`ಅತ್ಯಾಧುನಿಕ’ ಆಗಲಿದೆ ಪೌರಾಣಿಕ ನಗರಿ ಅಯೋಧ್ಯೆ!
ಮೈಸೂರು

`ಅತ್ಯಾಧುನಿಕ’ ಆಗಲಿದೆ ಪೌರಾಣಿಕ ನಗರಿ ಅಯೋಧ್ಯೆ!

November 11, 2019

 ಐತಿಹಾಸಿಕ ತೀರ್ಪಿನ ಬಳಿಕ ಕೇಂದ್ರದ ಮೆಗಾ ಪ್ಲಾನ್ ರೆಡಿ
 ಮುಂದಿನ ವಾರ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ
ನವದೆಹಲಿ,ನ.10- ಅಯೋಧ್ಯೆ ತೀರ್ಪು ಹೊರಬಿದ್ದ ಮರುದಿನವೇ ಪೌರಾಣಿಕ ನಗರಿ ಅಯೋಧ್ಯೆಯ ಅಭಿವೃದ್ಧಿಗೆ ಮಹಾ ಯೋಜನೆಯೊಂದು ರಚನೆ ಯಾಗಿದೆ. ಅಯೋಧ್ಯೆಯನ್ನು ದೇಶದ ಅತಿದೊಡ್ಡ ತೀರ್ಥ ಕ್ಷೇತ್ರವನ್ನಾಗಿ ಅಭಿ ವೃದ್ಧಿಪಡಿಸಲು ಸಮಗ್ರ ಯೋಜನೆ ರೂಪಿಸಲಾಗಿದೆ. ಅಯೋಧ್ಯೆಯ ಮೇಯರ್ ಹೃಷಿಕೇಶ್ ಉಪಾಧ್ಯಾಯ ಯೋಜನೆಯ ನೀಲನಕ್ಷೆಯನ್ನು ವಿವರಿಸಿದ್ದು, ಅದರ 20 ಅಂಶಗಳ ಯೋಜನಾ ವಿವರ ಇಲ್ಲಿದೆ.

ಅಯೋಧ್ಯಾ ತೀರ್ಥಯಾತ್ರಾ ಅಭಿವೃದ್ಧಿ ಮಂಡಳಿ ರಚನೆ, ಮಂಡಳಿ ಮೂಲಕವೇ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಆಧುನಿಕ ನಗರಿ ಸ್ಥಾಪನೆ, ಅಯೋಧ್ಯಾ ಸುತ್ತಲೂ ಪೌರಾಣಿಕ, ಸಾಂಪ್ರದಾಯಿಕ ಮಾದರಿಯಲ್ಲಿ 10 ದ್ವಾರಗಳ ನಿರ್ಮಾಣ, ಅಯೋಧ್ಯೆ ಗಾಗಿಯೇ ಪ್ರತ್ಯೇಕ ಏರ್‍ಪೆÇೀರ್ಟ್ ನಿರ್ಮಾಣ, ಮೇ 2020ರ ಒಳಗೆ ಅಯೋಧ್ಯೆಗೆ ಮೊದಲ ವಿಮಾನ ಬಂದಿಳಿಯುವಂತೆ ಡೆಡ್‍ಲೈನ್, ಅಂತಾರಾಷ್ಟ್ರೀಯ ಗುಣಮಟ್ಟದ ಅತ್ಯಾಧುನಿಕ ಸೌಲಭ್ಯಗಳುಳ್ಳ ಬಸ್ ನಿಲ್ದಾಣ ನಿರ್ಮಾಣ, 100 ಕೋಟಿ ರೂ. ವೆಚ್ಚ ದಲ್ಲಿ ವಿಶ್ವದರ್ಜೆಯ ರೈಲ್ವೆ ನಿಲ್ದಾಣ, ನಗರದಾದ್ಯಂತ ನೆಲದಡಿಯಲ್ಲಿ ಕೇಬಲ್‍ಗಳ ಅಳವಡಿಕೆ, ಅಯೋಧ್ಯೆಯಾದ್ಯಂತ 10 ಫೈವ್‍ಸ್ಟಾರ್ ಹೊಟೇಲ್‍ಗಳು ನಿರ್ಮಾಣ. ಡಿಸೆಂಬರ್‍ನಲ್ಲೇ ಕಾಮಗಾರಿ ಆರಂಭ, ಅಯೋಧ್ಯೆಯ ಸುತ್ತಲೂ 5 ಅತಿದೊಡ್ಡ ವೈಭವೋಪೇತ ರೆಸಾರ್ಟ್‍ಗಳ ನಿರ್ಮಾಣ, ಸರಯೂ ನದಿ ತೀರದಲ್ಲಿ 151 ಮೀಟರ್ ಎತ್ತರ ಭಗವಾನ್ ಶ್ರೀರಾಮನ ಪುತ್ಥಳಿ ನಿರ್ಮಾಣ, ಒಂದೇ ಬಾರಿಗೆ 10 ಸಾವಿರ ಜನರಿಗೆ ಆಶ್ರಯ ಒದಗಿಸಬಲ್ಲ ಧರ್ಮ ಛತ್ರ ನಿರ್ಮಾಣ, ಫೈಝಾಬಾದ್ ಹಾಗೂ ಅಯೋಧ್ಯೆ ಸಂಪರ್ಕಿಸಲು 5 ಕಿ.ಮೀ. ಉದ್ದದ ಫ್ಲೈ ಓವರ್ ನಿರ್ಮಾಣ, ಅಯೋಧ್ಯೆ ಯಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ, ಅಯೋಧ್ಯೆಯ ಎಲ್ಲಾ ಸಾರ್ವಜನಿಕ ಸ್ಥಳಗಳ ಸಮಗ್ರ ಅಭಿವೃದ್ಧಿ, ಅಯೋಧ್ಯೆಯಲ್ಲಿ ಪಾರ್ಕ್‍ಗಳನ್ನು ಅಭಿವೃದ್ಧಿಪಡಿಸುವ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ, ಶ್ರೀರಾಮನಿಗೆ ಸಂಬಂಧಿಸಿದ ಎಲ್ಲಾ ಸಣ್ಣ ಪುಟ್ಟ ತಾಣಗಳ ಅಭಿವೃದ್ಧಿ, ಅಯೋಧ್ಯೆ ಸುತ್ತಲಿನ ಎಲ್ಲಾ ಜಲಾಶಯಗಳ ಅಭಿವೃದ್ಧಿ, ರಾಮಾಯಣ ಕಾಲದ ಕೇಂದ್ರ ಸ್ಥಾನವಾದ ಅಯೋಧ್ಯೆಯೊಂದಿಗೆ ಭಾರತ ವನ್ನು ಬೆಸೆಯುವ ಯೋಜನೆ, ಅಯೋಧ್ಯೆಯಿಂದ ಚಿತ್ರಕೂಟದವರೆಗೂ ಚತುಷ್ಪಥ ಹೆದ್ದಾರಿ. ಉತ್ತರ ಪ್ರದೇಶ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಜೊತೆಗೂಡಿ ಈ ಬಗ್ಗೆ ಚರ್ಚಿಸಿ ಅಂತಿಮಗೊಳಿಸಲು ಅಯೋಧ್ಯೆ ಮೇಯರ್ ನಿರ್ಧರಿಸಿದ್ದಾರೆ.

