ಸಾಹಿತ್ಯ, ಪುಸ್ತಕ ಪ್ರಕಾಶನ ಕುರಿತ   ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಪರಿಹಾರ
ಮೈಸೂರು

ಸಾಹಿತ್ಯ, ಪುಸ್ತಕ ಪ್ರಕಾಶನ ಕುರಿತ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಪರಿಹಾರ

January 3, 2019

ಮೈಸೂರು: ನಾವೂ ಪುಸ್ತಕ ಪ್ರಕಾಶಕರಾಗಬಹುದೇ? ಸಾಹಿತ್ಯ ವನ್ನು ನಾವೂ ಬರೆಯಬಹುದೇ? ಪ್ರಕಾಶಕ ರಿಗೆ ಮೊದಲೇ ಹಣ ಕೊಡಬೇಕೆ? ಅನು ವಾದ ಮಾಡಿದರೆ ಮೂಲ ಲೇಖಕರ ಅನುಮತಿ ಬೇಕೇ? ಮೂಲ ಲೇಖಕ ರಿಗೂ ಗೌರವ ಧನ ಕೊಡಬೇಕೇ? ಕೃತಿ ಚೌರ್ಯ ಎಂದರೇನು? ಪ್ರಕಾಶಕರೂ ಸಾಹಿತಿಯಾಗಿರಬೇಕೇ? ಎಂಬಿತ್ಯಾದಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ರೂಪಾ ಪ್ರಕಾ ಶನ ಸಂಸ್ಥೆಯ ಯು.ಎಸ್.ಮಹೇಶ್ ಸವಿಸ್ತಾರವಾಗಿ ವಿವರಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರ, ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇ ಜಿನ ಕನ್ನಡ ಸಾಹಿತ್ಯ ವೇದಿಕೆ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಆಯೋ ಜಿಸಿದ್ದ `ಪುಸ್ತಕ ಪ್ರಕಾಶಕರೊಂದಿಗೆ – ಸಂವಾದ’ ಕಾರ್ಯಕ್ರಮದಲ್ಲಿ ಅತಿಥಿ ಯಾಗಿ ಪಾಲ್ಗೊಂಡು ವಿದ್ಯಾರ್ಥಿನಿಯರ ಕುತೂಹಲಕರ ಪ್ರಶ್ನೆಗಳಿಗೆ ಉತ್ತರಿಸಿದರು.

ಓದುಗರು ಮತ್ತು ಗ್ರಂಥಾಲಯಗಳು ಪ್ರಕಾಶಕರ ಮೂಲ. ಕಥೆ, ಕಾವ್ಯ, ಪ್ರಬಂಧ, ಸಂಶೋಧನೆ, ಲಲಿತ ಪ್ರಬಂಧ ಹೀಗೆ ನಾನಾ ಪ್ರಕಾರಗಳಲ್ಲಿನ ಸಾಹಿತ್ಯವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ, ಓದುಗರಿಗೆ ಉಣ ಬಡಿಸುವುದು ಪ್ರಕಾಶಕರ ಕೆಲಸ. ಪುಸ್ತಕ ಗಳ ಬೇಡಿಕೆಗಳಿಗೆ ಅನುಗುಣವಾಗಿ ಪ್ರಕಾ ಶನ ಸಂಸ್ಥೆಗಳು ಪುಸ್ತಕಗಳನ್ನು ಮಾರು ಕಟ್ಟೆಗೆ ತರುತ್ತವೆ. ಇಂದು ಪುಸ್ತಕ ಮಾರು ಕಟ್ಟೆ ಉತ್ತಮವಾಗಿದೆ. ಪರಿಶ್ರಮ, ಜಾಣ್ಮೆ ಇದ್ದವರು ಯಾರು ಬೇಕಾದರೂ ಪ್ರಕಾಶಕ ರಾಗಬಹುದು. ಇದೊಂದು ಗೌರವಪೂರ್ಣ ವೃತ್ತಿ. ಲೇಖಕರ ಪರಿಚಯ, ಸಾಹಿತಿಗಳ ಒಡನಾಟ ಇದ್ದರೆ ಪ್ರಕಾಶನ ವೃತ್ತಿ ಇನ್ನಷ್ಟು ಸುಲಭವಾಗುತ್ತದೆ ಎಂದು ಹೇಳಿದರು.

