ಉದ್ರಿಕ್ತ ಗುಂಪಿನಿಂದ ಸಿಎಂ ಅರಸು ಅವರನ್ನು ರಕ್ಷಿಸಿದ್ದಕ್ಕೆ ಸೂಕ್ತ ಗೌರವ ಸಲ್ಲಲಿ
ಮೈಸೂರು

ಉದ್ರಿಕ್ತ ಗುಂಪಿನಿಂದ ಸಿಎಂ ಅರಸು ಅವರನ್ನು ರಕ್ಷಿಸಿದ್ದಕ್ಕೆ ಸೂಕ್ತ ಗೌರವ ಸಲ್ಲಲಿ

August 20, 2019

ಮೈಸೂರು, ಆ.19-ಮೈಸೂರು ಜಿಲ್ಲಾ ಡಳಿತವು ಆ.20ರಂದು ನಗರದ ಕಲಾ ಮಂದಿರದಲ್ಲಿ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರ ಜನ್ಮದಿನ ಆಚರಣೆಗೆ ಮುಂದಾಗಿದೆ. ಇದೇ ವೇಳೆ, ಬಲು ಸಂದಿಗ್ಧ ಸನ್ನಿವೇಶದಲ್ಲಿ ಅರಸು ಅವರ ಪ್ರಾಣ ರಕ್ಷಣೆ ಮಾಡಿದ್ದ ಅಂದಿನ ಡಿವೈಎಸ್‍ಪಿ ಕೆ.ಎಸ್.ಸದಾನಂದ ಅವ ರನ್ನೂ ಸನ್ಮಾನಿಸಿ ಎಂದು ಮಾಜಿ ಡಿವೈ ಎಸ್‍ಪಿ ಅವರ ಅಭಿಮಾನಿಗಳು ಜಿಲ್ಲಾಡ ಳಿತವನ್ನು ಕೋರಿದ್ದಾರೆ. ಇದೇ ವಿಚಾರ ವಾಗಿ ಕೆ.ಎಸ್.ಸದಾನಂದ ಗೌಡ ಅವರೂ ಸಹ ಜಿಲ್ಲಾಧಿಕಾರಿಗೆ ಆ.16ರಂದು ಪತ್ರ ಬರೆದು ಮನವಿ ಮಾಡಿದ್ದಾರೆ.

ಇದೇ ವಿಚಾರವಾಗಿ `ಮೈಸೂರು ಮಿತ್ರ’ನ ಜತೆ ಶುಕ್ರವಾರ ಮಾತನಾಡಿದ ಕೆ.ಎಸ್. ಸದಾನಂದ ಅವರು , 2015ರಲ್ಲಿ ದೇವ ರಾಜ ಅರಸು ಅವರ ಶತಮಾನೋತ್ಸವ ಆಚರಣೆ ವೇಳೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ನನಗೆ ಈ ಸಂಬಂಧ ಪ್ರಶಂಸಾ ಪತ್ರವನ್ನೂ ನೀಡಿದೆ ಎಂದು ತಿಳಿಸಿದ್ದಾರೆ.

