ಸಚಿವಾಕಾಂಕ್ಷಿಗಳ ಋಣ ತೀರಿಸಬೇಕಿದೆ
ಮೈಸೂರು

ಸಚಿವಾಕಾಂಕ್ಷಿಗಳ ಋಣ ತೀರಿಸಬೇಕಿದೆ

January 20, 2020

ಮೈಸೂರು, ಜ.19 (ಆರ್‍ಕೆಬಿ)- ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಕಾರಣರಾದ ಸಚಿವಾಕಾಂಕ್ಷಿಗಳ ಋಣವನ್ನು ನಾವು ತೀರಿಸಬೇಕಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಇಂದಿಲ್ಲಿ ತಿಳಿಸಿದರು.

ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಲು ಭಾನುವಾರ ಮೈಸೂರಿಗೆ ಆಗಮಿಸಿದ್ದ ಅವರು ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ದರು. ಸಚಿವ ಸ್ಥಾನದ ಆಕಾಂಕ್ಷಿಗಳ ವಿರುದ್ಧ ಟೀಕೆ ಸರಿಯಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ಅವರ ಋಣ ವನ್ನು ನಾವು ತೀರಿಸಬೇಕಿದೆ ಎಂದರು.

ಆದಷ್ಟು ಬೇಗ ಪೂರ್ಣ ಪ್ರಮಾ ಣದ ಸಚಿವ ಸಂಪುಟ ರಚನೆಯಾಗ ಲಿದೆ. ಕಾಂಗ್ರೆಸ್‍ನವರು ಅಧಿಕಾರದಲ್ಲಿ ದ್ದಾಗ ಜನ ವಿರೋಧಿ ಕೆಲಸ ಮಾಡಿ ದ್ದರು. ಜಾತಿ, ಜಾತಿಗಳನ್ನು ಒಡೆದು, ಧರ್ಮಗಳ ನಡುವೆ ಬೆಂಕಿ ಹಚ್ಚಿ ದರು. ಹೀಗಾಗಿ ಅವರನ್ನು ಜನರು ಮನೆಗೆ ಕಳಿಸಿದರು ಎಂದರು.

ಹೆಚ್‍ಡಿಕೆ ಈಗ ನಿರುದ್ಯೋಗಿ: ದೇಶಾ ದ್ಯಂತ ಜನ ಜಾಗೃತಿಯಲ್ಲಿ ತೊಡಗಿರುವ ಸಂಸದ ತೇಜಸ್ವಿ ಸೂರ್ಯ ಮತ್ತು ಅಂಕಣ ಕಾರ ಚಕ್ರವರ್ತಿ ಸೂಲಿಬೆಲೆ ಅಂತಹವರ ವಿರುದ್ಧ ಹಗುರವಾಗಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಯನ್ನು ಆಕ್ಷೇಪಿಸಿದ ಈಶ್ವರಪ್ಪ, ಇದು ಕುಮಾರಸ್ವಾಮಿ ಅವರಿಗೆ ಶೋಭೆ ತರುವುದಿಲ್ಲ. ಮುಖ್ಯಮಂತ್ರಿಯಾಗಿದ್ದ ಅವರು ಈಗ ಅಧಿಕಾರವಿಲ್ಲದೆ ನಿರುದ್ಯೋಗಿಯಾಗಿದ್ದಾರೆ. ಅವರು ಸಿನಿಮಾ ಮಾಡಿ ಕೊಂಡು ಕೂರುವುದು ಒಳ್ಳೆಯದು ಎಂದು ಈಶ್ವರಪ್ಪ ಜರಿದರು.

Translate »