ಬಿಲ್ಲವ ಸೇವಾ ಸಂಘದಿಂದ ವಿಶೇಷ ಪೂಜೆ
ಕೊಡಗು

ಬಿಲ್ಲವ ಸೇವಾ ಸಂಘದಿಂದ ವಿಶೇಷ ಪೂಜೆ

January 3, 2019

ವಿರಾಜಪೇಟೆ: ವಿರಾಜಪೇಟೆ ತಾಲೂಕು ಬಿಲ್ಲವ ಸೇವಾ ಸಂಘದ ವತಿಯಿಂದ ಹೊಸ ವರ್ಷದ ಪ್ರಯುಕ್ತ ಬಿಟ್ಟಂಗಾಲ ಅಂಬಾಟಿಯಲ್ಲಿರುವ ಬ್ರಹ್ಮ ಶ್ರೀ ನಾರಾಯಣ ಗುರು ಮಂದಿ ರದಲ್ಲಿ ಶ್ರದ್ಧಾ ಭಕ್ತಿಯಿಂದ ಶ್ರೀ ನಾರಾಯಣ ಗುರುವಿಗೆ ವಿಶೇಷ ಪೂಜಾ ಸೇವಾ ಕಾರ್ಯಕ್ರಮಗಳು ನಡೆಯಿತು.

ಪೂಜಾ ಕಾರ್ಯಕ್ರಮದಲ್ಲಿ ಬಿಲ್ಲವ ಸೇವಾ ಸಂಘದ ತಾಲೂಕು ಅಧ್ಯಕ್ಷ ಬಿ.ಎಂ.ಗಣೇಶ್, ಗೌರವ ಅಧ್ಯಕ್ಷ ಬಿ.ಆರ್. ರಾಜ, ಉಪಾಧ್ಯಕ್ಷ ಪುರುಷೋತ್ತಮ, ಕಾರ್ಯದರ್ಶಿ ಬಿ.ಎಸ್.ಜನಾರ್ದನ, ಖಜಾಂಚಿ ಬಿ.ಎಂ.ಸತೀಶ್, ಹಿರಿಯರಾದ ಬೋಜಪ್ಪ, ಬಿ.ಕೆ.ರಮೇಶ್, ಸದಸ್ಯರಾದ ಬಿ.ಎಂ.ರಮೇಶ್ ಹಾಗೂ ಇತರ ಸದಸ್ಯರುಗಳು ಹಾಜರಿದ್ದರು. ತಾಲೂಕು ಬಿಲ್ಲವ ಸೇವಾ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಬಿ.ಎಸ್.ಪವಿತ್ರ, ಉಪಾಧ್ಯಕ್ಷೆ ಬಿ.ಜಿ.ಅನಿತ ಗೋವಿಂದ ಹಾಗೂ ಮಹಿಳಾ ಘಟಕದ ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದರು.

Translate »