ಮೈಸೂರು, ಆ.19(ಪಿಎಂ)- ಸಂಶೋ ಧನೆಗಳು ರಾಷ್ಟ್ರದ ಆರ್ಥಿಕ ಪರಿಸ್ಥಿತಿ ಸುಧಾ ರಣೆಗೆ ಪೂರಕವಾಗುವ ಜೊತೆಗೆ ಸಮಾ ಜಕ್ಕೆ ಪ್ರಯೋಜನಕಾರಿ ಆಗಿರಬೇಕು ಎಂದು ರಾಜ್ಯ ಯೋಜನೆ ಅನುಷ್ಠಾನ ಘಟಕದ (ಎಸ್‍ಪಿಐಯು) ನೋಡಲ್ ಅಧಿಕಾರಿ ಪ್ರೊ.ಮನೋಹರ್ ನಾಯಕ್ ತಿಳಿಸಿದರು.
ಮಂಡ್ಯದ ಪಿಇಎಸ್ ಇಂಜಿನಿಯರಿಂಗ್ ಕಾಲೇಜು, ಮೈಸೂರಿನ ಎಸ್‍ಜೆಸಿಇ, ಎನ್‍ಐಇ ಹಾಗೂ ಹಾಸನದ ಎಂಸಿಇ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ವಿಶ್ವಬ್ಯಾಂಕಿನ ತಾಂತ್ರಿಕ ಶಿಕ್ಷಣ ಗುಣಮಟ್ಟ ಸುಧಾರಣಾ ಕಾರ್ಯಕ್ರಮದ ಹಂತ-3ರಡಿಯಲ್ಲಿ (ಟೆಕ್ಯೂಪ್-3) ಮೈಸೂರಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ `ಸಂಶೋಧನಾ ಸಹಯೋಗ’ ಕುರಿತು ಹಮ್ಮಿ ಕೊಂಡಿರುವ ಎರಡು ದಿನಗಳ ವಿಚಾರ ಸಂಕಿರಣವನ್ನು ಸೋಮವಾರ ಉದ್ಘಾ ಟಿಸಿ ಅವರು ಮಾತನಾಡಿದರು.
ಪ್ರಯೋಜನಕಾರಿ ಹಾಗೂ ಆಸಕ್ತಿ ಮೂಡಿಸುವ ಹಿನ್ನೆಲೆಯಲ್ಲಿ ಸಂಶೋಧನೆ ಗಳು ಮೂಡಿಬರಬೇಕು. ಸರಳ ಭಾಷಾ ಪ್ರಯೋಗ ಸಂಶೋಧನಾ ಲೇಖನದಲ್ಲಿ ಇದ್ದಲ್ಲಿ ಜನಸಾಮಾನ್ಯರು ಅರ್ಥೈಸಿಕೊಳ್ಳಲು ಅನುಕೂಲ. ಈ ನಿಟ್ಟಿನಲ್ಲಿ ಸಂಶೋಧನೆ ಪ್ರಕ್ರಿಯೆಗಳು ನಡೆಯುವುದು ಅಗತ್ಯ ಎಂದರು.
ಮುದ್ರಣ ಮಾಧ್ಯಮ ಹಾಗೂ ವಿದ್ಯು ನ್ಮಾನ ಮಾಧ್ಯಮದಲ್ಲಿ ವಿಜ್ಞಾನ-ತಂತ್ರಜ್ಞಾನ ಹಾಗೂ ತಾಂತ್ರಿಕತೆಯ ಕಾರ್ಯಕ್ರಮಗಳಿ ಗಿಂತ ಹೆಚ್ಚಾಗಿ ಅಪರಾಧ ಸುದ್ದಿಗಳಿಗೆ ಹೆಚ್ಚು ಆಸಕ್ತಿ ಸಮಾಜದಿಂದ ವ್ಯಕ್ತವಾಗುತ್ತಿದೆ. ಆದರೆ ಈ ಸನ್ನಿವೇಶ ಬದಲಾಗಬೇಕು. ವಿಜ್ಞಾನ-ತಂತ್ರಜ್ಞಾನ ಹಾಗೂ ತಾಂತ್ರಿ ಕತೆಯ ಕಾರ್ಯಕ್ರಮಗಳ ಬಗ್ಗೆ ಸಮಾಜ ದಲ್ಲಿ ಆಸಕ್ತಿ ಬೆಳೆಸಬೇಕು ಎಂದರು.
