ಡಿ.26ರಂದು ವರ್ಷದ ಕೊನೆಯ ಸೂರ್ಯಗ್ರಹಣ: ಕುಟ್ಟ ಬಳಿ ವಿಸ್ಮಯದ ಖಗೋಳ ವಿದ್ಯಮಾನ ವೀಕ್ಷಣೆಗೆ ಸಿದ್ಧತೆ
ಕೊಡಗು

ಡಿ.26ರಂದು ವರ್ಷದ ಕೊನೆಯ ಸೂರ್ಯಗ್ರಹಣ: ಕುಟ್ಟ ಬಳಿ ವಿಸ್ಮಯದ ಖಗೋಳ ವಿದ್ಯಮಾನ ವೀಕ್ಷಣೆಗೆ ಸಿದ್ಧತೆ

December 17, 2019

ಮಡಿಕೇರಿ, ಡಿ.16- ಸೂರ್ಯಗ್ರಹಣ ಖಗೋಳ ವಿಜ್ಞಾನದ ವಿಸ್ಮಯಗಳಲ್ಲಿ ಒಂದು. ಈ ವರ್ಷದ ಮೂರನೇ ಮತ್ತು ಕಡೆಯ ಸೂರ್ಯಗ್ರಹಣ ಡಿ. 26ರಂದು ಸಂಭವಿಸಲಿದೆ. ಈ ವಿಸ್ಮಯವನ್ನು ವೀಕ್ಷಿ ಸಲು ಅನುವಾಗುವಂತೆ ಮೈಸೂರು ಸೈನ್ಸ್ ಫೌಂಡೇಷÀನ್ (ಒSಈ) ಕೊಡಗು ಜಿಲ್ಲೆಯ ಕುಟ್ಟ ಗ್ರಾಮದ ಬಳಿಯ ಕಾಯಿಮಾನಿ ಎಂಬ ಹಳ್ಳಿಯಲ್ಲಿ ‘ಆಕಾಶ ವೀಕ್ಷಣೆ’ ಕಾರ್ಯ ಕ್ರಮವನ್ನು ಅಂದು (ಡಿ. 26) ಆಯೋಜಿ ಸಿದೆ. ಈ ಕಾರ್ಯಕ್ರಮದಲ್ಲಿ 2,000 ಹೆಚ್ಚು ಮಕ್ಕಳು ಹಾಗೂ ಖಗೋಳ ವಿಜ್ಞಾನಾ ಸಕ್ತರು ಭಾಗವಹಿಸುವ ನಿರೀಕ್ಷೆಯಿದೆ.

ಈ ತಿಂಗಳ 26ರಂದು ಜರುಗಲಿರುವ ಗ್ರಹಣ ತುಸು ವಿಶೇಷವಾಗಿದ್ದು, ಅಂದು ಚಂದ್ರನು ಭೂಮಿಗೆ ಗರಿಷ್ಠ ದೂರದಲ್ಲಿರು ತ್ತಾನೆ. ಆದುದರಿಂದ ಸೂರ್ಯನನ್ನು ಸಂಪೂರ್ಣವಾಗಿ ಮರೆಮಾಡಲಾಗದೇ ಸೂರ್ಯನ ಮಧ್ಯದಲ್ಲಿ ದೊಡ್ಡ ಕಪ್ಪು ಬಿಂದಿಯಂತೆ ಚಂದ್ರನು ಕಾಣಲಿದ್ದಾನೆ. ಸೂರ್ಯನು ಅಂದು ತನ್ನ ಹೊರ ಅಂಚನ್ನು ಪ್ರದರ್ಶಿಸುವಾಗ ‘ಬಂಗಾರದ ಬಳೆ’ (ಖiಟಿg oಜಿ ಈiಡಿe)ಯಂತೆ ಪ್ರಜ್ವಲಿ ಸಲಿದ್ದಾನೆ. ಇತ್ತ ಪಾಶ್ರ್ವವೂ ಅಲ್ಲದ ಅತ್ತ ಸಂಪೂರ್ಣವೂ ಅಲ್ಲದ ಈ ಗ್ರಹಣವನ್ನು ‘ಕಂಕಣ ಗ್ರಹಣ’ವೆಂದು ಕರೆಯುತ್ತಾರೆ. ಕಂಕಣವೆಂದರೆ ಬಳೆ ಎಂದರ್ಥ. ಸೂರ್ಯ ಗ್ರಹಣವನ್ನು ಬರಿಗಣ್ಣಿನಿಂದ ನೋಡುವುದು ಬಹಳ ಅಪಾಯಕಾರಿ. ಹಾಗೆ ನೋಡುವುದ ರಿಂದ ಶಾಶ್ವತ ಕುರುಡುತನಕ್ಕೆ ಕಾರಣವಾ ಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಈ ಕೌತುಕದ ಕ್ಷಣವನ್ನು ಸುರಕ್ಷಿತವಾಗಿ ನೋಡಿ ಕಣ್ತುಂಬಿಕೊಳ್ಳಲು ಮೈಸೂರು ಸೈನ್ಸ್ ಫೌಂಡೇಷನ್ ಆಸಕ್ತರಿಗೆ ವೀಕ್ಷಣೆಯ ವ್ಯವಸ್ಥೆಯನ್ನು ಮಾಡಿದೆ. ಮಾಧ್ಯಮಿಕ ಮತ್ತು ಹಿರಿಯ ಮಾಧ್ಯಮಿಕ ಶಿಕ್ಷಣ ಕ್ಷೇತ್ರ ದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಾ ರಾಷ್ಟ್ರದ ಪುಣೆಯ ಅಸೀಮಿತ್ ಎಜುಟೆಕ್ ಪ್ರೈ.ಲಿ.ನ ಸಹಯೋಗದಲ್ಲಿ ಈ ಆಕಾಶ ವೀಕ್ಷಣಾ ಕಾರ್ಯಕ್ರಮ ಆಯೋಜಿಸಲಾಗಿದೆ.

