ಫೋನ್ ಟ್ಯಾಪಿಂಗ್ ಪ್ರಕರಣCBI ತನಿಖೆಗೆ
ಮೈಸೂರು

ಫೋನ್ ಟ್ಯಾಪಿಂಗ್ ಪ್ರಕರಣCBI ತನಿಖೆಗೆ

August 19, 2019

ಬೆಂಗಳೂರು, ಆ.18-ರಾಜ್ಯದಲ್ಲಿ ಸಂಚಲನ ಸೃಷ್ಟಿ ಸಿರುವ ಫೋನ್ ಟ್ಯಾಪಿಂಗ್ ಪ್ರಕರಣವನ್ನು ಸಿಬಿಐಗೆ ವಹಿಸಿರುವುದಾಗಿ ಮುಖ್ಯ ಮಂತ್ರಿ ಬಿ.ಎಸ್.ಯಡಿ ಯೂರಪ್ಪ ಘೋಷಿಸಿದ್ದಾರೆ. ಇದರಿಂದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಬೆಂಗ ಳೂರು ನಗರದ ಹಿಂದಿನ ಪೊಲೀಸ್ ಆಯುಕ್ತ ಅಲೋಕ್‍ಕುಮಾರ್, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಓರ್ವ ಮಹಿಳಾ ಐಪಿಎಸ್ ಅಧಿಕಾರಿಗೆ ಸಂಕಷ್ಟ ಎದುರಾಗಿದೆ.

ಇಂದು ಬೆಳಿಗ್ಗೆ ತಮ್ಮ ಡಾಲರ್ಸ್ ಕಾಲೋನಿ ನಿವಾಸ ದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯ ಮಂತ್ರಿಗಳು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯ ಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಫೋನ್ ಟ್ಯಾಪಿಂಗ್ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಲಾಗಿತ್ತು. ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪ್ರಕರಣವನ್ನು ಸಿಬಿಐ ತನಿಖೆಗೆ ಕೈಗೆತ್ತಿಕೊಳ್ಳಬೇಕಾ ದರೆ ಮೊದಲು ಎಫ್‍ಐಆರ್ ದಾಖಲಾಗಬೇಕಾಗು ತ್ತದೆ. ಹಾಗೆ ಎಫ್‍ಐಆರ್ ದಾಖಲಾದಾಗ ಬೆಂಗ ಳೂರಿನ ಹಿಂದಿನ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ, ಓರ್ವ ಮಹಿಳಾ ಐಪಿಎಸ್ ಅಧಿಕಾರಿ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರುಗಳನ್ನು ಆರೋಪಿಗಳಾಗಿ ನಮೂದಿಸುವ ಸಾಧ್ಯತೆ ಇದೆ.

ಬೆಂಗಳೂರಿನ ಹಾಲಿ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಅವರು ವ್ಯಕ್ತಿಯೋರ್ವನ ಜೊತೆ ಮಾತ ನಾಡಿದ ದೂರವಾಣಿ ಸಂಭಾಷಣೆ ವೈರಲ್ ಆದ ಹಿನ್ನೆಲೆ ಯಲ್ಲಿ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರ ಫೋನ್ ಟ್ಯಾಪಿಂಗ್ ಮಾಡಿದೆ ಎಂಬುದು ಬೆಳಕಿಗೆ ಬಂದಿತ್ತು. ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್ ಅವರು ಪ್ರಾಥಮಿಕ ತನಿಖೆ ನಡೆಸಿ ಫೋನ್ ಟ್ಯಾಪಿಂಗ್ ಆಗಿರುವುದನ್ನು ದೃಢಪಡಿಸಿ ಸರ್ಕಾರಕ್ಕೆ ತಮ್ಮ ಪ್ರಾಥಮಿಕ ವರದಿಯನ್ನು ಸಲ್ಲಿಸಿದ್ದರು. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪತನದ ಹೊಸ್ತಿಲಿನಲ್ಲಿ ದ್ದಾಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಮತ್ತು ಜೆಡಿಎಸ್‍ನ ಅತೃಪ್ತ ಶಾಸಕರು, ಬಿಜೆಪಿಯ ಮುಖಂಡರುಗಳು, ಕೆಲ ಐಎಎಸ್ ಮತ್ತು ಐಪಿಎಸ್ ಅಧಿಕಾರಿ ಗಳು ಹಾಗೂ ಪತ್ರಕರ್ತರೂ ಸೇರಿದಂತೆ ಸುಮಾರು 130 ನಾಯಕರ ಟೆಲಿಫೋನ್ ಗಳನ್ನು ಟ್ಯಾಪ್ ಮಾಡಲಾಗಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿತ್ತು.

