ಸ್ವಚ್ಛ ಭಾರತದ ಕನಸು ಪ್ರಧಾನಿ ಮೋದಿಯವರಿಂದ ಸಾಧ್ಯ
ಮೈಸೂರು

ಸ್ವಚ್ಛ ಭಾರತದ ಕನಸು ಪ್ರಧಾನಿ ಮೋದಿಯವರಿಂದ ಸಾಧ್ಯ

October 3, 2018

ತಿ.ನರಸೀಪುರ:  ಅಹಿಂಸಾ ವಾದಿ ಮಹಾತ್ಮ ಗಾಂಧೀಜಿ ಯವರ ಸ್ವಚ್ಛ ಭಾರತದ ಕನಸನ್ನು ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯ ರೂಪಕ್ಕೆ ತರುತ್ತಿದ್ದು, ದೇಶವಲ್ಲದೆ ವಿಶ್ವದೆಲ್ಲೆಡೆ ಮೋದಿಯವರಿಗೆ ಅಭೂತಪೂರ್ವ ಪ್ರಶಂಸೆ ವ್ಯಕ್ತವಾಗಿದೆ ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್ ಹೇಳಿದರು.

ಪಟ್ಟಣದ ವೀರಶೈವ ವಿದ್ಯಾರ್ಥಿ ನಿಲಯ ದಲ್ಲಿ ಮಂಗಳವಾರ ಬಿಜೆಪಿ ಪಕ್ಷದಿಂದ ಹಮ್ಮಿಕೊಂಡಿದ್ದ ಮಹಾತ್ಮ ಗಾಂದಿಜೀ ಜಯಂತಿ ಕಾರ್ಯಕ್ರಮದಲ್ಲಿ ಪುರಸಭೆಯ ನೂತನ ಸದಸ್ಯರು ಹಾಗೂ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನೂತನ ನಿರ್ದೇಶಕರನ್ನು ಸನ್ಮಾನಿಸಿ ಮಾತನಾಡಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರಲ್ಲಿದ್ದಂತಹ ಭಿನ್ನಾ ಭಿಪ್ರಾಯದಿಂದಾಗಿ ಕೊನೆ ಘಳಿಗೆಯಲ್ಲಿ ಗೊಂದಲವಾಗಿ ಪಕ್ಷ ಸೋಲನ್ನು ಅನು ಭವಿಸುಂತಾಯಿತು. ಆಗಿರುವ ಕಹಿ ಘಟನೆ ಗಳನ್ನು ಬದಿಗೆ ಸರಿಸಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಪಕ್ಷದ ಎಲ್ಲಾ ಕಾರ್ಯಕರ್ತರು ಸಂಘಟನೆ ಯನ್ನು ಬಲಪಡಿಸಬೇಕು ಎಂದರು.

ಜಿ.ಪಂ ಉಪಾಧ್ಯಕ್ಷ ಕೈಯಂಬಳ್ಳಿ ಜಿ. ನಟರಾಜು ಮಾತನಾಡಿ, ಮಹಾತ್ಮ ಗಾಂಧೀಜಿ ಅವರ ತತ್ವ ಆದರ್ಶಗಳನ್ನು ಬಿಜೆಪಿ ಕಾರ್ಯಕರ್ತರು ಜೀವನದಲ್ಲಿ ಅಳ ವಡಿಸಿಕೊಂಡು, ರಾಜಕಾರಣಕ್ಕೆ ಬಳಕೆ ಮಾಡಿಕೊಳ್ಳಬೇಕು. ರಾಜಕೀಯ ಪಕ್ಷಗಳಲ್ಲಿ ಭಿನ್ನಾಭಿಪ್ರಾಯಗಳು ಸಹಜವಾಗಿದ್ದರಿಂದ ಬದಿಗೊತ್ತಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲುವಿಗೆ ಕಾರ್ಯತಂತ್ರ ರೂಪಿಸಲು ಗಮನ ನೀಡಬೇಕು ಎಂದು ಸಲಹೆ ನೀಡಿದರು.

