ಗ್ರಾಮೀಣಾಭಿವೃದ್ಧಿಗೆ ಕೇಂದ್ರದ ಅನುದಾನ  ಸರಿಯಾದ ಸಮಯಕ್ಕೆ ದೊರೆಯುತ್ತಿಲ್ಲ
ಮೈಸೂರು

ಗ್ರಾಮೀಣಾಭಿವೃದ್ಧಿಗೆ ಕೇಂದ್ರದ ಅನುದಾನ ಸರಿಯಾದ ಸಮಯಕ್ಕೆ ದೊರೆಯುತ್ತಿಲ್ಲ

January 24, 2019

ಮೈಸೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಕೇಂದ್ರ ಸರ್ಕಾರ ನೀಡ ಬೇಕಿರುವ ಅನುದಾನವನ್ನು ಸರಿಯಾದ ವೇಳೆಗೆ ಬಿಡುಗಡೆ ಮಾಡುತ್ತಿಲ್ಲ ಎಂದು ಸಚಿವ ಕೃಷ್ಣಭೈರೇಗೌಡ ದೂರಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂ ಗಣದಲ್ಲಿ ಬುಧವಾರ ನಡೆದ ಜಿಪಂ ಸಿಇಓ ಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರ ದಿಂದ ಕುಡಿಯುವ ನೀರು ಪೂರೈಕೆ ಮತ್ತು ನರೇಗಾ ಯೋಜನೆಯಡಿ ಸಾಕಷ್ಟು ಅನುದಾನ ಬರಬೇಕಿದೆ. ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಈ ಹಿಂದೆ ಶೇ.75:25 ಅನುಪಾತದಡಿ ಅನು ದಾನ ಬಿಡುಗಡೆ ಮಾಡುತ್ತಿತ್ತು. ಆದರೆ, ಎನ್‍ಡಿಎ ಸರ್ಕಾರ ಬಂದ ಮೇಲೆ ಈ ಪ್ರಮಾಣವನ್ನು ಶೇ.60:40 ಅನುಪಾತ ಕ್ಕಿಳಿಸಿದೆ. ಇದರ ಪ್ರಕಾರವೂ ಪೂರ್ಣ ಪ್ರಮಾಣದಲ್ಲಿ ಕೇಂದ್ರ ಸರ್ಕಾರ ಅನು ದಾನ ನೀಡುತ್ತಿಲ್ಲ ಎಂದು ದೂರಿದರು.

2016ರಲ್ಲಿ ಬರಗಾಲ ಆವರಿಸಿದ್ದಾಗ ರಾಜ್ಯ ಸರ್ಕಾರಕ್ಕೆ ನೀಡಬೇಕಿದ್ದ 2,175 ಕೋಟಿ ರೂ. ಅನುದಾನದಲ್ಲಿ ಬಾಕಿ ಉಳಿಸಿಕೊಂ ಡಿದ್ದ 935 ಕೋಟಿ ಅನುದಾನವನ್ನು ಈವ ರೆಗೂ ಬಿಡುಗಡೆಗೊಳಿಸಿಲ್ಲ. ಈ ಅನು ದಾನವೂ ಸೇರಿದಂತೆ 1800 ಕೋಟಿ ಬಾಕಿ ಉಳಿಸಿ ಕೊಂಡಿದೆ. ಕುಡಿಯುವ ನೀರು, ನರೇಗಾ ಯೋಜನೆ ಸೇರಿದಂತೆ ನಮ್ಮ ಇಲಾಖೆಯ ಅನೇಕ ಯೋಜನೆಗಳಿಗೆ ಕೇಂದ್ರ ಸರ್ಕಾರ ನೀಡಬೇಕಿರುವ ಅನು ದಾನ ಸರಿಯಾದ ಸಮಯಕ್ಕೆ ಬಿಡುಗಡೆ ಗೊಳಿಸುತ್ತಿಲ್ಲ. ಪ್ರಸ್ತುತ ಈ ಸಾಲಿನ ಅನು ದಾನವೂ ಸೇರಿದಂತೆ ಗ್ರಾಮೀಣಾಭಿವೃದ್ಧಿ ಇಲಾಖೆಗೆ 1800 ಕೋಟಿ ರೂ. ಬಾಕಿ ಯನ್ನು ಬಿಡುಗಡೆಗೊಳಿಸುವಂತೆ ರಾಜ್ಯದ 25 ಸಂಸದರು ಕಾಂಗ್ರೆಸ್ ಪಕ್ಷದ ಲೋಕ ಸಭೆ ಸಂಸದೀಯ ನಾಯಕ ಮಲ್ಲಿ ಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಹಿ ಮಾಡಿ, ಸಂಬಂಧಪಟ್ಟ ಕೇಂದ್ರ ಸಚಿವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋ ಜನವಾಗಿಲ್ಲ ಎಂದು ತಿಳಿಸಿದರು.

