ಸಾಂಪ್ರದಾಯಿಕ ವಿವಿಗಳಿಗೆ ದೂರ ಶಿಕ್ಷಣದ ಅನುಮತಿಗೆ ವಿಶ್ರಾಂತ ಕುಲಪತಿ ಆಕ್ಷೇಪ
ಮೈಸೂರು

ಸಾಂಪ್ರದಾಯಿಕ ವಿವಿಗಳಿಗೆ ದೂರ ಶಿಕ್ಷಣದ ಅನುಮತಿಗೆ ವಿಶ್ರಾಂತ ಕುಲಪತಿ ಆಕ್ಷೇಪ

August 20, 2019

ಮೈಸೂರು, ಆ.19 (ಆರ್‍ಕೆಬಿ)- ದೂರ ಶಿಕ್ಷಣ ನೀಡಲು ಸಾಂಪ್ರದಾಯಿಕ ವಿಶ್ವವಿದ್ಯಾ ನಿಲಯಗಳಿಗೆ ಅನುಮತಿ ನೀಡಿರುವ ಸರ್ಕಾರದ ಕ್ರಮ ಸರಿ ಯಲ್ಲ ಎಂದು ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಎನ್.ಎಸ್.ರಾಮೇಗೌಡ ಆಕ್ಷೇಪಿಸಿ ದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ದೂರ ಶಿಕ್ಷಣ ನೀಡಲು ಪ್ರತ್ಯೇಕ ವಾದ ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯವೇ ಇರುವಾಗ ಇಂತಹ ಕ್ರಮ ಸೂಕ್ತವಲ್ಲ ಎಂದು ಅಭಿ ಪ್ರಾಯಪಟ್ಟರು. ಸಾಂಪ್ರದಾಯಕ ವಿವಿಗಳಲ್ಲಿ ಆರ್ಥಿಕ ಸಂಪನ್ಮೂಲ ಹೆಚ್ಚಿಸಿಕೊಳ್ಳಲು ದೂರ ಶಿಕ್ಷಣ ನೀಡಲು ಅನುಮತಿ ನೀಡಿರುವುದಾಗಿ ಸರ್ಕಾರ ತಿಳಿಸಿದೆ. ಆದರೆ ಇದರಿಂದ ಶಿಕ್ಷಣ ವ್ಯಾಪಾರೀ ಕರಣಕ್ಕೆ ಅವಕಾಶ ನೀಡಿದಂತಾಗುತ್ತದೆ. ಹಣ ಇದ್ದವರಿಗೆ ಉನ್ನತ ಶಿಕ್ಷಣ ಎಂಬಂ ತಾಗುತ್ತದೆ. ಆದ್ದರಿಂದ ಸರ್ಕಾರ ಸಾಂಪ್ರದಾಯಿಕ ವಿವಿಗಳಿಗೆ ದೂರ ಶಿಕ್ಷಣ ನೀಡಲು ನೀಡಿರುವ ಅನುಮತಿಯನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ದೂರ ಶಿಕ್ಷಣ ವಿದ್ಯಾರ್ಥಿಗಳಿಂದ ಪಡೆಯುವ ಶುಲ್ಕವನ್ನು ಓಡಿಎಲ್ ವ್ಯವಸ್ಥೆಗೆ ಕೇವಲ 25ರಿಂದ 30ರಷ್ಟು ಬಳಸಿಕೊಂಡು ಉಳಿದ 70ರಿಂದ 75ರಷ್ಟು ಶುಲ್ಕವನ್ನು ಸಾಂಪ್ರದಾಯಕ ವ್ಯವಸ್ಥೆಗೆ ಬಳಸಿಕೊಳ್ಳುವ ಉದ್ದೇಶ ನ್ಯಾಯ ಸಮ್ಮತವಲ್ಲ. ಇದರಿಂದ ಶಿಕ್ಷಣ ಗುಣ ಮಟ್ಟದ ಮೇಲೂ ಪರಿಣಾಮ ಬೀರಲಿದೆ. ದೂರ ಶಿಕ್ಷಣ ವ್ಯವಸ್ಥೆ ಅತ್ಯತ್ತಮವಾಗಿದ್ದು, ಅದರ ಅನುಷ್ಠಾನದಲ್ಲಿ ತೊಡಕುಂಟಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

Translate »