ಮೈಸೂರಿನಲ್ಲಿ ಜೂನ್ 1ರಿಂದ  5ರವರೆಗೆ ಮಾವು ಮೇಳ ಕರ್ಜನ್ ಪಾರ್ಕ್‍ನಲ್ಲಿ ಮೇಳ ಆಯೋಜನೆ
ಮೈಸೂರು

ಮೈಸೂರಿನಲ್ಲಿ ಜೂನ್ 1ರಿಂದ  5ರವರೆಗೆ ಮಾವು ಮೇಳ ಕರ್ಜನ್ ಪಾರ್ಕ್‍ನಲ್ಲಿ ಮೇಳ ಆಯೋಜನೆ

May 25, 2018

ಮೈಸೂರು: ಸಾಂಸ್ಕøತಿಕ ನಗರಿ ಮೈಸೂರಿನ ಜನತೆಗೆ ವಿವಿಧ ತಳಿಯ ಮಾವಿನ ಹಣ ್ಣನ ರುಚಿ ತಣ ಸಲು ತೋಟಗಾರಿಕಾ ಇಲಾಖೆ ಜೂನ್ 1ರಿಂದ 5ರವರೆಗೆ ಕರ್ಜನ್ ಪಾರ್ಕ್‍ನಲ್ಲಿ ‘ಮಾವು ಮೇಳ’ ನಡೆಸಲು ನಿರ್ಧರಿಸಿದೆ ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜಿ.ಡಿ.ದಿನೇಶ್‍ಕುಮಾರ್ ತಿಳಿಸಿದ್ದಾರೆ.

ಈ ಸಾಲಿನ ಮಾವು ಮೇಳ ನಡೆಸುವುದಕ್ಕೆ ಸಂಬಂಧಿಸಿದಂತೆ ಮಾವು ಬೆಳೆಗಾರರೊಂದಿಗೆ ನಡೆಸಿದ ಸಭೆಯಲ್ಲಿ ಮೈಸೂರು ಜಿಲ್ಲೆಯ ವಿವಿಧೆಡೆಯಿಂದ ಸುಮಾರು 40ಕ್ಕೂ ಹೆಚ್ಚು ಮಂದಿ ಮಾವು ಬೆಳೆಗಾರರು ಆಗಮಿಸಿದ್ದರು. ಈ ಸಭೆಯಲ್ಲಿ ಜೂನ್ 1ರಿಂದ 5ರವರೆಗೆ ಮಾವು ಮೇಳ ನಡೆಸುವುದಕ್ಕೆ ನಿರ್ಧರಿಸಲಾಯಿತು. ಮಾವು ಮೇಳದಲ್ಲಿ ಪಾಲ್ಗೊಳ್ಳಲಿರುವ ಬೆಳೆಗಾರರಿಂದ ಅರ್ಜಿ ಅಹ್ವಾನಿಸಲಾಗಿದೆ. ಮೇ.28ಕ್ಕೆ ಮೇಳದಲ್ಲಿ ಎಷ್ಟು ಮಂದಿ ಮಾವು ಬೆಳೆಗಾರರು ಪಾಲ್ಗೊಳ್ಳಲಿದ್ದಾರೆ. ಎಷ್ಟು ಮಳಿಗೆ ತೆರೆಯಲಾಗುತ್ತದೆ. ಯಾವ ಯಾವ ತಳಿಯ ಮಾವಿನಹಣ್ಣುಗಳನ್ನು ತರಲಾಗುತ್ತದೆ ಎಂಬ ಮಾಹಿತಿ ನಿಖರವಾಗಿ ತಿಳಿಯಲಿದೆ ಎಂದು ಹೇಳಿದರು.

ನಿಫಾ ಬಗ್ಗೆ ಎಚ್ಚರ: ಮಾವು ಮೇಳದಲ್ಲಿ ಪಾಲ್ಗೊಳ್ಳುವ ಬೆಳೆಗಾರರಿಗೆ ಈಗಾಗಲೇ ಸಭೆಯಲ್ಲಿ ನಿಫಾ ವೈರಸ್ ಬಗ್ಗೆ ಮಾಹಿತಿ ನೀಡಲಾಗಿದೆ. ಕೇರಳದಲ್ಲಿ ಹಾಗೂ ವಿವಿಧ ದೇಶಗಳಲ್ಲಿ ನಿಫಾ ವೈರಸ್ ಹರಡಿ ಸಾವು ನೋವು ಸಂಭವಿಸಿರುವುದರಿಂದ ಮಾವು ಮೇಳಕ್ಕೆ ತರುವ ಮಾವಿನ ಹಣ್ಣುಗಳ ಬಗ್ಗೆ ಗಮನಹರಿಸಬೇಕು. ಯಾವುದೇ ಪಕ್ಷಿ ಕಚ್ಚಿರುವ ಹಣ್ಣನ್ನು ಹಾಗೂ ಪಕ್ಷಿಗಳು ಉದುರಿಸಿರುವ ಹಣ್ಣುಗಳನ್ನು ತರಬಾರದೆಂದು ಸೂಚನೆ ನೀಡಲಾಗಿದೆ. ಇದರೊಂದಿಗೆ ಹಣ್ಣುಗಳಿಗೆ ಯಾವುದೇ ರಾಸಾಯನಿಕ ದ್ರಾವಣ ಸಿಂಪಡಿಸದಂತೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಹೇಳಿದರು.

ಮೇ.28ರ ನಂತರ ಮಾವು ಮೇಳದಲ್ಲಿ ಪಾಲ್ಗೊಳ್ಳುವವರ ಅಂತಿಮ ಪಟ್ಟಿ ಸಿದ್ಧವಾಗಲಿದೆ. ಇದರಿಂದ ಮೇ.28 ಅಥವಾ 29ರಂದು ಮೇಳದಲ್ಲಿ ಪಾಲ್ಗೊಳ್ಳುವ ಮಾವು ಬೆಳೆಗಾರರು, ವ್ಯಾಪಾರಿಗಳಿಗೆ ನಿಫಾ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಾಗಾರವನ್ನು ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದರು

Translate »