ಶಾಶ್ವತ ಕಾಮಗಾರಿಗಳಿಗೆ ಚಾಲನೆ: ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಸುಮಾರು 284 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದ್ದು, 362 ಗ್ರಾಮಗಳಿಗೆ ಖಾಸಗಿ ಬೋರ್‍ವೆಲ್ ಗಳನ್ನು ಬಾಡಿಗೆಗೆ ಪಡೆದು ನೀರು ಪೂರೈ ಸಲು ಕ್ರಮವಹಿಸಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಕೊಳ್ಳಲು ರಾಜ್ಯ ಸರ್ಕಾರದಿಂದ 2400 ಕೋಟಿ ಅನುದಾನ ಬಿಡುಗೊಳಿಸಿದೆ. ಕೇವಲ ಬರಪೀಡಿತ ಪ್ರದೇಶಕ್ಕೆ ಮಾತ್ರ ವಲ್ಲದೆ, ಇತರೆ ಜಿಲ್ಲೆಗಳಿಗೆ ಶಾಸಕರ ನೇತೃತ್ವದ ಟಾಸ್ಕ್ ಫೋರ್ಸ್ ನೇತೃತ್ವದ ಕಮಿಟಿಗೂ 134 ಕೋಟಿ ಹೆಚ್ಚುವರಿ ಅನುದಾನ ಮಂಜೂರು ಮಾಡಿದೆ. ಒಟ್ಟಾರೆ 29 ಸಾವಿರ ಕೋಟಿ ಮೊತ್ತದ ಕಾಮಗಾರಿ ಹಮ್ಮಿಕೊಳ್ಳಲಾಗಿದ್ದು, ಈ ಪೈಕಿ 27 ಸಾವಿರ ಕೋಟಿ ಮೊತ್ತದ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿಗಳು ಮಾರ್ಚ್ ಕೊನೆಯ ವಾರದಲ್ಲಿ ಪೂರ್ಣ ಗೊಳ್ಳುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ರೈತರಿಗೆ ನರೇಗಾ ಯೋಜನೆ ನೆರವು: ನರೇಗಾ ಯೋಜನೆಯಡಿ ವಾರ್ಷಿಕ 8,500 ಕೋಟಿ ಮಾನವ ದಿನಗಳಿಗೆ ಸಮಾನವಾದ ಉದ್ಯೋಗ ಸೃಜಿಸುವ ಗುರಿ ನಮ್ಮ ಇಲಾಖೆ ಹೊಂದಿತ್ತು. ರಾಜ್ಯದಲ್ಲಿ 162 ತಾಲೂಕು ಬರ ಪೀಡಿತ ಎಂದು ಘೋಷಣೆಯಾದ ಬಳಿಕ ಉದ್ಯೋಗ ಸೃಜಿಸುವ ಕಾರ್ಯ ಚುರುಕು ಗೊಳಿಸಲಾಗಿದೆ. ಕಳೆದ ಏಳೆಂಟು ವರ್ಷ ಗಳಿಗೆ ಹೋಲಿಸಿದರೆ ಈ ವರ್ಷ ನರೇಗಾ ಯೋಜನೆಯಡಿ ಹೆಚ್ಚಿನ ಕೆಲಸ ಮಾಡಿ ದ್ದೇವೆ. ಈವರೆಗೆ 2,920 ಕೋಟಿ ವೆಚ್ಚದ ಕಾಮಗಾರಿ ನಡೆದಿದೆ. ಹಾಗಾಗಿ ವರ್ಷದ ಗುರಿಯನ್ನು ಮೀರಿ ಹೆಚ್ಚು ಮಾನವ ದಿನಗಳನ್ನು ಸೃಷ್ಟಿಸುವ ಬಗ್ಗೆ ಅಧಿಕಾರಿ ಗಳಿಗೆ ಸೂಚಿಸಿದ್ದೇನೆ ಎಂದರು.
ನರೇಗಾ ಯೋಜನೆಯಡಿ ರೈತರು ಸರ್ಕಾರಿ ಕಾರ್ಯಕ್ರಮಗಳಲ್ಲಿಯೇ ಕೆಲಸ ಮಾಡ ಬೇಕು ಎಂದೇನು ಇಲ್ಲ. ಬಿಪಿಎಲ್ ಕಾರ್ಡ್ ಹೊಂದಿರುವ ರೈತರು ತಮ್ಮ ಸ್ವಂತ ಜಮೀ ನಿನಲ್ಲಿ ತೋಟಗಾರಿಕೆ ಬೆಳೆಗಳಾದ ಸಪೋಟ, ಬಾಳೆ, ತೆಂಗು, ಮಾವು ಸೇರಿದಂತೆ ಇತರೆ ಬೆಳೆಗಳಿಗೂ ಅನುದಾನ ನೀಡುತ್ತದೆ. ಉದಾಹರಣೆಗೆ ರೈತರು ತಮ್ಮ ಜಮೀನಿ ನಲ್ಲಿ ಗುಣಿ ಮಾಡಿದರೆ ಅಥವಾ ಸಸಿಗಳನ್ನು ಖರೀದಿಸಿದರೆ, ಅದಕ್ಕೂ ನರೇಗಾ ಅಡಿ ಕೂಲಿ ನೀಡಲಾಗುವುದು. ಈ ಯೋಜ ನೆಗೆ ಗರಿಷ್ಟ 1.50 ಲಕ್ಷದವರೆಗೆ ಅನುದಾನ ನೀಡಲು ಅವಕಾಶವಿದೆ. ಇನ್ನು ನರೇಗಾ ಯೋಜನೆಯಡಿ 250 ರೂ ಕೂಲಿ ನಿಗದಿ ಪಡಿಸಲಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಕೂಲಿ ಮೊತ್ತವನ್ನು ಹೆಚ್ಚಿಸ ಲಾಗುವುದು ಎಂದರು.

