ನವದೆಹಲಿ: ವಿದ್ಯುತ್ ಚಾಲಿತ ವಾಹನಗಳ ಮೇಲಿನ ತೆರಿಗೆ ದರವನ್ನು ಶೇ.12ರಿಂದ ಶೇ.5ಕ್ಕೆ ತಗ್ಗಿಸಲು ಸರಕು ಮತ್ತು ಸೇವಾ ತೆರಿಗೆ ಮಂಡಳಿ ನಿರ್ಧರಿಸಿದೆ. ನೂತನ ತೆರಿಗೆ ದರ ಆ.1ರಿಂದ ಜಾರಿಗೆ ಬರಲಿದೆ. ವಿದ್ಯುತ್ ಚಾಲಿತ ಚಾರ್ಜರ್‍ಗಳ ಮೇಲಿನ ಜಿಎಸ್ಟಿ ದರವನ್ನು ಶೇ.18ರಿಂದ ಶೇ.5ಕ್ಕೆ ತಗ್ಗಿಸಲು ಮಂಡಳಿ ನಿರ್ಧರಿಸಿದೆ. ದೆಹಲಿಯಲ್ಲಿ ನಡೆದ ಜಿಎಸ್ಟಿ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ವಿಡಿಯೊ ಕಾನ್ಫರೆನ್ಸ್ ನಡೆಯಿತು. ಸ್ಥಳೀಯ ಅಧಿಕಾರಿಗಳಿಂದ ಎಲೆಕ್ಟ್ರಿಕ್ ಬಸ್ಸುಗಳನ್ನು ಖರೀದಿಸುವವರಿಗೆ ಜಿಎಸ್‍ಟಿ ವಿನಾಯಿತಿ ಕೂಡ ಮಂಡಳಿ ಒಪ್ಪಿಗೆ ನೀಡಿದೆ.