ಮೈಸೂರು ಸೈನ್ಸ್ ಫೌಂಡೇಷನ್‍ನ ಜಿ.ಬಿ.ಸಂತೋಷ್‍ಕುಮಾರ್ ‘ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ‘ದಕ್ಷಿಣ ಭಾರತದ ಕೇರಳ ಹಾಗೂ ತಮಿಳುನಾಡಿನ ಕೆಲವೆಡೆಗಳಲ್ಲಿ ಗ್ರಹಣದ ಕೇಂದ್ರಪಥ ಹಾದು ಹೋಗಲಿದೆ. ಕರ್ನಾಟಕದ ಮಡಿಕೇರಿಯ ಸಮೀಪದ ಕೆಲವು ಸ್ಥಳಗಳಲ್ಲಿ ಗ್ರಹಣವನ್ನು ಸಂಪೂರ್ಣವಾಗಿ ನೋಡಬಹುದು. ಗುಂಡ್ಲು ಪೇಟೆಯ ಮಂಗಳ ಗ್ರಾಮ, ತಮಿಳುನಾಡಿನ ಕೊಯಮತ್ತೂರು, ದಕ್ಷಿಣ ಕನ್ನಡದ ಉಡುಪಿ ಮತ್ತು ದಕ್ಷಿಣ ಕೊಡಗಿನ ಕುಟ್ಟ ಗ್ರಾಮವು ಕೇಂದ್ರ ಪಥದ ಹತ್ತಿರದಲ್ಲಿರುವುದ ರಿಂದ ಈ ಭೂ ಭಾಗಗಳಲ್ಲಿ ಗ್ರಹಣವನ್ನು ಸ್ಪಷ್ಟವಾಗಿ ವೀಕ್ಷಿಸಬಹುದು. ಆದರೆ, ಮೈಸೂರಿನಲ್ಲಿ ಸೂರ್ಯ ಗ್ರಹಣವು ಶೇ. 75ರಷ್ಟು ಮಾತ್ರ ಗೋಚರಿಸಲಿದೆ. ಉಳಿದಂತೆ ಕೇಂದ್ರ ಪಥಕ್ಕೆ ಇರುವ ಅಂತರಕ್ಕೆ ತಕ್ಕಂತೆ ಗೋಚರತೆ ಶೇಕಡಾವಾರು ಕಡಿಮೆಯಾ ಗುತ್ತದೆ’ ಎಂದು ತಿಳಿಸಿದರು.