ಪುರಸಭೆಯ ನೂತನ ಸದಸ್ಯರಾದ ರೂಪಾಶ್ರೀ ಪರಮೇಶ್, ಎಸ್.ಕೆ.ಕಿರಣ್, ಆರ್.ಅರ್ಜುನ್ ಹಾಗೂ ತಾಲೂಕು ವ್ಯವಸಾ ಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆ ಗೊಂಡ ಹೆಳವರಹುಂಡಿ ಪಿ.ನಟರಾಜು ಹಾಗೂ ಎಂ.ಎಂ.ಜಯಣ್ಣ ಅವರನ್ನು ಸನ್ಮಾನಿಸಲಾಯಿತು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕರೋಹಟ್ಟಿ ಮಹದೇವಯ್ಯ, ಕ್ಷೇತ್ರಾಧ್ಯಕ್ಷ ಹೆಚ್.ಎಂ.ಪರಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಬಸವರಾಜು, ತಾ.ಪಂ ಸದಸ್ಯ ರತ್ನರಾಜ್, ಮಾಜಿ ಕೆ.ಜಿ.ವೀರಣ್ಣ, ತಾತಪ್ಪ(ನಾಗರಾಜು), ಆರ್ಥಿಕ ಪ್ರಕೋಷ್ಠ ಜಿಲ್ಲಾ ಸಂಚಾಲಕ ಎಸ್.ಬಿ.ಸುರೇಶ, ಟೌನ್ ಅಧ್ಯಕ್ಷ ಬಿ.ವೀರಭದ್ರಪ್ಪ, ಜಿಲ್ಲಾ ಎಸ್ಟಿ ಜಿಲ್ಲಾ ಧ್ಯಕ್ಷ ಎ.ಎನ್.ರಂಗೂನಾಯ್ಕ, ಮುಖಂಡರಾದ ದಯಾನಂದ್ ಪಟೇಲ್, ಬೆನಕನಹಳ್ಳಿ ವಿಜಯ್‍ಕುಮಾರ್, ಹೆಗ್ಗೂರು ರಂಗರಾಜು, ರಾಜಣ್ಣ, ಮಹೇಶ ನಾಯಕ, ಕಾಳೇಗೌಡ, ಸಿದ್ಧೇಶ್ ಹಾಗೂ ಇನ್ನಿತರರು ಹಾಜರಿದ್ದರು.

ಪುರಸಭೆ ಸೋಲಿನ ಗದ್ದಲ
‘ಕಳೆದ ಪುರಸಭೆ ಚುನಾವಣೆಯಲ್ಲಿನ ಸೋಲಿನ ಆತ್ಮಾವ ಲೋಕನವನ್ನು ಮಾಡುವಂತೆ ಪರಾಜಿತ ಅಭ್ಯರ್ಥಿ, ಟೌನ್ ಅಧ್ಯಕ್ಷ ಬಿ.ವೀರಭದ್ರಪ್ಪ ಅವರು ಪ್ರಸ್ತಾಪಿಸಿದ್ದ ಹಿನ್ನೆಲೆಯಲ್ಲಿ ಗಾಂಧಿಜೀ ಜಯಂತಿ ಕಾರ್ಯಕ್ರಮದಲ್ಲಿ ಕೆಲಕಾಲ ಗದ್ದಲಕ್ಕೆ ಕಾರಣವಾಯಿತು. ಪುರಸಭೆಯ ನೂತನ ಸದಸ್ಯರು ಹಾಗೂ ಟಿಎಪಿಸಿಎಂಎಸ್‍ನ ನೂತನ ನಿರ್ದೇಶಕರನ್ನು ಸನ್ಮಾನಿಸಿದ ನಂತರ ಮಧ್ಯೆಪ್ರವೇಶಿಸಿದ ಬಿ.ವೀರಭದ್ರಪ್ಪ ಸೋಲಿನ ಆತ್ಮಾವ ಲೋಕನವನ್ನು ಮಾಡಿ, ಸೋಲಿಸಿದವರನ್ನು ವೇದಿಕೆಯಲ್ಲಿ ಕುಳ್ಳಿರಿಸಿದ್ದೀರಿ ಎಂದು ಮುಖಂಡರ ವರ್ತನೆಗೆ ಸಿಡಿದೆದ್ದರಿಂದ ಕ್ಷೇತ್ರಾಧ್ಯಕ್ಷ ಹೆಚ್.ಎಂ.ಪರಶಿವಮೂರ್ತಿ ಹಾಗೂ ಟಿಎಪಿಸಿಎಂಎಸ್ ನಿರ್ದೇಶಕ ಪಿ.ನಟರಾಜು ಅಸಮಧಾನ ವ್ಯಕ್ತಪಡಿಸಿ ಮುಗಿ ಬಿದ್ದುದ್ದರಿಂದ ಸಭೆಯನ್ನು ಮೂವರ ನಡುವೆಯೂ ಮಾತಿನ ಚಕಮಕಿ ನಡೆಯಿತು. ಆವೇಶಭರಿತರಾದ ಪಿ.ನಟರಾಜು ಕೈ ಕೈ ಮಿಲಾಯಿಸಲು ಮುಂದಾದರು. ಪರಿಸ್ಥಿತಿ ವಿಕೋಪಕ್ಕೆ ಹೋಗು ವುದನ್ನು ಅರಿತ ಮುಖಂಡರು ಹಾಗೂ ಕಾರ್ಯಕರ್ತರು ಮೂವರನ್ನು ಸಮಾಧಾನಪಡಿಸಿ ಗದ್ದಲಕ್ಕೆ ತೆರೆ ಎಳೆದರು. ಸಭೆ ಮುಂದುವರೆದರೂ ಬೇಸರಗೊಂಡಿದ್ದ ವೀರಭದ್ರಪ್ಪ ಸಭೆಯಿಂದ ನಿರ್ಗಮಿಸಿದರು.

Translate »