ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ…!
ಮೈಸೂರು

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ…!

May 25, 2018

ಅವೈಜ್ಞಾನಿಕ ಪೈಪ್‍ಲೈನ್ ಕಾಮಗಾರಿ, ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ಮಿಸಿದ ಚುಂಚನಹಳ್ಳಿ ಕೆರೆಗೆ ಬಾರದ ನೀರು

ತಗಡೂರು:  ಕೆರೆಗಳಲ್ಲಿ ನೀರಿಲ್ಲದೆ ಇರುವುದರಿಂದ ಒಂದೆಡೆ ಅಂತರ್ಜಲ ಕುಸಿತದಿಂದ ಜಾನು ವಾರುಗಳಿಗೆ, ಪ್ರಾಣ ಪಕ್ಷಿಗಳಿಗೆ ಕುಡಿ ಯಲು ನೀರಿಲ್ಲ, ರೈತರಿಗೆ ಬೆಳೆಯಿಲ್ಲ, ಇದಕ್ಕೆಲ್ಲ ಪರಿಹಾರ ಸಿಗುತ್ತದೆ ಎಂದು ಕಾದು ಕುಳಿತಿದ್ದರೂ ಇನ್ನೂ ಕೈಗೆ ಬಂತು ಅನ್ನುವಷ್ಟರಲ್ಲಿ ಬಾಯಿಗೆ ಬರದೆ ನಿರಾಶೆಯಾಗಿದ್ದಾರೆ.

ಹೌದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಡುವ ನಂಜನಗೂಡು ತಾಲೂಕಿನ ಚುಂಚನಹಳ್ಳಿ ಗ್ರಾಮದ ಹೊರ ವಲಯದಲ್ಲಿರುವ ಶ್ರೀ ಕಡಕಲಕಟ್ಟೆ ಮಹ ದೇಶ್ವರಸ್ವಾಮಿ ದೇವಸ್ಥಾನದ ಪಕ್ಕದಲ್ಲೆ ಇರುವ ಮಾದಯ್ಯನಗುಡಿ ಕೆರೆಗೆ ಇನ್ನೂ ನೀರು ಬಾರದೆ ಗ್ರಾಮಸ್ಥರಲ್ಲಿ ಬೇಸರ ತಂದಿದೆ.

ಚುಂಚನಹಳ್ಳಿ ಗ್ರಾಮದಲ್ಲಿರುವ ಮಾದಯ್ಯನ ಗುಡಿ ಕೆರೆ ಸುಮಾರು 5 ಎಕರೆ ಪ್ರದೇಶ ವನ್ನು ಹೊಂದಿದ್ದು, ಈ ಕೆರೆಯನ್ನು ನಾಲ್ವಡಿ ಕೃಷ್ಣರಾಜ ಒಡೆಯರು ನಿರ್ಮಿಸಿದ್ದಾರೆ ಎಂದು ಹೆಸರುವಾಸಿಯಾಗಿದೆ. ಸರ್ಕಾರ ಕೆರೆಗೆ ನೀರು ತುಂಬಿಸುವ ಯೋಜನೆಗೆ ಈ ಕೆರೆಯನ್ನು ಸೇರಿಸಿತ್ತು. ಸುಮಾರು 30 ಲಕ್ಷರೂ ಅನುದಾನವನ್ನು ಮಂಜೂರು ಮಾಡಿದೆ. ಕೆರೆಗೆ ನೀರು ತುಂಬಿಸುವ ಯೋಜನೆಯಲ್ಲಿ ಮೊದಲನೇ ಹಂತದಲ್ಲಿ ನಂಜನಗೂಡು ತಾಲೂಕಿನ ಕೋಣನೂರು ಕೆರೆಗೆ ಕಬಿನಿಯಿಂದ ಪೈಪ್‍ಲೈನ್ ಮೂಲಕ ನೀರು ಹರಿಸಿ ತುಂಬಲಾಗಿದೆ. ಕೋಣ ನೂರು ಕೆರೆಗೆ ಬಸವರಾಜಪುರ ಗ್ರಾಮದ ಬಳಿ ಹಾದು ಹೋಗಿರುವ ಪೈಪ್‍ಲೈನ್‍ಗೆ ಚುಂಚನಹಳ್ಳಿ ಕೆರೆಗೆ ಸಂಪರ್ಕ ಕಲ್ಪಿಸ ಲಾಗಿದೆ. ಕಳೆದ 3 ತಿಂಗಳ ಹಿಂದೆಯೇ ಪೈಪ್ ಲೈನ್ ಕಾಮಗಾರಿ ಮುಗಿದಿದೆ. ಇನ್ನೂ ಸಹ ನೀರು ಕೆರೆಗೆ ತಲುಪಿಲ್ಲ. ಕೆರೆಗೆ ನೀರು ತುಂಬಿ ಸಲು 30 ಲಕ್ಷ ರೂ. ಬಿಡುಗಡೆಯಾಗಿದೆ. ಆದರೆ ಹಣವನ್ನು ದುರ್ಬಳಕೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಅವೈಜ್ಞಾನಿಕ ಪೈಪ್ ಲೈನ್ ಕಾಮಗಾರಿ: ಕೋಣನೂರು ಕೆರೆಗೆ ಬಸವರಾಜಪುರ ಗ್ರಾಮದ ಬಳಿ ಹಾದು ಹೋಗಿರುವ ಪೈಪ್ ಲೈನ್‍ಗೆ ಚುಂಚನಹಳ್ಳಿ ಕೆರೆಗೆ ಅಳವಡಿಸಿ ರುವ ಪೈಪ್‍ನ್ನು ಸಂಪರ್ಕ ಮಾಡಲಾಗಿದೆ. ಇಲ್ಲಿಂದ ಚುಂಚನಹಳ್ಳಿ ಕೆರೆಗೆ ಸುಮರು 3 ಕಿಲೋ ಮೀಟರ್ ವರೆಗೆ ಪೈಪ್‍ಲೈನ್ ಕಾಮಗಾರಿ ಮಾಡಿದ್ದು, ಪೈಪ್‍ಲೈನ್ ಹೋಗಿರುವ ಮಾರ್ಗದ ಮಧ್ಯೆ ಹತ್ತಿ ಕೆರೆ ಹಳ್ಳದ ಬಳಿ ಪೈಪ್ ಲೈನ್‍ಗೆ ಪಿಲ್ಲರ್ ಕಟ್ಟಿ ಪೈಪ್‍ನ್ನು ಅಳವಡಿಸಬೇಕಿತ್ತು. ಆದರೆ ಇಂಜಿನಿಯರ್ ಎಡವಟ್ಟಿನಿಂದ ಪೈಪ್‍ನ್ನು ಹಾಗೆಯೇ ಹಳ್ಳದಲ್ಲಿ ಬಿಟ್ಟಿದ್ದಾರೆ. ಹಳ್ಳದಲ್ಲಿ ರುವ ಪೈಪ್‍ಲೈನ್‍ಯಿಂದ ಎತ್ತರವಾಗಿ ರುವ ಪ್ರದೇಶಕ್ಕೆ ನೀರು ಹೋಗಲು ಸಾಧ್ಯವಾಗುತ್ತಿಲ್ಲ. ಸ್ವಲ್ಪ ದಿನಗಳಲ್ಲಿ ಕೆರೆಗೆ ನೀರು ಬರುತ್ತದೆ ಎಂದು ನಂಬಿಕೊಂಡು ಕುಳಿತ ಗ್ರಾಮಸ್ಥರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬುದಂತಾಗಿದೆ.

