ಮಾಧ್ಯಮಗಳು ಬಲವಂತವಾಗಿ ರಾಜಕೀಯ ಸುದ್ದಿಗಳನ್ನು ಮನೆಗಳಿಗೆ ತೂರಿಸುತ್ತಿವೆ
ಮೈಸೂರು

ಮಾಧ್ಯಮಗಳು ಬಲವಂತವಾಗಿ ರಾಜಕೀಯ ಸುದ್ದಿಗಳನ್ನು ಮನೆಗಳಿಗೆ ತೂರಿಸುತ್ತಿವೆ

July 22, 2019

ಮೈಸೂರು,ಜು.21(ಎಸ್‍ಪಿಎನ್)-ಪ್ರಸ್ತುತ ರಾಜಕೀಯ ಸರ್ವಾಂತ ರ್ಯಾಮಿಯಾಗಿದ್ದು, ರಾಜಕೀಯ ಸುದ್ದಿ ಗಳನ್ನು ಮುದ್ರಣ ಮತ್ತು ದೃಶ್ಯ ಮಾಧ್ಯಮ ಗಳು ಎಲ್ಲರ ಮನೆಗಳಿಗೆ ಬಲವಂತವಾಗಿ ತೂರಿಸುತ್ತಿವೆ ಎಂದು ಕವಿಯತ್ರಿ ಡಾ.ಲತಾ ರಾಜಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರು ಜೆಎಲ್‍ಬಿ ರಸ್ತೆಯ ರೋಟರಿ ಐಡಿಯಲ್ ಜಾವಾ ಸಭಾಂಗಣದಲ್ಲಿ ಮೈಸೂರು ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಕವಿಗೋಷ್ಠಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲೇಖಕಿ ಶೈಲಾ ಪಿ.ಪಡುಕೋಟೆ ಅವರ `ಜೇನುಗೂಡು’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ಸಮಗ್ರ ಸುದ್ಧಿ ಭಿತ್ತರಿಸಬೇಕಾಗಿದ್ದ ಮಾಧ್ಯಮಗಳು ಇಂದು ತಮ್ಮ ಬಹುಪಾಲು ಸಮಯವನ್ನು ರಾಜಕೀಯ ಸುದ್ದಿಗಳಿಗೆ ಮೀಸಲಿಟ್ಟು ಎಲ್ಲವನ್ನೂ ರಾಜಕೀಯ ಮಯ ಮಾಡುತ್ತಿವೆ. ದಿನಪೂರ್ತಿ ರಾಜಕೀಯ ಬೆಳವಣಿಗೆಗೆ ಬಗ್ಗೆ ಸುದ್ದಿ ಪ್ರಕಟಿಸುತ್ತಿರುವ ಮಾಧ್ಯಮಗಳು, ಇತರೆ ಕ್ಷೇತ್ರಗಳ ಪ್ರಚಾರಕ್ಕೆ ಪ್ರಾಮುಖ್ಯತೆ ಅಷ್ಟಾಗಿ ನೀಡುತ್ತಿಲ್ಲ. ಬೇರೆ ಬೇರೆ ಕ್ಷೇತ್ರಗಳ ಸಾಧಕರ ಜೀವನ ಚರಿತ್ರೆ, ದೇಶದ ಅಭಿವೃದ್ಧಿ, ವಿe್ಞÁನ ವಿಷಯ ಗಳಿಗೆ ಅವಕಾಶ ನೀಡುತ್ತಿಲ್ಲ. ಚರ್ವಿತ ಚರ್ವಣ ಸುದ್ದಿಗಳನ್ನು ನೀಡುತ್ತಿರುವುದ ರಿಂದ ಸಾಹಿತ್ಯ ಕ್ಷೇತ್ರದವರೂ ರಾಜಕೀಯದ ಹಿಂದೆ ಬೀಳುವಂತಾಗಿದೆ ಎಂದರು.