30 ಲಕ್ಷ ಉದ್ಯೋಗ ದಿನ: ನರೇಗಾ ಯೋಜನೆಯಡಿ ಮೈಸೂರು ಜಿಲ್ಲೆಯಲ್ಲಿ ಈ ವರ್ಷ 30 ಲP್ಷÀ ಉದ್ಯೋಗ ದಿನ ಸೃಷ್ಟಿಸಲಾಗುತ್ತಿದೆ. ರಾಜ್ಯದ ಕೆಲವು ಮುಂದು ವರೆದ ಜಿಲ್ಲೆಗಳನ್ನು ಹೊರತುಪಡಿಸಿ, ಉಳಿ ದೆಡೆ ಈ ಯೋಜನೆಗೆ ಹೆಚ್ಚಿನ ಬೇಡಿಕೆ ಯಿದೆ. ರಾಯಚೂರು ಮತ್ತು ಕೋಲಾರ ಜಿಲ್ಲೆಗಳು ಹೆಚ್ಚಿನ ಉದ್ಯೋಗ ದಿನಗಳನ್ನು ಹೊಂದಿವೆ ಎಂದು ವಿವರಣೆ ನೀಡಿದರು.

ಎರಡು ದಿನಗಳ ಕಾರ್ಯಾಗಾರ: ಜಿಪಂ ಸಿಇಒಗಳಿಗೆ ಎರಡು ದಿನದ ಕಾರ್ಯಾ ಗಾರ ಆಯೋಜಿಸಲಾಗಿದ್ದು, ಇಂದು ಎಲ್ಲಾ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆದಿದೆ. ನಾಳಿನ ಸಭೆಯಲ್ಲಿ ನೂತನ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಗು ವುದು ಎಂದು ಹೇಳಿದರು. ಸುದ್ದಿಗೋಷ್ಠಿ ಯಲ್ಲಿ ಇಲಾಖೆಯ ಪ್ರಧಾನ ಕಾರ್ಯ ದರ್ಶಿ ಅಯ್ಯಪ್ಪ, ಜಿಲ್ಲಾಧಿಕಾರಿ ಅಭಿ ರಾಮ್ ಜಿ. ಶಂಕರ್ ಉಪಸ್ಥಿತರಿದ್ದರು.

Translate »