ಅಯೋಧ್ಯೆಯ ಅಭಿವೃದ್ಧಿಯ ಮೇಲುಸ್ತುವಾರಿಯನ್ನು ಕೇಂದ್ರದ ಸಾಂಸ್ಕೃತಿ ಸಚಿವಾ ಲಯ ವಹಿಸಿಕೊಳ್ಳಲಿದೆ. ಈ ಸಂಬಂಧ ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಮುಂದಿನ ವಾರ ಸಭೆ ಕರೆಯುವ ಸಾಧ್ಯತೆಯೂ ಇದೆ. ಇದೀಗ ಕೇಂದ್ರ ಸರ್ಕಾರದ ಕಾನೂನು ಇಲಾಖೆ ಅಧಿಕಾರಿಗಳು 1045 ಪುಟಗಳ ಸುಪ್ರೀಂ ಕೋರ್ಟ್ ತೀರ್ಪನ್ನು ಸಮಗ್ರವಾಗಿ ಅಧ್ಯಯನ ನಡೆಸುತ್ತಿದ್ದಾರೆ. ಅಧ್ಯಯನದ ಬಳಿಕ ಇಲಾಖಾವಾರು ಚರ್ಚೆ ನಡೆಸಿ ಟ್ರಸ್ಟ್ ರಚನೆ ಸಂಬಂಧ ಅಂತಿಮ ನಿರ್ಧಾರ ಹೊರಬೀಳಲಿದೆ. 3 ತಿಂಗಳ ಒಳಗೆ ಟ್ರಸ್ಟ್ ರಚಿಸುವಂತೆ ಸುಪ್ರೀಂ ಕೋರ್ಟ್ ಈಗಾಗಲೇ ಗಡುವನ್ನೂ ನೀಡಿದೆ. ಈ ಟ್ರಸ್ಟ್‍ನಲ್ಲಿ ಟ್ರಸ್ಟಿಗಳು ಯಾರಾಗಬೇಕು ಅನ್ನೋದನ್ನೂ ಕೇಂದ್ರ ಸರ್ಕಾರವೇ ನಿರ್ಧರಿಸಲಿದೆ. ಮೂಲಗಳ ಪ್ರಕಾರ, ಅಯೋಧ್ಯಾ ಅಭಿವೃದ್ಧಿ ಯೋಜನೆಯಲ್ಲಿ ರಾಮನಿಗೆ ಸಂಬಂಧಿಸಿದ ವಸ್ತು ಸಂಗ್ರಹಾಲಯವನ್ನೂ ನಿರ್ಮಿಸುವ ಸಾಧ್ಯತೆ ಇದೆ. ಪುರಾತತ್ವ ಇಲಾಖೆ ಉತ್ಖನನ ನಡೆಸಿದ ವೇಳೆ ಸಿಕ್ಕ ವಸ್ತುಗಳನ್ನು ಈ ಸಂಗ್ರಹಾಲಯದಲ್ಲಿ ಕಾಣ ಬಹುದಾಗಿದೆ. ಮುಂದಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುವ ಹಿನ್ನೆಲೆಯಲ್ಲಿ ಅಯೋಧ್ಯೆಯನ್ನು ಪಾರಂಪರಿಕ ಕ್ಷೇತ್ರಗಳ ಪಟ್ಟಿಗೆ ಸೇರಿಸುವ ಸಾಧ್ಯತೆಯೂ ಇದೆ.

Translate »