ಮೈಸೂರಲ್ಲಿ ಮುಂಬೈ ದಂಪತಿ ಸಾಕುನಾಯಿಗಳ ಕಳವು
ಮೈಸೂರು

ಮೈಸೂರಲ್ಲಿ ಮುಂಬೈ ದಂಪತಿ ಸಾಕುನಾಯಿಗಳ ಕಳವು

December 29, 2019

ಮೈಸೂರು,ಡಿ.28(ಆರ್‍ಕೆ)- ಮುಂಬೈ ನಿಂದ ತಮ್ಮೊಂದಿಗೆ ಕರೆತಂದಿದ್ದ ದುಬಾರಿ ಸಾಕು ನಾಯಿ ಮರಿಗಳನ್ನು ಮೈಸೂರಿನ ಹೆಬ್ಬಾಳು ಬಡಾವಣೆಯಲ್ಲಿ ಶುಕ್ರವಾರ ರಾತ್ರಿ ಕಳವು ಮಾಡಲಾಗಿದೆ.

ಹೆಬ್ಬಾಳಿನ ಲೋಕನಾಯಕನಗರದ ಕಾವೇರಿ ಗ್ರಾಮೀಣ ಬ್ಯಾಂಕ್ ಹಿಂಭಾಗದ ಮನೆಯಲ್ಲಿ ಮುಂಬೈನಲ್ಲಿ ನೆಲೆಸಿರುವ ಶೃತಿ ಮತ್ತು ವಿಶಾಲ್ ವಾಲಿಯಾ ಎಂಬುವ ರಿಗೆ ಸೇರಿದ ಶಿಹ್‍ಟಿಝಡ್‍ಯು ತಳಿಯ 2 ನಾಯಿ ಮರಿಗಳನ್ನು ಖದೀಮರು ಕಳವು ಮಾಡಿದ್ದು, ಅದರ ದೃಶ್ಯಾವಳಿ ಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ.

5 ದಿನಗಳ ರಜೆ ಕಳೆಯಲೆಂದು ಶೃತಿ ಮತ್ತು ವಿಶಾಲ್ ವಾಲಿಯಾ ಅವರು ತಮ್ಮ ದುಬಾರಿ ಬೆಲೆಯ ಸಾಕು ನಾಯಿಗಳೊಂ ದಿಗೆ ಮೈಸೂರಿಗೆ ಬಂದಿದ್ದರು. ಹೋಂಡಾ ಆಕ್ಟೀವಾದಲ್ಲಿ ಬಂದ ಇಬ್ಬರು, ಮನೆಯಲ್ಲಿ ದ್ದವರ ಚಲನವಲನ ವೀಕ್ಷಿಸುತ್ತಾ, ಹೊಂಚು ಹಾಕಿ ಹೆಣ್ಣು ನಾಯಿ ಮರಿಯನ್ನು ಕಾಂಪೌಂಡ್ ಒಳಗಿನಿಂದ ಹಿಡಿದು ಕೊಂಡೊ ಯ್ದಿದ್ದಾರೆ. ಅದನ್ನು ನೋಡಿದ ಗಂಡು ನಾಯಿ ಅವರ ಸ್ಕೂಟರ್ ಹಿಂದೆ ಓಡಿ ಹೋಗಿದ್ದು, ದುಷ್ಕರ್ಮಿಗಳು ಅದನ್ನೂ ಹಿಡಿದು ಕೊಂಡೊಯ್ದಿದ್ದಾರೆ ಎಂದು ಶೃತಿ ಅವರು ಮೇಟಗಳ್ಳಿ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಈ ದೃಶ್ಯಾವಳಿಗಳು ಪಕ್ಕದ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಫುಟೇ ಜಸ್‍ಗಳನ್ನು ಪೊಲೀಸರಿಗೆ ನೀಡಿದ್ದೇವೆ. ದೂರಿನನ್ವಯ ಸಿಸಿ ಕ್ಯಾಮರಾ ಫುಟೇಜ್ ಆಧಾರದಲ್ಲಿ ಮೇಟಗಳ್ಳಿ ಠಾಣೆ ಪೊಲೀ ಸರು ಖದೀಮರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ಶಿಹ್‍ಟಿಝಡ್‍ಯು ನಾಯಿ ಮರಿ ಒಂದಕ್ಕೆ 25ರಿಂದ 30,000 ರೂ. ಬೆಲೆ ಇದ್ದು, ಅವೆ ರಡೂ ನಮಗೆ ಪ್ರೀತಿ ಪಾತ್ರದವು ಎಂದು ಶೃತಿ ಪೊಲೀಸರಿಗೆ ತಿಳಿಸಿದ್ದಾರೆ.

ಈ ಸಂಬಂಧ ‘ಮೈಸೂರು ಮಿತ್ರ’ ನಿಗೆ ಮಾಹಿತಿ ನೀಡಿದ ಮೇಟಗಳ್ಳಿ ಠಾಣೆ ಇನ್ಸ್‍ಪೆಕ್ಟರ್ ರಾಘವೇಂದ್ರಗೌಡ, ನಾಯಿ ಕಳವಾಗಿರುವ ಬಗ್ಗೆ ಸಿಸಿ ಕ್ಯಾಮರಾ ಫುಟೇಜ್‍ಗಳೊಂದಿಗೆ ನೀಡಿದ್ದಾರೆ. ಆದರೆ ಕಳ್ಳರು ಬಂದಿದ್ದ ಸ್ಕೂಟರ್ ರಿಜಿಸ್ಟ್ರೇಷನ್ ನಂಬರ್ ಸಿಸಿ ಕ್ಯಾಮರಾ ಫುಟೇಜಸ್‍ನಲ್ಲಿ ಸ್ಪಷ್ಟವಾಗಿ ಕಾಣುತ್ತಿಲ್ಲ ವಾಗಿರುವುದರಿಂದ ಆರೋಪಿಗಳ ಪತ್ತೆಗೆ ತಡವಾಗುತ್ತಿದೆ ಎಂದರು.

ಆದರೂ ನಾವು ದೂರು ಬಂದ ತಕ್ಷಣ ತಂಡ ಮಾಡಿಕೊಂಡು ಪತ್ತೆ ಕಾರ್ಯಾ ಚರಣೆ ಮಾಡುತ್ತಿದ್ದೇವೆ. ಆದಷ್ಟು ಶೀಘ್ರ ನಾಯಿಗಳನ್ನು ಕದ್ದೊಯ್ದಿರುವವರನ್ನು ಬಂಧಿಸುತ್ತೇವೆ ಎಂದು ಇನ್ಸ್‍ಪೆಕ್ಟರ್ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಮೈಸೂರಲ್ಲಿ ನಾಯಿಗಳ ಕಳವು ಪ್ರಕರಣ ಹೆಚ್ಚಾಗುತ್ತಿರುವ ಬಗ್ಗೆ ‘ಮೈಸೂರು ಮಿತ್ರ’ನಲ್ಲಿ ಡಿಸೆಂಬರ್ 24ರಂದು ವಿಸ್ತøತ ಸುದ್ದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Translate »