ಸದಾನಂದ ಅವರ ಹೇಳಿಕೆ ಮತ್ತು ದಾಖಲೆಗಳ ಪ್ರಕಾರ, 1978ರ ಫೆ.18 ರಂದು ಅಂದು ರಾಜ್ಯದ ಮುಖ್ಯಮಂತ್ರಿ ಯಾಗಿದ್ದ ಡಿ.ದೇವರಾಜ ಅರಸು ಅವರು ಮೈಸೂರಿನತ್ತ ಬರುತ್ತಿದ್ದಾಗ ಅವರ ವಾಹನಕ್ಕೆ ಮಂಡ್ಯದಲ್ಲಿ ರೈತ ಹೋರಾಟ ಗಾರರು ತಡೆ ಒಡ್ಡಿದರು. ವರುಣಾ ನಾಲೆ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ಹೊರ ಡಿಸಿದ ಆದೇಶವನ್ನು ತಕ್ಷಣ ಹಿಂಪಡೆಯ ಬೇಕು ಎಂದು ಒತ್ತಾಯಿಸಿದರು. ಏಕೆಂ ದರೆ ಆಗ ಕೆಆರ್‍ಎಸ್ ಅಣೆಕಟ್ಟೆ ನೀರಿ ನಿಂದ ಮಂಡ್ಯ ಜಿಲ್ಲೆ ಕೃಷಿಕರು ವರ್ಷಕ್ಕೆ 3 ಬೆಳೆಗಳನ್ನು ತೆಗೆಯುತ್ತಿದ್ದರು. ವರುಣಾ ನಾಲೆ ನಿರ್ಮಾಣವಾದರೆ ಮೂರು ಬೆಳೆ ತೆಗೆಯುವುದಕ್ಕೆ ತೊಂದರೆ ಆಗುತ್ತದೆ ಎಂಬುದು ಮಂಡ್ಯ ರೈತರ ವಾದವಾಗಿತ್ತು.

ಅಂದು ಮಂಡ್ಯದಲ್ಲಿ ಚಿರಂಜೀವಿ ಸಿಂಗ್ ಜಿಲ್ಲಾಧಿಕಾರಿಯಾಗಿದ್ದರೆ, ರಾಜೆನ್ ಗುಪ್ತೆ ಎಸ್‍ಪಿ ಆಗಿದ್ದರು. ಮುಖ್ಯಮಂತ್ರಿಗಳ ಕಾರು ಮತ್ತು ಬೆಂಗಾವಲು ವಾಹನಗಳನ್ನೇ ತಡೆದು ನಿಲ್ಲಿಸಿದ್ದ ಉದ್ರಿಕ್ತ ರೈತ ಹೋರಾಟಗಾರರ ಗುಂಪನ್ನು ಚದುರಿಸಲು, ಪರಿಸ್ಥಿತಿ ನಿಯಂ ತ್ರಿಸಲು ಕಷ್ಟವಾಗಿದೆ. ಹಾಗಾಗಿ, ಹೆಚ್ಚುವರಿ ಪೊಲೀಸ್ ಪಡೆಯನ್ನು ಸ್ಥಳಕ್ಕೆ ತಕ್ಷಣ ರವಾನಿಸಿ. ಮುಖ್ಯಮಂತ್ರಿಗಳ ವಾಹನ ಸುರ ಕ್ಷಿತವಾಗಿ ಮುಂದೆ ಸಾಗಲು ಅವಕಾಶ ವಾಗುವಂತೆ ಮಾಡಿ ಎಂದು ಆಗಿನ ಮೈಸೂರು ವಲಯದ ಡಿಐಜಿ ಕೆ.ಯು. ಬಾಲಕೃಷ್ಣರಾವ್ ಅವರಲ್ಲಿ ಡಿಸಿ, ಎಸ್‍ಪಿ ಇಬ್ಬರೂ ಮನವಿ ಮಾಡಿದರು. ಆಗ ಡಿಐಜಿ ಅವರು ಡಿವೈಎಸ್‍ಪಿ ಆಗಿದ್ದ ನನ್ನ ನೇತೃತ್ವದಲ್ಲಿ ಕೆಎಸ್‍ಆರ್‍ಪಿಯ ಒಂದು ತುಕಡಿಯನ್ನು ಮಂಡ್ಯಕ್ಕೆ ಕಳುಹಿಸಿ ಕೊಟ್ಟರು. ಕೆಎಸ್‍ಆರ್‍ಪಿ ವಾಹನ ನೋಡು ತ್ತಿದ್ದಂತೆಯೇ ಉದ್ರಿಕ್ತ ಗುಂಪು ಕಲ್ಲೆಸೆಯ ಲಾರಂಭಿಸಿತು. ಆಗ ನಾನು ತಕ್ಷಣವೇ ವ್ಯಾನ್ ನಿಂದ ಕೆಳಕ್ಕಿಳಿದು ಲಾಠಿ ಪ್ರಹಾರ ನಡೆಸು ವಂತೆ, ಉದ್ರಿಕ್ತ ಗುಂಪನ್ನು ಚದುರಿಸು ವಂತೆ ನನ್ನ ತಂಡದ ಸಿಬ್ಬಂದಿಗೆ ಆದೇಶಿ ಸಿದೆ. ನಂತರ ಸ್ವಲ್ಪವೇ ಸಮಯದಲ್ಲಿ ಉದ್ರಿಕ್ತ ಗುಂಪನ್ನು ಚದುರಿಸಿ ಮುಖ್ಯಮಂತ್ರಿ ಗಳನ್ನು ರಕ್ಷಿಸುವಲ್ಲಿ ನಾವು ಸಫಲರಾದೆವು. ಬಳಿಕ ಸಿಎಂ ಅವರನ್ನು ಬಿಗಿಭದ್ರತೆಯಲ್ಲಿ ಮೈಸೂರಿನ ಮೆಟ್ರೊಪೋಲ್ ಹೋಟೆಲ್‍ಗೆ ಬಲು ಸುರಕ್ಷಿತವಾಗಿ ತಲುಪಿಸಿದೆವು ಎಂದು ಹಳೆಯ ಘಟನೆಯನ್ನು ಸದಾ ನಂದ ನೆನಪಿಸಿಕೊಂಡರು.

