ಜ್ಞಾನದಿಂದ ಮಾತ್ರವೇ ಸಮಾಜದ ವಿಕಾಸ
ಮೈಸೂರು

ಜ್ಞಾನದಿಂದ ಮಾತ್ರವೇ ಸಮಾಜದ ವಿಕಾಸ

March 23, 2019

ಮೈಸೂರು: ಜ್ಞಾನದ ಬಲದಿಂದ ಮಾತ್ರ ಸಮಾಜದ ವಿಕಾಸವೇ ಹೊರತು ಹಣ-ಅಧಿಕಾರದಿಂದಲ್ಲ ಎಂದು ನಿವೃತ್ತ ಪ್ರಾಂಶುಪಾಲ, ಅಂಕಣ ಕಾರ ಹಾಗೂ ವಾಗ್ಮಿಗಳೂ ಆದ ಪ್ರೊ. ಎಂ.ಕೃಷ್ಣೇಗೌಡ ಹೇಳಿದರು.

ಮೈಸೂರಿನ ವಾಲ್ಮೀಕಿ ರಸ್ತೆಯ ಮಹಾ ರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವ ಹಣಾ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿ ಕೊಂಡಿದ್ದ 2018-19ನೇ ಸಾಲಿನ ಸಾಂಸ್ಕøತಿಕ, ಎನ್‍ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಚಟು ವಟಿಕೆಗಳ ಸಮಾರೋಪ ಸಮಾರಂಭ ದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಮಾನವ ಕುಲದ ಪ್ರಗತಿಗೆ ಬೇಕಿ ರುವುದು ಶಿಕ್ಷಣ, ಜ್ಞಾನ ಹಾಗೂ ಬೌದ್ಧಿಕ ಸಂಪತ್ತೇ ಹೊರತು, ಹಣ-ಅಂತಸ್ತು ಅಲ್ಲ ಎಂದು ತಿಳಿಸಿದರು.

ಒಂದು ಕಾಲಕ್ಕೆ ಕೇವಲ ಮೂರೂವರೆ ಕೋಟಿ ಜನಸಂಖ್ಯೆ ಹೊಂದಿದ್ದ ಇಂಗ್ಲೆಂಡ್, ಪ್ರಪಂಚವನ್ನೇ ಆಳ್ವಿಕೆ ಮಾಡಿದ್ದು ಜ್ಞಾನದ ಬಲದಿಂದಲೇ ಹೊರತು ಹಣ ಬಲದಿಂ ದಲ್ಲ. 170 ವರ್ಷಗಳ ಹಿಂದೆಯೇ `ಲಂಡನ್ ಟ್ಯೂಬ್ ಲೈನ್’ ಎಂಬ ಸಾರ್ವಜನಿಕ ಪ್ರಯಾಣ ವ್ಯವಸ್ಥೆಯನ್ನು ಇಂಗ್ಲೆಂಡ್‍ನಲ್ಲಿ ಮಾಡಿದ್ದರು. ನೆಲದ ಆಳದಲ್ಲಿ ಪ್ರಯಾಣ ಮಾಡುವ ಈ ವ್ಯವಸ್ಥೆ ಅಂದೇ ಅಲ್ಲಿತ್ತು. ಆದರೆ ಇತ್ತೀಚೆಗಷ್ಟೇ ನಮ್ಮಲ್ಲಿ ಎತ್ತಿನ ಗಾಡಿಗೆ ಟೈರ್ ಕಂಡುಕೊಂಡಿದ್ದೇವೆ ಎಂದರು.

`ಭಾರತದ ಶೇ.10ರಷ್ಟು ಜನರಿಗೆ ವಿದ್ಯೆ ಕಲಿಸಲಾಗದ ನಿಮಗೆ ಸ್ವಾತಂತ್ರ್ಯ ಏಕೆ ಬೇಕು’ ಎಂದು ಇಂಗ್ಲೆಂಡ್‍ನ ಪ್ರಧಾನಿ ವಿನ್‍ಸ್ಟನ್ ಚರ್ಚಿಲ್ ಅಂದು ಸ್ವಾತಂತ್ರ್ಯಕ್ಕಾಗಿ ಶ್ರಮಿಸು ತ್ತಿದ್ದ ಗಾಂಧಿಯವರನ್ನು ರೇಗಿಸುತ್ತಿದ್ದರು. ಸ್ವಾತಂತ್ರ್ಯ ಲಭಿಸಿದಾಗ ನಮ್ಮ ದೇಶದ ಹೆಣ್ಣು ಮಕ್ಕಳ ವಿದ್ಯಾಬ್ಯಾಸದ ಪ್ರಮಾಣ ಶೇ.5 ಕ್ಕಿಂತಲೂ ಕಡಿಮೆ. ಆದರೆ ಈಗ ದೇಶದ ಹೆಣ್ಣು ಮಕ್ಕಳು ಅಕ್ಷರ ಪ್ರಪಂಚಕ್ಕೆ ತೆರೆದು ಕೊಂಡಿದ್ದಾರೆ. ಉನ್ನತ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ವಿವರಿಸಿದರು.