ಆಹಾರ ಮತ್ತು ವಸತಿ: ವಿರಾಜಪೇಟೆಯ ಕೆಲ ಕಲ್ಯಾಣ ಮಂಟಪಗಳಲ್ಲಿ ವಿದ್ಯಾರ್ಥಿ ಗಳಿಗೆ ಅಗತ್ಯವಾದ ಆಹಾರ ಮತ್ತು ವಸತಿ ಸೌಕರ್ಯವನ್ನು ಕಲ್ಪಿಸಲಾಗಿದೆ. ‘ಮೈಸೂರು, ಬೆಂಗಳೂರು ಮತ್ತು ಕೊಡಗಿನ ವಿದ್ಯಾರ್ಥಿ ಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿ ದ್ದಾರೆ’ ಸಂತೋಷ್ ತಿಳಿಸಿದರು.

ಆಯ್ಕೆ ಪ್ರಕ್ರಿಯೆ: ಮೈಸೂರು ಸೈನ್ಸ್ ಫೌಂಡೇಷನ್ ಖಗೋಳ ವಿಜ್ಞಾನದಲ್ಲಿ ಆಸಕ್ತಿ ಹೊಂದಿರುವ 10ಮಕ್ಕಳು ಮತ್ತು ಶಿಕ್ಷಕರನ್ನು ಕಾರ್ಯಕ್ರಮದಲ್ಲಿ ಪಾಲ್ಗೊ ಳ್ಳಲು ಕಳುಹಿಸುವಂತೆ ಹಲವು ಶಾಲೆ ಗಳನ್ನು ಈಗಾಗಲೇ ಸಂಪರ್ಕಿಸಲಾಗಿದೆ. ಮೊದ ಲಿಗೆ ಬಂದವರಿಗೆ ಪ್ರಥಮ ಆದ್ಯತೆ ನೀಡ ಲಾಗುತ್ತದೆ ಎಂದು ತಿಳಿಸಿದ ಸಂತೋಷ್ ‘ನಾವು ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್‍ಗೆ ಸೇರಲು ಪ್ರಯತ್ನಿಸುತ್ತಿರುವುದ ರಿಂದ ನೋಂದಣಿ ಪ್ರಕ್ರಿಯೆ ಇನ್ನೂ ನಡೆಯುತ್ತಲಿದೆ’ ಎಂದು ಹೇಳಿದರು.

ಗುಂಡ್ಲುಪೇಟೆಯ ಮಂಗಳ ಗ್ರಾಮವು ಬಂಡೀಪುರ ಹುಲಿ ರಕ್ಷಿತಾರಣ್ಯದ ವ್ಯಾಪ್ತಿಗೆ ಬರುವುದರಿಂದ ಅರಣ್ಯ ಇಲಾಖೆಯಿಂದ ನಮಗೆ ಅನುಮತಿ ದೊರೆಯಲಿಲ್ಲ. ಕೊಯಮತ್ತೂರು ಅಥವಾ ಉಡುಪಿಗೆ 2,000 ಜನರನ್ನು ಕರೆದೊಯ್ಯುವುದು ಕಷ್ಟ. ಹೀಗಾಗಿ ನಾವು ದಕ್ಷಿಣ ಕೊಡಗಿನ ಕುಟ್ಟ ಗ್ರಾಮವನ್ನು ಆಯ್ಕೆ ಮಾಡಿಕೊಂಡೆವು. ಡಿ. 26ರಂದು ಬೆಳಿಗ್ಗೆ 8ರಿಂದ 11ರವರೆಗೆ ಸೂರ್ಯಗ್ರಹಣವನ್ನು ಇಲ್ಲಿ ಸಾರ್ವಜನಿಕರು ಸುರಕ್ಷಿತವಾಗಿ ವೀಕ್ಷಿಸಬಹುದಾಗಿದೆ.
-ಜಿ.ಬಿ. ಸಂತೋಷ್, ಮೈಸೂರು ಸೈನ್ಸ್ ಫೌಂಡೇಷನ್

ಕಾಯಿಮಾನಿ ಹಳ್ಳಿಯ ಕಾಫಿ ತೋಟ
ಕುಟ್ಟ ಗ್ರಾಮದ ಬಳಿಯ ಕಾಯಿಮಾನಿ ಎಂಬ ಹಳ್ಳಿಯ ಕೊಳೆರ ರವಿ ಕರಿ ಯಪ್ಪರವರಿಗೆ ಸೇರಿದ ಕಾಫಿ ತೋಟದ ಕಾಫಿ ಒಣಗಿಸುವ ಮೈದಾನದದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾ ಗಿದೆ. ‘ರಸ್ತೆಯ ಪಕ್ಕದಲ್ಲೇ ಇರುವ ವಿಶಾಲ ವಾದ ಈ ಜಾಗವು ಆಕಾಶ ವೀಕ್ಷಣೆಗೆ ಸೂಕ್ತ ಸ್ಥಳವಾಗಿದೆ’ ಎಂದು ಈ ಸ್ಥಳವನ್ನು ಗುರುತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಂಚಳ್ಳಿ ಸರ್ಕಾರಿ ಶಾಲೆಯ ಶಿಕ್ಷಕ ಕೊಟ್ರಂಗಡ ಸೋಮಯ್ಯ ತಿಳಿಸಿದರು.