ಸಾಂಸ್ಕøತಿಕ ನಗರಿ ಮೈಸೂರಲ್ಲಿ ದಿನನಿತ್ಯ ಹತ್ತಾರು ಸಾಹಿತ್ಯದ ಕಾರ್ಯಕ್ರಮಗಳು ನಡೆಯುತ್ತವೆ. ಅದರಲ್ಲಿ ಕೆಲವನ್ನಾದರೂ ಪ್ರಕಟಿಸಿದರೆ, ಕಷ್ಟಪಟ್ಟು ಆಯೋಜಿಸುವ ಸಂಘಟಿಕರಿಗೆ ಉತ್ಸಾಹ ಬರುತ್ತದೆ. ಸಂಘ -ಸಂಸ್ಥೆಗಳು ಸಂಘಟಿತರಾಗಿ ಜಾಗೃತಿ ಮೂಡಿಸಿದಾಗ ಶಾಂತಿ, ನೆಮ್ಮದಿಯ ಸಮಾಜ ನಿರ್ಮಿಸಬಹುದು. ಸಾವಿರಾರು ವರ್ಷ ಗಳಷ್ಟು ಇತಿಹಾಸವುಳ್ಳ ಕನ್ನಡ ಭಾಷೆ ಯನ್ನು ಉಳಿಸುವ ಜವಾಬ್ದಾರಿ ಯುವ ಪೀಳಿಗೆಗೆ ಮೇಲಿದೆ ಎಂದು ತಿಳಿಸಿದರು.

ಪ್ರಶಸ್ತಿ ಪುರಸ್ಕøತರು:ಈ ವೇಳೆ ವಿವಿಧ ಕ್ಷೇತ್ರದ ಸಾಧಕರಾದ ಡಾ.ಕೆ.ಲೀಲಾ ಪ್ರಕಾಶ್ ಅವರಿಗೆ `ಸಾಹಿತ್ಯ ಸರಸ್ವತಿ ಪ್ರಶಸ್ತಿ’, ಜಿ.ಚಂದ್ರಕಲಾ ಅವರಿಗೆ `ಸಾಂಸ್ಕøತಿಕ ಸೇವಾರತ್ನ ಪ್ರಶಸ್ತಿ’, ಯಶೋಧ ರಾಮ ಕೃಷ್ಣ ಅವರಿಗೆ `ಸಾಹಿತ್ಯ ಸಿಂಧು ಪ್ರಶಸ್ತಿ’, ಡಿ.ಕೆಂಚೇಗೌಡ ಅವರಿಗೆ `ರಂಗ ಚತುರ ಪ್ರಶಸ್ತಿ’, ವಿ.ತನ್ವಿ ಅವರಿಗೆ `ಬಾಲಶ್ರೀ ಪ್ರಶಸ್ತಿ’ ನೀಡಿ ಗೌರವಸಲಾಯಿತು. ಡಾ.ಸೌಗಂಧಿಕ ವಿ.ಜೋಯಿಸ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಉಪನ್ಯಾಸಕಿ ಡಾ.ಸಿ. ತೇಜೋವತಿ ಅವರು, ಲೇಖಕಿ ಶೈಲಾ ಪಿ.ಪಡುಕೋಟೆ ರಚಿತ `ಜೇನು ಗೂಡು’ ಕವನ ಸಂಕಲನ ಕುರಿತು ಮಾತನಾಡಿ ದರು. ಪ್ರತಿಷ್ಠಾನದ ಅಧ್ಯಕ್ಷ ಎಂ.ಬಿ. ಸಂತೋಷ್ ಅಧ್ಯಕ್ಷತೆ ವಹಿಸಿದ್ದರು. ಎಂ.ಎನ್. ಜಯಂತಿ, ಎನ್.ಸಿ. ಮಮತ, ಡಿ. ಮಂಜು ನಾಥ್, ರೇಖಾ ಸಂತೋಷ್, ಎಸ್. ದತ್ತ, ಸಿ. ವಾಣಿ ರಾಘವೇಂದ್ರ, ಎಸ್. ರಾಘವೇಂದ್ರ, ಬಿ.ಆರ್. ವಿಜಯಶ್ರೀ ಇದ್ದರು. ಎಚ್.ಸಿ. ಭಾರತಿ ಪ್ರಾರ್ಥಿಸಿದರೆ, ಎಚ್.ಎನ್. ಶಾರದಾ ನಿರೂಪಿಸಿದರು.

Translate »