ನಾವು ಚಿಕ್ಕವರಿದ್ದಾಗ ನಮ್ಮೂರಲ್ಲಿ ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿ ಎಂದು ಶಿಕ್ಷಕರು ಮನೆ ಬಾಗಿಲಿಗೆ ಬರುತ್ತಿದ್ದರು. ಆಗ ಬಹು ತೇಕ ಮಂದಿ `ಗದ್ದೆ-ತೋಟ ನೀವು ನೋಡುತ್ತೀರಾ?’ ಎಂದು ಶಿಕ್ಷಕರಿಗೆ ಕಟು ಶಬ್ಧಗಳಲ್ಲಿ ನಿಂದಿಸುತ್ತಿದ್ದರು. ಕೆಲವರು ತಮ್ಮ ಮಕ್ಕಳಲ್ಲಿ ಯಾರು ಸೋಮಾರಿ ಎಂದು ಅಲೋಚಿಸಿ ಅಂತಹವರನ್ನು ಶಾಲೆಗೆ ಕರೆದು ಕೊಂಡು ಹೋಗಲು ಹೇಳುತ್ತಿದ್ದರು. ಆ ರೀತಿ ಸೋಮಾರಿ ಸಾಲಿನಲ್ಲಿ ಶಿಕ್ಷಣ ಪಡೆದವರಲ್ಲಿ ನಾನೂ ಒಬ್ಬ ಎಂದು ನಗುವಿನ ಅಲೆ ಏಳಿಸಿದ ಅವರು, ಈ ರೀತಿ ಸನ್ನಿವೇಶ ಕಳೆದು 50 ವರ್ಷ ಕಳೆದಿವೆ. ಕೂಲಿ ಕೆಲಸ ಮಾಡು ವವರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸು ವಷ್ಟು ಪ್ರಜ್ಞಾನವಂತರಾಗಿದ್ದಾರೆ. ಅದಾಗ್ಯೂ ಶಿಕ್ಷಣದಿಂದ ದೂರ ಉಳಿದಿರುವ ಮಕ್ಕಳೂ ಇದ್ದಾರೆ ಎಂದು ವಿಷಾದಿಸಿದರು.

ತಂತ್ರಜ್ಞಾನದ ಅದ್ಭುತ: ತಂತ್ರಜ್ಞಾನದ ಪ್ರಗತಿಯಿಂದಾಗಿ ಇಂದಿನ ತಲೆಮಾರಿ ನವರು ಅದ್ಭುತ ಲೋಕ ನೋಡುತ್ತಿದ್ದಾರೆ. ನಾವು ಬಳಸುವ ಮೊಬೈಲ್‍ಗಳಲ್ಲಿ ಇಷ್ಟೊಂದು ವೈಶಿಷ್ಟ್ಯಗಳು ಇರುತ್ತವೆ ಎಂದು ಈ ಹಿಂದೆ ವಿಜ್ಞಾನಿಗಳಿಗೇ ಗೊತ್ತಿರಲಿಲ್ಲ. ಒಂದು ಅಂದಾ ಜಿನ ಪ್ರಕಾರ 57 ಸಾವಿರ ಮೊಬೈಲ್ ಆ್ಯಪ್‍ಗಳು ಇವೆಯಂತೆ. ಅಸಾಧ್ಯವಾದುದು ಸಾಧ್ಯ ಮಾಡಬಲ್ಲ ರೋಚಕ ಆ್ಯಪ್‍ಗಳಿವೆ. ಕೇವಲ 60 ವರ್ಷಗಳಿಂದಿಚೆಗೆ ವಿಜ್ಞಾನ-ತಂತ್ರಜ್ಞಾನ ವ್ಯಾಪಕ ಬೆಳವಣಿಗೆ ಕಂಡಿದೆ. ಶಿಕ್ಷಕರು ಬೋಧನೆ ಮಾಡುವ ಅಗತ್ಯವೇ ಇಲ್ಲ ಎಂಬ ವಾದವೂ ಹುಟ್ಟಿಕೊಂಡಿದೆ. ಅಷ್ಟರ ಮಟ್ಟಿಗೆ ತಂತ್ರಜ್ಞಾನ ಆವಿಷ್ಕಾರ ಗೊಂಡಿದ್ದು, ಮುಂದಿನ 10 ವರ್ಷಗಳಲ್ಲಿ ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ಕೊಠಡಿ ವ್ಯವಸ್ಥೆಯೇ ಬೇಕಿಲ್ಲದೇ ಹೋಗುವುದೇನೊ. ಒಟ್ಟಾರೆ ಊಹೆಯನ್ನೇ ಮಾಡಲಾಗದ ಕಾಲವಿದು ಎಂದು ಪ್ರೊ. ಕೃಷ್ಣೇಗೌಡ ತಿಳಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಅಣ್ಣೇಗೌಡ, ಪ್ರಾಧ್ಯಾಪಕ ಡಾ.ಚನ್ನ ಬಸವೇಗೌಡ, ಎನ್‍ಸಿಸಿ ಅಧಿಕಾರಿ ಲೆಫ್ಟಿ ನೆಂಟ್ ಡಾ.ಎಂ.ಸಿ.ಶಿವಕುಮಾರ್, ಸಾಂಸ್ಕøತಿಕ ವೇದಿಕೆ ಖಜಾಂಚಿ ಪ್ರೊ. ಎಸ್.ಜೆ.ಪುನೀತಾ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಚಾಲಕಿ ಪ್ರೊ.ಲತಾ, ಸಾಂಸ್ಕøತಿಕ ವೇದಿಕೆ ಅಧ್ಯಕ್ಷೆ ಸಿ.ಫಾತಿಮಾ, ಕಾರ್ಯ ದರ್ಶಿ ಹೆಚ್.ವಾಣಿ ಸೇರಿದಂತೆ ಮತ್ತಿ ತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Translate »