ಕನ್ನಡ ಹೋರಾಟಗಾರರ ಶಾಶ್ವತ ದಸರಾ ಸಮಿತಿ ರಚಿಸಲು ಒತ್ತಾಯ
ಮೈಸೂರು

ಕನ್ನಡ ಹೋರಾಟಗಾರರ ಶಾಶ್ವತ ದಸರಾ ಸಮಿತಿ ರಚಿಸಲು ಒತ್ತಾಯ

August 20, 2019

ಮೈಸೂರು, ಆ.19 (ಆರ್‍ಕೆಬಿ)- ನಾಡಹಬ್ಬ ದಸರಾದಲ್ಲಿ ಕನ್ನಡ ಹೋರಾಟಗಾರರ ಶಾಶ್ವತ ದಸರಾ ಸಮಿತಿ ರಚನೆ ಯಾಗಬೇಕು ಎಂದು ಕನ್ನಡ ಕ್ರಾಂತಿದಳ ಹಾಗೂ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ. ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಅರ ವಿಂದ ಶರ್ಮ ಸೋಮವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಕನ್ನಡ ಹೋರಾಟಗಾರರನ್ನು ದಸರಾದಿಂದ ನಿರ್ಲಕ್ಷಿಸಲಾಗುತ್ತಿದೆ. ದಸರಾದಲ್ಲಿ ಪಾಲ್ಗೊಂಡ ಕಲಾವಿದರಿಗೆ ಇಂದಿಗೂ ಗೌರವ ಧನ ಲಭಿಸಿಲ್ಲ. ಸರ್ಕಾರ ನಿರ್ಲಕ್ಷ್ಯ ಧೋರಣೆ ಬಿಟ್ಟು ಕಲಾವಿದರಿಗೆ ನ್ಯಾಯ ದೊರಕಿಸಿಕೊಡಬೇಕು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಯೊಂದಿಗೆ ಒಡನಾಟ ಇರಿಸಿಕೊಂಡಿರುವ ಕನ್ನಡ ಹೋರಾಟಗಾರರನ್ನು ಶಾಶ್ವತ ದಸರಾ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರಜಾಪ್ರಭುತ್ವದ ಆಳ್ವಿಕೆ ಜಾರಿಯಾದ ಬಳಿಕ ಕನ್ನಡ ಕ್ರಾಂತಿದಳದ ಸಂಸ್ಥಾಪಕ ನ. ನಾಗಲಿಂಗಸ್ವಾಮಿ, 1970 ಮತ್ತು 1971ರಲ್ಲಿ ಸತತ 2 ವರ್ಷ 101 ಗಣಪತಿ ದೇವಸ್ಥಾನ ದಿಂದ ಭಾರತಾಂಬೆಯ ಪುತ್ಥಳಿಯನ್ನು ಆನೆ ಮೇಲಿಟ್ಟು ಖಾಸಗಿ ದಸರಾ ನಡೆಸಿದ್ದರು. ಆದರೆ ಇಂದು ಅವರ ಕುಟುಂಬವನ್ನು ದಸರಾದಿಂದ ದೂರ ಇಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ಹಿರಿಯ ಹೋರಾಟಗಾರ ಸತ್ಯಪ್ಪ ಆರೋಪಿಸಿದರು. ಜಿಲ್ಲಾಧಿಕಾರಿ ಗಳು ಈ ಬಗ್ಗೆ ಗಮನ ಹರಿಸುವಂತೆ ಅವರು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಹೋರಾಟಗಾರರಾದ ಪಾಲಹಳ್ಳಿ ರಾಮಕೃಷ್ಣ, ತೇಜಸ್ವಿಕುಮಾರ್ ಉಪಸ್ಥಿತರಿದ್ದರು.

Translate »