`ಹೊಸ ಹುಟ್ಟು’ ಯೋಜನೆಯಡಿ 2 ವರ್ಷ ವಸತಿ ಸಹಿತ ಉಚಿತ ಪಿಯು ಶಿಕ್ಷಣ
ಮೈಸೂರು

`ಹೊಸ ಹುಟ್ಟು’ ಯೋಜನೆಯಡಿ 2 ವರ್ಷ ವಸತಿ ಸಹಿತ ಉಚಿತ ಪಿಯು ಶಿಕ್ಷಣ

August 20, 2019

ಮೈಸೂರು,ಆ.19 (ಆರ್‍ಕೆಬಿ)- ರಾಜ್ಯದ ನೆರೆಪೀಡಿತ ಪ್ರದೇಶದ ನಿರಾಶ್ರಿತ ವಿದ್ಯಾರ್ಥಿ ಗಳಿಗೆ 2 ವರ್ಷಗಳ ಕಾಲ ವಸತಿ ಸಹಿತ ಉಚಿತ ಪಿಯುಸಿ ಶಿಕ್ಷಣ ಕಲ್ಪಿಸಲು ಮೈಸೂ ರಿನ ದಟ್ಟಗಳ್ಳಿ ವಿಶ್ವ ಪ್ರಜ್ಞಾ ವಸತಿ ಸಹಿತ ಪದವಿ ಪೂರ್ವ ಕಾಲೇಜು ತೀರ್ಮಾನಿಸಿದೆ.

`ಹೊಸ ಹುಟ್ಟು’ ಯೋಜನೆಯಡಿ ನೆರೆ ಪೀಡಿತ ನಿರಾಶ್ರಿತ ವಿದ್ಯಾರ್ಥಿಗಳಿಗೆ 2 ವರ್ಷಗಳ ಕಾಲ ಪಿಯುಸಿ ಶಿಕ್ಷಣವನ್ನು ಸಂಪೂರ್ಣ ಉಚಿತವಾಗಿ ನೀಡಲಿರುವು ದಾಗಿ ಎಸ್‍ವಿಜಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ವಿಶ್ವನಾಥ್ ಶೇಷಾಚಲ ಸೋಮವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಉತ್ತರ ಕರ್ನಾಟಕದ ಬಹುಭಾಗ ನೆರೆಗೆ ಸಿಲುಕಿ ಅಲ್ಲಿನ ನೂರಾರು ವಿದ್ಯಾರ್ಥಿಗಳ ಭವಿಷ್ಯದ ಕನಸು ನುಚ್ಚು ನೂರಾಗಿದೆ. ಮುಂದೇನು? ಎಂಬ ಚಿಂತೆಯಲ್ಲಿರುವ ವಿದ್ಯಾರ್ಥಿಗಳಿಗೆ ನೆರವಾಗುವ ದೃಷ್ಟಿಯಿಂದ ನಮ್ಮ ಸಂಸ್ಥೆ `ಹೊಸ ಹುಟ್ಟು’ ಯೋಜನೆ ಪರಿಚಯಿಸಿದೆ. ಇದೊಂದು ಸಾಮಾಜಿಕ ಕಾರ್ಯ. ಇದರಿಂದ ಇತರರಿಗೆ ಪ್ರೇರಣೆ ಯಾಗಿ ಮತ್ತೊಂದಿಷ್ಟು ವಿದ್ಯಾಸಂಸ್ಥೆಗಳು ಈ ರೀತಿ ಮುಂದೆ ಬಂದರೆ ನೆರೆ ಪೀಡಿತ ಪ್ರದೇಶದ ವಿದ್ಯಾರ್ಥಿಗಳ ಭವಿಷ್ಯ ಕಟ್ಟಲು ನೆರವಾದಂತಾಗುತ್ತದೆ ಎಂದು ಅಭಿ ಪ್ರಾಯಪಟ್ಟರು. ಆಯ್ದ ಐದು ವಿದ್ಯಾರ್ಥಿ ಗಳಿಗೆ 2 ವರ್ಷ ಪದವಿ ಪೂರ್ವ ಶಿಕ್ಷಣ ಮತ್ತು ಸಿಇಟಿ ನೀಟ್ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಹ ಉಚಿತ ಶಿಕ್ಷಣ ಮತ್ತು ವಸತಿ ನೀಡಲಾಗುವುದು. ಇದಕ್ಕೆ ಪ್ರತಿ ವಿದ್ಯಾರ್ಥಿಗೆ 1 ವರ್ಷಕ್ಕೆ ಸುಮಾರು 1.5 ಲಕ್ಷ ರೂ. ವೆಚ್ಚವಾಗಲಿದ್ದು, ಐವರು ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ 7.5 ಲಕ್ಷ ರೂ.ಗಳನ್ನು ಸಂಸ್ಥೆಯು ಭರಿಸಲಿದೆ. ವಾಣಿಜ್ಯ ಮತ್ತು ವಿಜ್ಞಾನ ವಿಭಾ ಗದ ವಿದ್ಯಾರ್ಥಿಗಳನ್ನು ದಾಖಲು ಮಾಡಿ ಕೊಳ್ಳಲಾಗುವುದು. ಆಸಕ್ತರು ಮೊ- 70266 85531 ಸಂಪರ್ಕಿಸಬಹುದು ಎಂದರು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‍ನ ಉಪಾಧ್ಯಕ್ಷ ಎಸ್.ಮನೋಹರ್, ಆಡಳಿತಾಧಿಕಾರಿ ಡಾ. ಕೆಂಪೇಗೌಡ, ಸಾರ್ವಜನಿಕ ಸಂಪರ್ಕಾ ಧಿಕಾರಿ ಡಾ.ಮೋಹನ್‍ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Translate »