ಹೈದರಾಬಾದ್, ಫೆ.5- ಆಂಧ್ರಪ್ರದೇಶ ಸರ್ಕಾರ `ದಿಶಾ ಕಾಯ್ದೆ’ ಜಾರಿಗೆ ತಂದ ಬೆನ್ನಲ್ಲೇ ರಾಜ್ಯದ ರಾಜಮಹೇಂದ್ರವರಂ(ರಾಜಮಂಡ್ರಿ)ನಲ್ಲಿ ಮೊದಲ ದಿಶಾ ಪೆÇಲೀಸ್ ಠಾಣೆ ಉದ್ಘಾಟನೆಗೆ ಸಿದ್ಧಗೊಂಡಿದೆ ಎಂದು ವರದಿ ತಿಳಿಸಿದೆ.
ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಜಮಂಡ್ರಿ (ರಾಜ ಮಹೇಂ ದ್ರವರಂ)ಯಲ್ಲಿ ಮೊದಲ ದಿಶಾ ಪೆÇಲೀಸ್ ಠಾಣೆಯನ್ನು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಫೆ.7ರಂದು ಉದ್ಘಾಟಿಸಲಿದ್ದಾರೆ. ಮಹಿಳೆಯರ ಮೇಲಿನ ಅತ್ಯಾಚಾರ, ಆಸಿಡ್ ದಾಳಿ ಸೇರಿದಂತೆ ಫೆÇೀಕ್ಸೋ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ತ್ವರಿತ ವಿಚಾರಣೆ ನಡೆಸಿ 21 ದಿನಗಳಲ್ಲಿಯೇ ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಜಗನ್ ನೇತೃತ್ವದ ಆಂಧ್ರಪ್ರದೇಶ ಸರ್ಕಾರ ದಿಶಾ ಕಾಯ್ದೆಯನ್ನು ಜಾರಿಗೆ ತಂದಿತ್ತು. ಮೊದಲ ಹಂತದಲ್ಲಿ 13 ಜಿಲ್ಲೆಗಳಲ್ಲಿ 18 ದಿಶಾ ಪೆÇಲೀಸ್ ಠಾಣೆ ನಿರ್ಮಿಸಲಾಗು ವುದು ಎಂದು ಆಂಧ್ರ ಸರ್ಕಾರ ತಿಳಿಸಿದೆ. ರಾಜಮಹೇಂದ್ರವರಂನಲ್ಲಿ 4000 ಚದರಡಿ ಗಳಷ್ಟು ವಿಸ್ತಾರವಾದ ದಿಶಾ ಪೆÇಲೀಸ್ ಠಾಣೆ ನಿರ್ಮಾಣಗೊಂಡಿದೆ. 2 ಮಹಡಿ ಕಟ್ಟಡ ದಲ್ಲಿ ದೊಡ್ಡ ಹಾಲ್, ಕೌನ್ಸಿಲಿಂಗ್ ಹಾಲ್, ಫೀಡಿಂಗ್ ಹಾಲ್‍ಗಳಿವೆ. ಇಬ್ಬರು ಡಿವೈಎಸ್ಪಿ ಗಳನ್ನು ಈ ಠಾಣೆ ಮೇಲ್ವಿಚಾರಣೆಗೆ ನೇಮಕ ಮಾಡುವುದಾಗಿ ಸರ್ಕಾರ ತಿಳಿಸಿದೆ.