ಸಿಎಂ ಅವರನ್ನು ಸಂಕಷ್ಟದ ಸನ್ನಿವೇಶ ದಲ್ಲಿ ಕಾಪಾಡಿದ್ದ ಸದಾನಂದ ಅವರ ಸಕಾ ಲಿಕ ನಿರ್ಧಾರ ಮತ್ತು ಸಮಯಪ್ರಜ್ಞೆ ಯನ್ನು ಮೆಚ್ಚಿ ಕರ್ನಾಟಕ ಸರ್ಕಾರವು ಪ್ರಶಂಸಾಪತ್ರವನ್ನು ನೀಡಿ, 2015ರ ಆ.20 ರಂದು ನಡೆದ ಅರಸು ಜನ್ಮಶತಮಾನೋ ತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಿದೆ.

ಅಂದಿನ ಸರ್ಕಾರದಲ್ಲಿ ಗೃಹ ಸಚಿವ ರಾಗಿದ್ದ ಆರ್.ಎಲ್.ಜಾಲಪ್ಪ ಅವರು 2 ಲಕ್ಷ ರೂ.ಗಳ ಬಹುಮಾನವನ್ನೂ ಘೋಷಿಸಿದ್ದರು. ಆದರೆ, ನನಗೆ ಪ್ರಶಂಸಾ ಪತ್ರವಷ್ಟೇ ದೊರೆಯಿತು ಎಂದು ಸದಾ ನಂದ ಅವರು `ಮೈಸೂರು ಮಿತ್ರ’ನಿಗೆ ತಿಳಿಸಿದರು. ಹಾಗಾಗಿ ಈಗಲಾದರೂ ನನ್ನ ಸೇವೆಯನ್ನು ಗುರುತಿಸಿ, ಆ.20ರ ಅರಸು ಜನ್ಮದಿನ ಕಾರ್ಯಕ್ರಮದಲ್ಲಿ ನಗದು ಬಹುಮಾನ ನೀಡಿ ಗೌರವಿಸಲಿ. ಜತೆಗೆ ರಾಜ್ಯೋತ್ಸವ ಪ್ರಶಸ್ತಿಯನ್ನೂ ನೀಡಲಿ ಎಂಬುದೇ ನನ್ನ ಕೋರಿಕೆ. ಇದೇ ವಿಚಾರ ವಾಗಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇನೆ ಎಂದು ಸದಾನಂದ ಅವರು ಹೇಳಿದರು.

Translate »