‘ಎರಡು ತಿಂಗಳ ಹಿಂದೆ ಸಂಸ್ಥೆಗೆ ಸೇರಿದ ಕೆಲವರು ನನ್ನನ್ನು ಸಂಪರ್ಕಿಸಿ ಈ ಕಾರ್ಯಕ್ರಮವನ್ನು ಆಯೋಜಿಸಲು ಸೂಕ್ತವಾದ ಸ್ಥಳವೊಂದನ್ನು ಸೂಚಿಸ ಬೇಕೆಂದು ನನ್ನನ್ನು ಕೇಳಿಕೊಂಡರು. ರಸ್ತೆಯ ಪಕ್ಕದಲ್ಲೇ ಇರುವ ಕೈಮಾಣಿ ಕಾಫಿ ತೋಟದಲ್ಲಿ ಶೌಚಾಲಯ ಸೇರಿದಂತೆ ಮಕ್ಕಳಿಗೆ ಅಗತ್ಯವಾದ ಎಲ್ಲಾ ಸೌಲಭ್ಯ ಗಳೂ ಇವೆ. ಶೌಚಾಲಯ ವನ್ನು ಬಳಸಲು ಅವಕಾಶ ನೀಡು ವಂತೆ ಸ್ಥಳೀಯ ನಿವಾಸಿಗಳಲ್ಲೂ ನಾವು ವಿನಂತಿಸಿಕೊಂಡಿದ್ದೇವೆ’ ಎಂದು ಸೋಮಯ್ಯ ತಿಳಿಸಿದರು.

ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್
ಸೂರ್ಯಗ್ರಹಣವನ್ನು ವೀಕ್ಷಿಸಲು ಒಂದೇ ಸ್ಥಳದಲ್ಲಿ ಅತಿ ಹೆಚ್ಚು ಸಂಖ್ಯೆಯ ಮಕ್ಕಳನ್ನು ಒಟ್ಟುಗೂಡಿಸುತ್ತಿರುವ ಈ ಕಾರ್ಯಕ್ರಮ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್‍ಗೆ ಸೇರಿಸಲು ಕಾರ್ಯಕ್ರಮದ ಆಯೋಜಕರು ಈಗಾಗಲೇ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್‍ನಲ್ಲಿ ನೋಂದಾಯಿಸಿದ್ದಾರೆ. ‘ಮೈಸೂರು ಸೈನ್ಸ್ ಫೌಂಡೇಷÀನ್ ಸಂಸ್ಥೆಯು ಡಿ. 17ರಂದು ವಿಡಿಯೋ ವೀಕ್ಷಣೆ ಎಂಬ ಮತ್ತೊಂದು ಕಾರ್ಯ ಕ್ರಮವನ್ನು ಆಯೋಜಿಸಿದ್ದು, ಅಂದು ವಿದ್ಯಾರ್ಥಿಗಳು ಗ್ರಹಣಕ್ಕೆ ಸಂಬಂಧಪಟ್ಟ ವೀಡಿಯೊಗಳನ್ನು ನೋಡಿ ಗ್ರಹಣವನ್ನು ವೀಕ್ಷಿಸಲು ತಯಾರಾಗಲಿದ್ದಾರೆ. ಡಿ. 26ರಂದು ನಡೆಯಲಿರುವ ಆಕಾಶ ವೀಕ್ಷಣೆಗೆ ಮಹಾರಾಷ್ಟ್ರ, ತಮಿಳುನಾಡು ಮತ್ತು ಕೇರಳದಿಂದಲೂ ವಿದ್ಯಾರ್ಥಿಗಳು ಬರಲಿದ್ದಾರೆ’ ಎಂದು ಸಂತೋಷ್ ತಿಳಿಸಿದರು.

Translate »