ಮೈಸೂರು ವಿಮಾನ ನಿಲ್ದಾಣಕ್ಕೆ ಜಯಚಾಮರಾಜೇಂದ್ರ ಹೆಸರಿಡಲು ಆಗ್ರಹ
ಮೈಸೂರು

ಮೈಸೂರು ವಿಮಾನ ನಿಲ್ದಾಣಕ್ಕೆ ಜಯಚಾಮರಾಜೇಂದ್ರ ಹೆಸರಿಡಲು ಆಗ್ರಹ

December 3, 2019

ಮೈಸೂರು,ಡಿ.2-ಮೈಸೂರಿನ ವಿಮಾನ ನಿಲ್ದಾಣಕ್ಕೆ ಶ್ರೀಜಯ ಚಾಮ ರಾಜೇಂದ್ರ ಒಡೆಯರ್‍ರವರ ಹೆಸ ರಿಡಬೇಕೆಂದು ಎಫ್‍ಕೆಸಿಸಿಐ ಮಾಜಿ ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಒತ್ತಾಯಿಸಿ ದ್ದಾರೆ. ಮೈಸೂರು ಮಹಾರಾಜರು ದಕ್ಷ, ನಿಷ್ಠಾವಂತ, ಜನಾನುರಾಗಿ ಮಹಾರಾಜ ರಾಗಿ ಆಡಳಿತ ನಡೆಸಿದ್ದಾರೆ. 1956ರ ನಂತರ ಭಾಷಾವಾರು ವಿಂಗಡಣೆಯಾದಾಗ ನಮ್ಮ ರಾಜ್ಯಕ್ಕೆ ಜಯಚಾಮರಾಜೇಂದ್ರ ಒಡೆಯರ್ ರವರು ರಾಜ್ಯದ ಅಭಿವೃದ್ಧಿಗೆ ಸಂಪೂರ್ಣ ವಾದ ಕಾಣಿಕೆ ನೀಡಿದ್ದಾರೆ. ಆದ್ದರಿಂದ ಮೈಸೂರಿನ ವಿಮಾನ ನಿಲ್ದಾಣಕ್ಕೆ ಮಹಾ ರಾಜರ ಹೆಸರಿಡುವುದು ಸೂಕ್ತವಾಗಿದೆ ಎಂದು ಹೇಳಿದ್ದಾರೆ. ತಮ್ಮ ಆಡಳಿತದ ಅವಧಿಯಲ್ಲಿ ಕಲೆ ಮತ್ತು ಸಂಸ್ಕøತಿಯ ತವರೂರನ್ನಾಗಿ ಕರ್ನಾಟಕವನ್ನು ಬಿಂಬಿಸಿದ ಜಯ ಚಾಮ ರಾಜೇಂದ್ರ ಒಡೆಯರ್ ಅವರು ಭಾರತವು ಸ್ವಾತಂತ್ರ್ಯಗೊಂಡಾಗ ತಮ್ಮ ರಾಜ್ಯವನ್ನು ಭಾರತ ಸರ್ಕಾರದೊಂದಿಗೆ ವಿಲೀನಗೊಳಿಸಿ ದಂತಹ ಮಹಾರಾಜರು ಹಾಗೂ 1950-56 ರವರೆಗೆ ರಾಜ್ಯಪಾಲರಾಗಿ ರಾಜ್ಯಕ್ಕೆ ರಾಜಕೀಯ ಮಾರ್ಗದರ್ಶನ ನೀಡಿರುವ ಒಬ್ಬ ಮುತ್ಸದ್ದಿ. ಹಾಗೆಯೇ ಕಲೆ, ಸಾಹಿತ್ಯ, ಕ್ರೀಡೆ ಹಾಗೂ ರಾಜಕೀಯ ಈ ಎಲ್ಲಾ ಕ್ಷೇತ್ರಗಳಿಗೂ ಸಮಾನ ಆಸಕ್ತಿ ಹೊಂದಿದಂತಹ ಮಹಾರಾಜರಾ ಗಿದ್ದು, ಆದ್ದರಿಂದ ಮೈಸೂರಿನ ವಿಮಾನ ನಿಲ್ದಾಣಕ್ಕೆ ಜಯ ಚಾಮರಾಜ ಒಡೆಯರ್ ಹೆಸರಿಡುವುದು ಸೂಕ್ತವೆಂದು ಒತ್ತಾಯಿಸಿದ್ದಾರೆ.

Translate »