ನೀರಿನ ತೊಟ್ಟಿ ನಿರ್ಮಿಸಿಲ್ಲ : ಕೆರೆಗೆ ನೀರು ತುಂಬಲು ಅಳವಡಿಸಿರುವ ಪೈಪ್‍ಗೆ ಆ ಸ್ಥಳದಲ್ಲಿ ಒಂದು ತೊಟ್ಟಿಯನ್ನು ನಿರ್ಮಾಣ ಮಾಡಿ, ಆ ನೀರಿನ ತೊಟ್ಟಿ(ಬುಗ್ಗೆ) ತುಂಬಿ ಹರಿದು ಕೆರೆಗೆ ನೀರು ಬಿಡಬೇಕು ಆದರೆ ಇಲ್ಲಿ ತೆಗೆದುಕೊಂಡ ಬಂದ ಪೈಪ್ ಲೈನ್‍ನ್ನು ಹಾಗೆಯೇ ಕೆರೆಗೆ ಬಿಟ್ಟಿದ್ದಾರೆ ಇದರಿಂದ ಪೈಪ್ ಎತ್ತರದಲ್ಲಿದ್ದು, ನೀರು ಬರಲು ಸಾಧ್ಯ ವಾಗದೆ ಅವೈಜಾÐನಿಕ ಕಾಮಗಾರಿ ಮಾಡಿ ದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ನೀರಿಲ್ಲದೆ ಪರದಾಟ : ಮಳೆ ಆಶ್ರಯ ಪ್ರದೇಶವಾಗಿರುವ ದೊಡ್ಡಕವಲಂದೆ ಹೋಬಳಿಯ ಈ ಭಾಗದ ಜನರು ಹೆಚ್ಚು ಮಳೆಗೆ ಅವಲಂಬಿತರಾಗಿದ್ದಾರೆ. ಈ ಭಾಗದಲ್ಲಿ ಅಂತರ್ಜಲ ಕುಸಿತ ದಿಂದ ಬೋರ್ ವೆಲ್‍ಗಳು ಬತ್ತಿ ಹೋಗಿವೆ. ಈ ಬೇಸಿಗೆಯಲ್ಲಿ ಕುಡಿಯುವ ನೀರಿಲ್ಲದೆ ಪರದಾಡುವಂತಾಗಿದೆ. ಚುಂಚನಹಳ್ಳಿ ಗ್ರಾಮವು ಬೆಟ್ಟಗುಡ್ಡಗಳಿಂದ ಕೂಡಿದ ಪ್ರದೇಶವಾಗಿದ್ದು, ಇಲ್ಲಿ ಹೆಚ್ಚಾಗಿ ಪ್ರಾಣ , ಪಕ್ಷಿಗಳು ವಾಸಿಸುತ್ತವೆ. ದಾಹವಾದಾಗ ಈ ಕೆರೆಗೆ ನೀರು ಕುಡಿಯಲು ಬರುತ್ತವೆ. ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಕೆರೆಗೆ ನೀರು ತುಂಬಿಸು ವವರೇ ಕಾದು ನೋಡಬೇಕಿದೆ.

Translate »