ವಾಹನಗಳ ನಿಯಮಬಾಹಿರ ನಂಬರ್ ಪ್ಲೇಟ್ ವಿರುದ್ಧ ಕಾರ್ಯಾಚರಣೆ
ಮೈಸೂರು

ವಾಹನಗಳ ನಿಯಮಬಾಹಿರ ನಂಬರ್ ಪ್ಲೇಟ್ ವಿರುದ್ಧ ಕಾರ್ಯಾಚರಣೆ

December 29, 2019

ಮೈಸೂರು, ಡಿ.28(ಆರ್‍ಕೆ)- ವಾಹನಗಳಲ್ಲಿ ನಿಯಮಬಾಹಿರ ವಾಗಿ ಅಳವಡಿಸಿಕೊಂಡಿರುವ ನಂಬರ್ ಪ್ಲೇಟ್‍ಗಳನ್ನು ತೆರವು ಗೊಳಿಸುವ ಕಾರ್ಯಾಚರಣೆಯನ್ನು ಆರ್‍ಟಿಓ ಕಚೇರಿ ಅಧಿಕಾರಿ ಗಳು ಮೈಸೂರಲ್ಲಿ ಆರಂಭಿಸಿದ್ದಾರೆ. ನಂಬರ್ ಪ್ಲೇಟ್ ಮೇಲಿನ ಲೋಗೋ, ಚಿಹ್ನೆಗಳನ್ನು ತೆಗೆದು ನಿಯಮಾನುಸಾರ ವಾಹನಗಳಿಗೆ ನೋಂದಣಿ ಸಂಖ್ಯೆಗಳನ್ನು ಹಾಕಿಸಿಕೊಳ್ಳಬೇಕೆಂದು ಆರ್‍ಟಿಓ ಇನ್ಸ್‍ಪೆಕ್ಟರ್‍ಗಳು ವಾಹನ ಮಾಲೀಕರಿಗೆ ಸಲಹೆ ನೀಡುತ್ತಿದ್ದಾರೆ. ನಂಬರ್ ಪ್ಲೇಟ್‍ಗಳಲ್ಲಿ ಹೆಸರು, ಸಂಘ-ಸಂಸ್ಥೆಗಳ ಚಿಹ್ನೆ, ಬೇರೆ ಬೇರೆ ಚಿತ್ರಗಳನ್ನು ಹಾಕಿಕೊಳ್ಳುವುದು ಕಾನೂನು ಬಾಹಿರ ಎಂದು ಹೈಕೋರ್ಟ್ ಎಚ್ಚರಿಸಿರುವುದರಿಂದ ತಾವು ಕಾರ್ಯಾಚರಣೆ ನಡೆಸುತ್ತಿರುವುದಾಗಿ ಆರ್‍ಟಿಓ ಇನ್ಸ್‍ಪೆಕ್ಟರ್ ಸುರೇಶ್ ತಿಳಿಸಿದ್ದಾರೆ.

 

Translate »