ಮೈತ್ರಿ ಸರ್ಕಾರ ಸಂಕಷ್ಟದಲ್ಲಿದ್ದಾಗ ಅತೃಪ್ತ ಶಾಸಕರ ಜೊತೆ ಯಾರು ಸಂಪರ್ಕ ದಲ್ಲಿದ್ದಾರೆ? ಮೈತ್ರಿ ಸರ್ಕಾರದ ವಿರುದ್ಧ ಏನೆಲ್ಲಾ ನಡೆಯುತ್ತಿದೆ? ಎಂಬುದನ್ನರಿಯಲು ಆಗ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿಯವರೇ ಫೋನ್ ಟ್ಯಾಪಿಂಗ್ ಮಾಡಿಸಿದ್ದಾರೆ. ಅಂದಿನ ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್‍ಕುಮಾರ್ ಅವರ ನಿರ್ದೇ ಶನದ ಮೇರೆಗೆ ಮಹಿಳಾ ಐಪಿಎಸ್ ಅಧಿಕಾರಿಯೋರ್ವರು ಫೋನ್ ಟ್ಯಾಪಿಂಗ್ ಮಾಡಿದ್ದಾರೆ. ಕೆಲ ಕಾಂಗ್ರೆಸ್ ನಾಯಕರ ದೂರವಾಣಿ ಕರೆಗಳ ರೆಕಾರ್ಡಿಂಗ್‍ಗಳನ್ನು ಪಡೆದು ಡಿ.ಕೆ.ಶಿವಕುಮಾರ್ ಎಐಸಿಸಿಗೆ ರವಾನಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಫೋನ್ ಟ್ಯಾಪಿಂಗ್ ಪ್ರಕರಣವನ್ನು ಸಿಬಿಐಗೆ ವಹಿಸಿರುವುದರಿಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಮಾತ್ರವಲ್ಲದೆ, ಕೆಲ ಐಪಿಎಸ್ ಅಧಿಕಾರಿಗಳಿಗೂ ಕಂಟಕ ಎದುರಾಗಿದೆ.

ನನಗೇನು ಭಯವಿಲ್ಲ: ಮಾಜಿ ಸಿಎಂ ಹೆಚ್‍ಡಿಕೆ
ಸುಬ್ರಹ್ಮಣ್ಯ, ಆ.18- ಫೆÇೀನ್ ಟ್ಯಾಪಿಂಗ್ ಪ್ರಕರಣವನ್ನು ಸಿಬಿಐ ತನಿಖೆಗಾದರೂ ಒಪ್ಪಿಸಲಿ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರನ್ನಾದರೂ ಕರೆಸಿ ತನಿಖೆ ಮಾಡಿಸಲಿ. ನನ ಗೇನು ಭಯವಿಲ್ಲ.ಇದೊಂದು ಸೇಡಿನ ರಾಜಕಾರಣದ ಭಾಗ ಎಂದು ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು. ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಭಾನುವಾರ ಆಗಮಿಸಿ ಶ್ರೀ ದೇವರ ದರ್ಶನ ಪಡೆದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ತಾನು ಯಾವುದೇ ಪೆÇೀನ್ ಕದ್ದಾಲಿಕೆಯಲ್ಲಿ ಭಾಗಿಯಾಗಿಲ್ಲ. ಆದರೂ ಅನವಶ್ಯಕವಾಗಿ ತನ್ನನ್ನು ಎಳೆದು ತರಲಾಗುತ್ತಿದೆ. ಅಂತವರಿಗೆ ಸುಬ್ರಹ್ಮಣ್ಯ ದೇವರೆ ಬುದ್ಧಿ ನೀಡಲಿ ಎಂದರು. ಈ ವೇಳೆ ಮಾಜಿ ಸಚಿವ ಸಾರಾ ಮಹೇಶ್, ವಿಧಾನ ಪರಿಷತ್ ಸದಸ್ಯ ಭೋಜೆಗೌಡ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ ಜತೆಗಿದ್ದರು.

