ಕುಕ್ಕರ್ ಸ್ಫೋಟದಿಂದ ಗಾಯಗೊಂಡಿದ್ದ  ಬಾಲಕಿಯ ಆರೋಗ್ಯ ವಿಚಾರಣೆ
ಮೈಸೂರು

ಕುಕ್ಕರ್ ಸ್ಫೋಟದಿಂದ ಗಾಯಗೊಂಡಿದ್ದ ಬಾಲಕಿಯ ಆರೋಗ್ಯ ವಿಚಾರಣೆ

January 3, 2019

ಮೈಸೂರು: ಕುಕ್ಕರ್ ಸ್ಫೋಟಗೊಂಡು ಗಂಭೀರವಾಗಿ ಗಾಯ ಗೊಂಡು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸಂಗಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಸಿಂಚನಾ (9)ಳನ್ನು ಮಂಡ್ಯ ಜಿಲ್ಲಾ ಉಸ್ತುವಾರಿಯೂ ಆದ ಸಣ್ಣ ನೀರಾ ವರಿ ಸಚಿವ ಸಿ.ಎಸ್.ಪುಟ್ಟರಾಜು ಬುಧ ವಾರ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಬಾಲಕಿಯ ಚಿಕಿತ್ಸೆಯ ಮಾಹಿತಿ ಪಡೆದ ಸಚಿವರು, ಉತ್ತಮ ಚಿಕಿತ್ಸೆ ನೀಡು ವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿ ದರು. ಈ ಸಂದರ್ಭದಲ್ಲಿ ಮಾಧ್ಯಮದೊಂ ದಿಗೆ ಮಾತನಾಡಿದ ಅವರು, ಬಿಸಿಯೂಟ ಕೇಂದ್ರಕ್ಕೆ ಮಕ್ಕಳು ತೆರಳದಂತೆ ಸೂಚನೆ ನೀಡಿರುವುದಾಗಿಯೂ ತಿಳಿಸಿದರು.

ಈ ಸಂದರ್ಭದಲ್ಲಿ ಪಾಂಡವಪುರ ತಾಪಂ ಇಓ ಆರ್.ಪಿ. ಮಹೇಶ್, ಜಿಪಂ ಸದಸ್ಯ ಅಶೋಕ್ ಹಾಗೂ ಪಾಂಡವಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಇದ್ದರು. 4ನೇ ತರಗತಿಯ ಬಾಲ ಕಿಗೆ ಮಂಗಳವಾರ ಮಧ್ಯಾಹ್ನ ಬಿಸಿಯೂಟದ ಅಡುಗೆ ಸಹಾಯಕಿಯರು ಅಡುಗೆ ಸಹಾಯ ಕ್ಕಾಗಿ ಅಡುಗೆ ಮನೆಗೆ ಕಳುಹಿಸಿದ್ದಾಗ ಕುಕ್ಕರ್ ಸ್ಫೋಟಗೊಂಡು ಬಾಲಕಿ ಗಾಯಗೊಂಡಿ ದ್ದಳು. ಆಕೆಗೆ ಕೆ.ಆರ್.ಆಸ್ಪತ್ರೆಯ ಸುಟ್ಟ ಗಾಯಗಳ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗು ತ್ತಿದೆ. ಬಾಲಕಿ ಪ್ರಾಣಾಪಾಯದಿಂದ ಪಾರಾ ಗಿದ್ದಾಳೆ ಎಂದು ಕೆ.ಆರ್.ಆಸ್ಪತ್ರೆ ಅಧೀಕ್ಷಕ ಡಾ.ಎಂ.ಶ್ರೀನಿವಾಸ್ ತಿಳಿಸಿದ್ದಾರೆ.

Translate »