ್ರೆಸ್ ಪಕ್ಷ ಸೇರಿಕೊಳ್ಳುತ್ತೇನೆ ಎಂದರು. ಈಗಾಗಲೇ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ದಿನೇಶ್ ಗುಂಡೂರಾವ್ ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ನನಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೊಡುವ ಭರವಸೆ ನೀಡಿದ್ದಾರೆ. ಮುಂದೆ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿಯನ್ನು ಭೇಟಿ ಮಾಡುತ್ತೇನೆ, ಕುಮಾರಸ್ವಾಮಿ ನನ್ನ ಉತ್ತಮ ಸ್ನೇಹಿತರು. ಅವರೂ ಬೆಂಬಲ ಕೊಡುತ್ತಾರೆ ಅನ್ನುವ ಭರವಸೆ ಇದೆ ಎಂದರು. ಮತ್ತೆ ನಾನು ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ. ಇದು ನನ್ನ ರಾಜಕೀಯ ಭವಿಷ್ಯದ ಪ್ರಶ್ನೆ. ಈಗ ನಾನು ಮನೆಯಲ್ಲಿ ಕೂತರೆ, ಜೀವನ ಪರ್ಯಂತ ಮನೆಯಲ್ಲಿ ಕೂರಬೇಕು. ಯಡಿಯೂರಪ್ಪ ಒಮ್ಮೆ ಮಾತುಕತೆ ಮಾಡಿದರು, ಈಗ ನೀನು ಸುಮ್ಮನಿರು, ನಿನಗೆ ನಿಗಮ ಮಂಡಳಿ ಕೊಡುತ್ತೇನೆ ಅಂದಿದ್ದರು. ಆದರೆ ಈಗ ಶ್ರೀಮಂತ ಪಾಟೀಲ್ ಗೆಲ್ಲಿಸಿಕೊಂಡು ಬನ್ನಿ ಅನ್ನುತ್ತಿದ್ದಾರೆ. ಇದು ನನ್ನಿಂದ ಆಗದ ಮಾತು ಅಂದೆ. ಈಗ ಎಲ್ಲವೂ ಮುಗಿದ ಅಧ್ಯಾಯ. ನನಗೆ ಮುಖ್ಯಮಂತ್ರಿ ಪದವಿ ಕೊಟ್ಟರೂ ನಾನು ಬಿಜೆಪಿಗೆ ಹೋಗಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Translate »