IMA ಬಹುಕೋಟಿ ವಂಚನೆ ಪ್ರಕರಣವೂ ಅಃIಗೆ?
ಬೆಂಗಳೂರು, ಆ.18-ಫೋನ್ ಟ್ಯಾಪಿಂಗ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಐಎಂಎ ಬಹುಕೋಟಿ ವಂಚನೆ ಹಗರಣವನ್ನೂ ಕೂಡ ಸಿಬಿಐ ತನಿಖೆಗೆ ವಹಿಸಲಿದ್ದಾರೆ ಎಂದು ವಿಶ್ವಸನೀಯ ಮೂಲ ಗಳಿಂದ ತಿಳಿದಿದೆ. ಇತ್ತೀಚೆಗೆ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಗಳು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆ ಈ ಬಗ್ಗೆ ಚರ್ಚೆ ನಡೆಸಿದ್ದು, ಐಎಂಎ ಹಗರಣವನ್ನೂ ಕೂಡ ಸಿಬಿಐಗೆ ವಹಿಸುವಂತೆ ಶಾ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಐಎಂಎ ಹಗರಣದ ರೂವಾರಿ ಮನ್ಸೂರ್ ಖಾನ್ 32 ಸಾವಿರಕ್ಕೂ ಹೆಚ್ಚು ಜನರಿಗೆ 500 ಕೋಟಿ ರೂ.ಗಳಿಗೂ ಹೆಚ್ಚು ಹಣ ವಂಚನೆ ಮಾಡಿದ್ದಾನೆ. ಭಾರತದಿಂದ ದುಬೈಗೆ ಪಲಾಯನ ವಾಗಿದ್ದ ಆತನ ವಿರುದ್ಧ ಬ್ಲೂ ಕಾರ್ನರ್ ನೋಟೀಸ್ ಜಾರಿ ಮಾಡಲಾಗಿತ್ತು. ಈ ಹಗರಣವನ್ನು ಸಿಐಡಿ ತನಿಖೆ ನಡೆಸುತ್ತಿದ್ದು, ಮನ್ಸೂರ್ ಖಾನ್‍ನನ್ನು ಬಂಧಿಸಲಾಗಿದೆ. ಐಎಂಎ ಹಗರಣದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ.ಎಂ.ವಿಜಯಶಂಕರ್ ಅವರನ್ನು ಬಂಧಿಸಲಾಗಿದೆ. ಮನ್ಸೂರ್ ಖಾನ್ ದುಬೈನಿಂದ ತಾನು ಬಿಡುಗಡೆ ಮಾಡಿದ ಆಡಿಯೋನಲ್ಲಿ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಅವರ ಹೆಸರನ್ನು ಪ್ರಸ್ತಾಪ ಮಾಡಿದ್ದ. ಕಾಂಗ್ರೆಸ್‍ನ ಮತ್ತೋರ್ವ ಶಾಸಕ ಜಮೀರ್ ಅಹಮದ್ ಅವರು ಮನ್ಸೂರ್ ಖಾನ್ ಜೊತೆ ವ್ಯವಹಾರ ನಡೆಸಿದ್ದರು. ಈ ಸಂಬಂಧ ಅವರಿಬ್ಬರನ್ನೂ ಸಿಐಡಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದರು. ಐಎಂಎ ಪ್ರಕರಣದಲ್ಲಿ ಹಲವಾರು ರಾಜಕಾರಣಿಗಳು, ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು, ಉದ್ಯಮಿಗಳು ಭಾಗಿಯಾಗಿದ್ದಾರೆ. ಈ ಹಗರಣದ ತನಿಖೆಯನ್ನು ಜಾರಿ ನಿರ್ದೇಶನಾಲಯವೂ ನಡೆಸುತ್ತಿದೆ. ಹೀಗಾಗಿ ಈ ಹಗರಣವನ್ನು ಸಿಬಿಐಗೆ ವಹಿಸುವುದು ಸೂಕ್ತ ಎಂದು ಅಮಿತ್ ಶಾ ಸೂಚನೆ ನೀಡಿದ್ದಾರೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಈ ಸಂಬಂಧ ಕಾನೂನು ತಜ್ಞರ ಸಲಹೆಯನ್ನು ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Translate »