ಮಂಡ್ಯದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ಡಾ.ರಾಮಲಿಂಗಯ್ಯ ಮಾತನಾಡಿ, ಅಭಿವೃದ್ಧಿ ಹೆಸರಿನಲ್ಲಿ ಮಾನವ ಪ್ರಕೃತಿ ವಿರುದ್ಧ ನಡೆದ ಹಿನ್ನೆಲೆಯಲ್ಲಿ ಇಂದು ನೆರೆ ಹಾವಳಿ ನಮ್ಮನ್ನು ಆವರಿಸಿಕೊಂಡಿದೆ. ಹೀಗಾಗಿ ನಮ್ಮ ಸಂಶೋಧನೆಗಳು ಪ್ರಕೃತಿಗೆ ಮಾರಕವಾಗದಂತೆ ಇರಬೇಕು. ಅದಕ್ಕಾಗಿ ಅತ್ಯಂತ ಪರಿಣಿತ ಅಂಶಗಳ ನೆಲೆಗಟ್ಟಿನಲ್ಲಿ ಸಂಶೋಧನೆಗಳು ಹೊರಹೊಮ್ಮಬೇಕು ಎಂದು ಸಲಹೆ ನೀಡಿದರು.
ಮಂಡ್ಯದ ಪೀಪಲ್ಸ್ ಎಜುಕೇಷನ್ ಟ್ರಸ್ಟ್‍ನ ಅಧ್ಯಕ್ಷರೂ ಆದ ಮಾಜಿ ಶಾಸಕ, ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಹೆಚ್.ಡಿ. ಚೌಡಯ್ಯ ಮಾತನಾಡಿ, ದೇಶದ ತಾಂತ್ರಿಕ ಶಿಕ್ಷಣಕ್ಕೆ ನೂರು ವರ್ಷದ ಇತಿಹಾಸವಿದೆ. ಕರ್ನಾಟಕದ ಹಳೇ ಮೈಸೂರು ಪ್ರಾಂತ್ಯ ದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲೇ ಕೆಲ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಸ್ಥಾಪನೆಗೊಂಡು ಸೇವಾ ಮನೋಭಾವದಲ್ಲಿ ಶಿಕ್ಷಣ ನೀಡುತ್ತಿದ್ದವು. ಪ್ರಸ್ತುತ ದೇಶದ ತಾಂತ್ರಿಕ ಶಿಕ್ಷಣದ ಎದುರು ಗುಣಮಟ್ಟದ ಶಿಕ್ಷಣ ನೀಡುವುದೂ ಸೇರಿ ದಂತೆ ಅನೇಕ ಸವಾಲುಗಳಿವೆ ಎಂದರು.
ಟೆಕ್ಯೂಪ್ ಕಾರ್ಯಕ್ರಮದ ಮೂಲಕ ವಿಶ್ವಬ್ಯಾಂಕ್‍ನಿಂದ ಅನುದಾನ ಪಡೆಯುತ್ತಿ ರುವ ನಮ್ಮ ದೇಶದ ತಾಂತ್ರಿಕ ಶಿಕ್ಷಣ ಸಂಸ್ಥೆ ಗಳು ಜಾಗತಿಕ ಮಟ್ಟದಲ್ಲಿ ಸ್ಥಾನ ಪಡೆ ಯುವ ಹಂತದತ್ತ ಸಾಗುತ್ತಿವೆ. ಟೆಕ್ಯೂಪ್ ಹಂತ 3ರ ಅವಧಿ 2020ರ ಸೆಪ್ಟಂಬರ್‍ಗೆ ಪೂರ್ಣಗೊಳ್ಳಲಿದ್ದು, ಇದನ್ನು ವಿಸ್ತರಿ ಸುವ ನಿಟ್ಟಿನಲ್ಲಿ ಸರ್ಕಾರಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಇದರಿಂದ ತಾಂತ್ರಿಕ ಶಿಕ್ಷಣದ ಗುಣಮಟ್ಟ ವೃದ್ಧಿಸಲು ಸಾಧ್ಯ ವಾಗಲಿದೆ ಎಂದು ತಿಳಿಸಿದರು.
ಚೆನ್ನೈನ ಐಐಟಿ ಮದ್ರಾಸ್‍ನ ನಿವೃತ್ತ ಪ್ರಾಧ್ಯಾಪಕ ಪ್ರೊ.ವಾಸುದೇವ್ ರಾಧಾ ಕೃಷ್ಣನ್, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಡಾ.ಡಿ.ಕೆ. ಸುಬ್ರಹ್ಮಣಿಯನ್, ಪಿಇಎಸ್ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಬಿ.ಎಸ್.ಶಿವ ಕುಮಾರ, ಬಿ.ದಿನೇಶ್ ಪ್ರಭು ಮತ್ತಿತರರು ಹಾಜರಿದ್ದರು