ಮಾಧ್ಯಮಗಳು ಮಹಿಳೆಯ ಧ್ವನಿಯಾಗಬೇಕು
ಮೈಸೂರು

ಮಾಧ್ಯಮಗಳು ಮಹಿಳೆಯ ಧ್ವನಿಯಾಗಬೇಕು

February 6, 2020

ಮೈಸೂರು, ಫೆ.5-ಮಹಿಳೆಯನ್ನು ಯಾವುದೇ ಮಾಧ್ಯಮಗಳಲ್ಲಿ ಕೇವಲ ವಸ್ತುವಾಗಿ ಪರಿಗಣಿಸಿ, ಬಳಸಿ ಕೊಳ್ಳುವುದು ಸರಿಯಲ್ಲ. ಜಾಹೀರಾತು, ಸಿನೆಮಾ, ಪತ್ರಿಕೆ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪುರುಷ ಪ್ರಾಧಾನ್ಯತೆಯೇ ವಿಜೃಂಭಿಸುತ್ತಿದೆ. ಅಲ್ಲಿ ಹೆಣ್ಣಿನ ಧ್ವನಿಗಿಂತಲೂ ಗಂಡು ಧ್ವನಿಯೇ ಆದ್ಯತೆ ಪಡೆದುಕೊಳ್ಳುತ್ತಿದೆ ಎಂದು ಚಿಂತಕಿ ಬಾನುಮುಷ್ತಾಖ್ ಅಭಿಪ್ರಾಯಪಟ್ಟರು.

ಆಡಳಿತ ತರಬೇತಿ ಸಂಸ್ಥೆಯ ಸರ್.ಸಿ.ವಿ.ರಾಮನ್ ಸಭಾಂಗಣದಲ್ಲಿ ಬುಧವಾರ ನಡೆದ “ಮಹಿಳೆಯರನ್ನು ಮಾಧ್ಯಮದಲ್ಲಿ ಅನುಚಿತವಾಗಿ ಬಿಂಬಿಸುವಿಕೆಯ ಮೇಲೆ ನಿಷೇಧ” ಕುರಿತ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಶೀಲ ಮತ್ತು ಅಶ್ಲೀಲತೆಯ ನಡುವೆ ತೆಳುವಾದ ಗೆರೆಯಿದೆ. ಹೆಣ್ಣನ್ನು ವಸ್ತುವಾಗಿ ವ್ಯಾಪಾರೀಕರಣದ ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ. ಇದನ್ನು ತಡೆಯಲು ಕಾಯ್ದೆ ಇದ್ದರೂ ಕೂಡ ಸಮ ರ್ಪಕವಾಗಿ ಜಾರಿ ಮಾಡಲು ಏಕೆ ಸಾಧ್ಯವಾಗುತ್ತಿಲ್ಲ ಎಂಬು ದನ್ನು ಅಧಿಕಾರಿಗಳು ಅವಲೋಕಿಸಬೇಕು. ಕಾಲ ಕಾಲಕ್ಕೆ ರಾಜಕಾರಣಕ್ಕೆ ಬಳಕೆಯಾಗುವ ಆಯುಧವಾಗಿ ಮಾತ್ರ ಈ ಕಾಯ್ದೆ ಉಳಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಿಗಳು ತಮ್ಮ ವಿವೇಚನಾಧಿ üಕಾರ ಉಪಯೋಗಿಸಿ ಮಹಿಳೆಯ ಹಿತ ಕಾಯುವ ಈ ಕಾಯ್ದೆ ಅನುಷ್ಠಾನಕ್ಕೆ ತರಲು ಮುಂದಾಗಬೇಕು. ಮಹಿಳೆಗೆ ನೀತಿ ನಿರೂಪಣೆಯಲ್ಲಿ ಸ್ಥಾನವಿಲ್ಲ. ಪತ್ರಿ ಕೋದ್ಯಮ ಸೇರಿದಂತೆ ಬಹುತೇಕ ಎಲ್ಲಾ ವೃತ್ತಿಗಳಲ್ಲಿ ನೈತಿಕತೆ ಕಣ್ಮರೆಯಾಗಿ, ಆರ್ಥಿಕ ವಹಿವಾಟು ಲಾಭಗಳೇ ಮುಖ್ಯ ವಾದಾಗ ಅಲ್ಲಿ ಸಮುದಾಯ, ಸಮಾಜದ ಹಿತಾಸಕ್ತಿ ಗಳಿಗೆ ಧಕ್ಕೆ ಉಂಟಾಗುತ್ತದೆ. ಕನಿಷ್ಠ ಪಕ್ಷ ಪತ್ರಿಕೋದ್ಯಮವು ಮಹಿಳೆ ಯನ್ನು ತಾಯಿ ಸ್ಥಾನದಲ್ಲಿಟ್ಟು ನೋಡಬೇಕು ಎಂದರು.

ಪತ್ರಿಕೋದ್ಯಮಿಗಳು ಈ ನಿಟ್ಟಿನಲ್ಲಿ ಸ್ವಯಂ ನಿಯಂತ್ರಣ ಹಾಕಿಕೊಂಡರೆ ಅದರಿಂದ ಸಮಾಜಕ್ಕೆ ದೊಡ್ಡ ಪ್ರಯೋಜನ ವಾಗಲಿದೆ. ಅಧಿಕಾರಿಗಳಾದವರು ಜಾಣ್ಮೆ, ಕೌಶಲ್ಯಗಳಿಂದ ಪರಿಸ್ಥಿತಿ ನಿರ್ವಹಿಸುವುದನ್ನು ಕಲಿತುಕೊಳ್ಳಬೇಕು ಎಂದರು.

ಆಡಳಿತ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕಿ ಭಾಗ್ಯ ಲಕ್ಷ್ಮಿ ಮಾತನಾಡಿ, 72 ವರ್ಷಗಳಿಂದ ಸರ್ಕಾರ ಮತ್ತು ಸಮುದಾಯಗಳ ಸಮನ್ವಯತೆ ಎಷ್ಟು ಸಾಕಾರವಾಗಿದೆ ಎಂಬ ಅವಲೋಕನ ನಡೆಯುತ್ತಿದೆ. ಜಾಗತಿಕ ಮಟ್ಟದಲ್ಲಿ 32 ರಾಷ್ಟ್ರಗಳು ಒಟ್ಟಾಗಿ ಸರ್ಕಾರ ಮತ್ತು ಸಮುದಾಯಗಳ ಸುಸ್ಥಿರ ಅಭಿವೃದ್ಧಿ ಯೋಜನೆಯನ್ನು 17 ಗುರಿಗಳೊಂದಿಗೆ ಹೆಜ್ಜೆ ಇಟ್ಟಿದೆ. ಆಡಳಿತ ತರಬೇತಿ ಸಂಸ್ಥೆಯೂ ಸೇರಿದಂತೆ ವಿವಿಧ ಸಂಸ್ಥೆಗಳು ಅಧಿಕಾರಿಗಳು ಮತ್ತು ಕಾರ್ಯಾಂಗ ದಲ್ಲಿ ಇದನ್ನು ಅಳವಡಿಸಿಕೊಳ್ಳುವುದನ್ನು ಉತ್ತೇಜಿಸುತ್ತಿದೆ ಎಂದರು. ವಾರ್ತಾಭಾರತಿ ಪತ್ರಿಕೆಯ ನಿರ್ದೇಶಕರಾದ ಅಲಿ, ತರಬೇತಿ ಸಂಯೋಜಕಿ ಡಾ.ಕ್ರಿಸ್ಟಿನಾ ಕಾಂತರಾಜು, ಪೆÇಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Translate »