ಮೈಸೂರು, ಜ.1(ಎಸ್‍ಬಿಡಿ)- ಸ್ಥಿರಾಸ್ತಿಗಳ ಪರಿಷ್ಕøತ ಮಾರ್ಗ ಸೂಚಿ ದರ(ಗೈಡ್‍ಲೈನ್ಸ್ ರೇಟ್) ಜಾರಿಯಾದ ಮೊದಲ ದಿನವಾದ ಇಂದು ಆಸ್ತಿಗಳ ನೋಂದಣಿ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ.
ಮೈಸೂರು ಪಶ್ಚಿಮ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಸಾಮಾನ್ಯವಾಗಿ ಸುಮಾರು 40 ಆಸ್ತಿ ನೋಂದಣಿಯಾಗುತ್ತಿತ್ತು. ಆದರೆ ಇಂದು ನೋಂದಣಿಯಾಗಿರುವುದು 3 ಮಾತ್ರ. ದಕ್ಷಿಣ ಕಚೇರಿಯಲ್ಲಿ ಒಂದೇ ಒಂದು ನೋಂದಣಿಯೂ ಆಗಿಲ್ಲ. ಹೀಗೆ ಜಿಲ್ಲೆಯ ಎಲ್ಲಾ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ನೋಂದಣಿಗೆ ಬಂದವರ ಸಂಖ್ಯೆ ತೀರಾ ಕಡಿಮೆ.
ಪರಿಷ್ಕøತ ಮಾರ್ಗಸೂಚಿ ದರದ ಅನ್ವಯ ಸ್ಥಿರಾಸ್ತಿಗಳ ಮೌಲ್ಯ ಶೇ.5ರಿಂದ 25ರಷ್ಟು ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಆಸ್ತಿಗಳ ನೋಂದಣಿ ಶುಲ್ಕ ಹೆಚ್ಚಾಗಲಿದೆ ಎಂಬ ಭಾವನೆಯಿಂದ ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ಈ ಪರಿಷ್ಕರಣೆ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ವಿದೆ. ಈ ಕಾರಣಗಳಿಂದಾಗಿ ಇಂದು ನೋಂದಣಿ ಮಾಡಿಸುವವರ ಸಂಖ್ಯೆ ಕಡಿಮೆಯಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ ಮತ್ತೊಂದು ಮೂಲದ ಪ್ರಕಾರ ಶೂನ್ಯ ಮಾಸದಲ್ಲಿ ದಿನ, ತಿಥಿ ಇನ್ನಿತರ ಧಾರ್ಮಿಕ ವಿಚಾರಗಳ ಬಗ್ಗೆ ನಂಬಿಕೆಯುಳ್ಳ ಆಸ್ತಿಕರು ಯಾವುದೇ ಆಸ್ತಿ ನೋಂದಣಿ ಮಾಡಿಸುವುದಿಲ್ಲ. ಅದರಲ್ಲೂ ಇಂದು ಮಂಗಳವಾರವಾದ ಕಾರಣ ನೋಂದಣಿ ಮತ್ತಷ್ಟು ಕಡಿಮೆಯಾಗಿದೆ ಎನ್ನಲಾಗುತ್ತಿದೆ.
ಸ್ಥಿರಾಸ್ತಿ ಮಾರ್ಗಸೂಚಿ ದರದ ಪರಿಷ್ಕರಣೆ ಬಗ್ಗೆ ಕೆಲ ತಿಂಗಳ ಹಿಂದೆಯೇ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿತ್ತು. ಅಲ್ಲದೆ ಪರಿಷ್ಕøತ ದರದ ಬಗ್ಗೆ ಉಪ ನೋಂದಣಾಧಿಕಾರಿಗಳ
ಕಚೇರಿಯಲ್ಲಿ ಮಾಹಿತಿ ಪ್ರದರ್ಶಿಸಲಾಗಿದೆ. ಹಾಗಾಗಿ ಈ ಬಗ್ಗೆ ಸಾರ್ವಜನಿಕರು ಗೊಂದಲಕ್ಕೊಳಗಾಗುವ ಪ್ರಮೇಯವಿಲ್ಲ ಎನ್ನುತ್ತಾರೆ ಅಧಿಕಾರಿಯೊಬ್ಬರು. ಆದರೆ ಪರಿಷ್ಕøತ ಮಾರ್ಗಸೂಚಿ ದರ ಹಾಗೂ ಅದರನ್ವಯ ನೋಂದಣಿ ಶುಲ್ಕದಲ್ಲಿ ಎಷ್ಟು ಹೆಚ್ಚಳವಾಗಲಿದೆ ಎಂಬುದರ ಬಗ್ಗೆ ಸುಲಭವಾಗಿ ಅರ್ಥವಾಗುವಂತೆ ಪ್ರಕಟಿಸ ಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ. ಈ ಸಂಬಂಧ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿದಾಗ ಸ್ಥಿರಾಸ್ತಿಗಳ ಮಾರ್ಗಸೂಚಿ ಪರಿಷ್ಕøತ ದರ ಜ.1ರಿಂದ ಜಾರಿಯಾಗಿದೆ. ಆದರೆ ಆಸ್ತಿ ನೋಂದಣಿ ಶುಲ್ಕದಲ್ಲಿ ಹೆಚ್ಚಳವಾಗಿಲ್ಲ. ಚಾಲ್ತಿಯಲ್ಲಿರುವ ಶೇ.5.60 ಸ್ಟ್ಯಾಂಪ್‍ಡ್ಯೂಟಿ ಹಾಗೂ ಶೇ.1 ಶುಲ್ಕದಲ್ಲಿ ವ್ಯತ್ಯಯವಾಗುವುದಿಲ್ಲ. ಆದರೆ ಉದಾಹರಣೆಗೆ ಪರಿಷ್ಕøತ ದರ ಜಾರಿಗೆ ಬರುವ ಮುನ್ನ 10 ಸಾವಿರ ರೂ. ಮೌಲ್ಯದ ಆಸ್ತಿ ನೋಂದಣಿಗೆ 560ರೂ. ಸ್ಟ್ಯಾಂಪ್‍ಡ್ಯೂಟಿ, 100ರೂ. ಶುಲ್ಕ ಭರಿಸುತ್ತಿದ್ದರೆ, ಪರಿಷ್ಕರಣೆ ನಂತರ ಆಸ್ತಿಯ ಮಾರ್ಗಸೂಚಿ ದರ ಶೇ.5ರಷ್ಟು ಹೆಚ್ಚಳವಾದರೆ ಒಟ್ಟು 10,500ರೂ. ಆಗುತ್ತದೆ. ಇದರನ್ವಯ ಸ್ಟ್ಯಾಂಪ್‍ಡ್ಯೂಟಿ ಬೆಲೆಯಲ್ಲಿ 26 ರೂ. ಹಾಗೂ ಶುಲ್ಕದÀಲ್ಲಿ 5 ರೂ. ಹೆಚ್ಚಳವಾಗುತ್ತದೆ ಎಂದು ವಿವರಿಸಿದರು.