ರಾಯ್‍ಪುರ್: ತೆಲಂಗಾಣದ ಪಶುವೈದ್ಯೆ ಪ್ರಕರಣದ ಕಿಚ್ಚು ಹಾರುವ ಮುನ್ನವೇ ಛತ್ತೀಸ್‍ಗಡದ ರಾಜ್‍ಪುರ್ ಜಿಲ್ಲೆಯಾ ಮುರ್ಕಾ ಗ್ರಾಮದಲ್ಲಿ ಅರ್ಧ ಸುಟ್ಟ ಮಹಿಳೆಯ ಶವ ಪತ್ತೆಯಾಗಿದೆ ಎಂದು ಪೆÇಲೀಸರು ಹೇಳಿದ್ದಾರೆ. ತೆಲಂಗಾಣದ ಪಶುವೈದ್ಯೆ ಅವರ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ, ಪೆಟ್ರೋಲ್ ಹಾಕಿ ಸುಡಲಾಗಿತ್ತು. ಈ ಪ್ರಕರಣ ಇಡೀ ಭಾರತವನ್ನೆ ನಡುಗಿಸಿತ್ತು. ಹೀಗಿರುವಾಗ ಛತ್ತೀಸ್‍ಗಡದಲ್ಲಿ ಇನ್ನೊಂದು ಅರ್ಧ ಸುಟ್ಟ ಮಹಿಳೆಯ ದೇಹ ಪತ್ತೆಯಾಗಿದೆ. ಈ ವಿಚಾರದ ಬಗ್ಗೆ ಮಾತನಾಡಿರುವ ಬಲರಾಂಪುರ ಎಸ್ಪಿ ಟಿ.ಆರ್.ಕೋಶಿಮಾ ಅವರು, ಅರ್ಧ ಸುಟ್ಟ ಸ್ಥಿತಿಯಲ್ಲಿ ಮಹಿಳಾ ಶವವೊಂದು ಸಿಕ್ಕಿದ್ದು, ಅದನ್ನು ಗುರುತಿಸುವ ಪ್ರಯತ್ನ ಮಾಡುತ್ತಿ ದ್ದೇವೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಅದರ ವರದಿ ಇನ್ನೂ ಬಂದಿಲ್ಲ. ಆದ್ದರಿಂದ ಮಹಿಳೆಯನ್ನು ಲೈಂಗಿಕವಾಗಿ ಕಿರುಕುಳ ಕೊಟ್ಟ ಕೊಲೆ ಮಾಡಿ ದ್ದಾರಾ? ಇಲ್ಲವಾ? ಎಂಬುದು ನಮಗೆ ಇನ್ನೂ ತಿಳಿದು ಬಂದಿಲ್ಲ ಎಂದು ಹೇಳಿದ್ದಾರೆ.