ಕವಿಗಳು ಮನಸ್ಸಿನಲ್ಲಿರುವುದನ್ನು ಹಾಳೆಯ ಮೇಲೆ ಬರೆದಿರುತ್ತಾರೆ. ಅದನ್ನು ಮುದ್ರಿಸಿ, ಪುಸ್ತಕ ರೂಪದಲ್ಲಿ ನೀಡುವುದೇ ಪ್ರಕಾಶನ ಸಂಸ್ಥೆಯ ಕೆಲಸ. ವಿವಿಧ ಆಕಾರ ಗಳಲ್ಲಿರುವ ಪುಸ್ತಕ ಪ್ರಕಾಶನ, ನಿಖರ ಬೈಂಡಿಂಗ್, ಬರಹ ಪ್ರಕಟಗೊಂಡರೆ ಅದಕ್ಕೆ ಸಮಾಜ ದಲ್ಲಿ ಮನ್ನಣೆ ಜೊತೆಗೆ ಭಾಷಾ ಪ್ರೇಮ ದಾಖಲಾಗುತ್ತದೆ ಎಂದು ತಿಳಿಸಿದರು.
ಪ್ರಕಾಶಕ ಹಣ ತೆಗೆದುಕೊಳ್ಳುವುದು ಅಪರೂಪ. ಮೊದಲು ಪ್ರಕಟಣೆ ಮಾಡಿ, ಗೌರವ ಪ್ರತಿ ನೀಡುತ್ತವೆ. ಲೇಖಕರಿಗೆ 10 ರಿಂದ 100 ಪ್ರತಿಗಳನ್ನು ನೀಡುತ್ತೇವೆ. ಅದು ಸಂದರ್ಭಕ್ಕೆ ಅನುಗುಣವಾಗಿರುತ್ತದೆ. ಇಂದು ಭಾರೀ ಪ್ರಮಾಣದಲ್ಲಿರುವ ಕೃತಿ ಚೌರ್ಯ ತಡೆಯಲು ಸರಿಯಾದ ಬಿಗಿ ಕ್ರಮಗಳಿಲ್ಲ ಎಂದು ಹೇಳಿದರು.

ಕವಿ, ಸಾಹಿತಿ, ಬರಹಗಾರ ಆಗಬೇಕೆ ನ್ನುವವರು ಮೊದಲು ಸಾಹಿತ್ಯದ ಓದುಗ ನಾಗಬೇಕು. ಓದುವುದನ್ನು ರೂಢಿಸಿಕೊಂಡ ವರು ಉದಯೋನ್ಮುಖ ಲೇಖಕನಾಗಿ, ಮುಂದೆ ಉತ್ತಮ ಬರಹಗಾರ, ಕವಿ, ಸಾಹಿತಿಯಾಗಲು ಸಾಧ್ಯವಿದೆ ಎಂದರು.
ಗ್ರಂಥ ಸ್ವಾಮ್ಯವೂ ಪ್ರಕಾಶನದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಪುಸ್ತಕ, ಗ್ರಂಥಗಳ ಅನುವಾದ ಮಾಡಲು ಮೂಲ ಲೇಖಕರ ಅನುಮತಿ ಅಗತ್ಯ. ತನ್ನ ಕೃತಿ ಇನ್ನೊಂದು ಭಾಷೆಯಲ್ಲಿ ಬರುತ್ತದೆ ಎಂದರೆ ಆ ಲೇಖಕ ನಿಗೆ ಇನ್ನಷ್ಟು ಸಂತೋಷವಾಗುತ್ತದೆ. ಗ್ರಂಥ ಗಳ ಅನುವಾದ, ಭಾವಾನುವಾದದ ಅತ್ಯುತ್ತಮ ಕೃತಿಗಳು ಜಗತ್ತಿನಲ್ಲಿ ಅನೇಕ ಭಾಷೆಗಳಲ್ಲಿ ಬಂದಿವೆ ಎಂದು ಹೇಳಿದರು.

ಗ್ರಂಥ ಸ್ವಾಮ್ಯದ ಕುರಿತು ಪ್ರಸ್ತಾಪಿಸಿದ ಅವರು, ಗ್ರಂಥದ ಹಕ್ಕು ಲೇಖಕನದ್ದೇ ಆಗಿ ರುತ್ತದೆ. ಆದರೆ ಲೇಖಕ ಮೃತಪಟ್ಟ 40 ವರ್ಷಗಳ ನಂತರ ಆ ಲೇಖಕನ ಕೃತಿ ಸಾರ್ವ ಜನಿಕ ಸ್ವತ್ತಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲ ಜಿ.ಪ್ರಸಾದ ಮೂರ್ತಿ ಅಧ್ಯ ಕ್ಷತೆ ವಹಿಸಿದ್ದರು. ಕನ್ನಡ ಸಹಾಯಕ ಪ್ರಾಧ್ಯಾ ಪಕರಾದ ಎಂ.ಎಸ್.ಸಂಧ್ಯಾರಾಣಿ, ಹೆಚ್.ಬಿ. ಬಸಪ್ಪ, ಕಾಲೇಜಿನ ಜಾಣ ಜಾಣೆಯರ ಬಳಗದ ಅಧ್ಯಕ್ಷೆ ಬಿ.ವಿ.ಲಾವಣ್ಯ, ಕಾಲೇಜಿನ ವಿದ್ಯಾರ್ಥಿನಿಯರಾದ ಎಸ್.ಕಾವ್ಯ, ಕೆ.ಕಾವ್ಯ, ವೀಣಾ ಇನ್ನಿತರರು ಉಪಸ್ಥಿತರಿದ್ದರು.

Translate »