ಕೇರಳದ ಶಬರಿಮಲೆ ವಿಚಾರದಲ್ಲಿ ನಡೆಯುತ್ತಿರುವ ಪರ-ವಿರುದ್ಧ ಚರ್ಚೆ ಒಳ್ಳೆ ರೀತಿಯದ್ದಲ್ಲ
ಮೈಸೂರು

ಕೇರಳದ ಶಬರಿಮಲೆ ವಿಚಾರದಲ್ಲಿ ನಡೆಯುತ್ತಿರುವ ಪರ-ವಿರುದ್ಧ ಚರ್ಚೆ ಒಳ್ಳೆ ರೀತಿಯದ್ದಲ್ಲ

January 3, 2019

ಮೈಸೂರು: ಕೇರ ಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವ ಸ್ಥಾನಕ್ಕೆ ಮಹಿಳೆಯರು ಪ್ರವೇಶಿಸುವ ವಿಚಾರ ದಲ್ಲಿ ನಡೆಯುತ್ತಿರುವ ಪರ-ವಿರೋಧ ಚರ್ಚೆಗಳು ಒಳ್ಳೆಯ ರೀತಿಯಲ್ಲಿ ಆಗು ತ್ತಿಲ್ಲ. ಧಾರ್ಮಿಕ ಕಟ್ಟುಪಾಡುಗಳಿಗೆ ಆಕ್ರಮಣದ ರೀತಿಯಲ್ಲಿ ಚರ್ಚೆಯಾಗು ವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ನಾಗ ಲಕ್ಷ್ಮಿಬಾಯಿ ಆತಂಕ ವ್ಯಕ್ತಪಡಿಸಿದರು.

ನಗರದ ಜಲದರ್ಶಿನಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಬರಿಮಲೆಗೆ ಮಹಿಳೆಯರಿಬ್ಬರ ಪ್ರವೇಶ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ, ಪ್ರತಿಕ್ರಿಯೆ ನೀಡಿದ ಅವರು, ಮಹಿಳಾ ಸಮಾನತೆ ಹೆಸರಿನಲ್ಲಿ ಒಂದು ಧರ್ಮದ ಆಚರಣೆಗಳ ಮೇಲೆ ಧಕ್ಕೆ ತರುವಂಥ ಕೆಲಸಗಳಾಗುತ್ತಿವೆ ಹಾಗೂ ಅವರ ಭಕ್ತಿ ಹೆಸರಿನಲ್ಲಿ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಚರ್ಚೆಯಾಗುವುದು ಬೇಸರ ಸಂಗತಿ ಎಂದು ಪರೋಕ್ಷವಾಗಿ ಹಿಂದೂ ಸಂಘ ಟನೆಗಳ ಹೋರಾಟವನ್ನು ಬೆಂಬಲಿಸಿದರು.

ಭಾರತ ವಿವಿಧ ಸಂಪ್ರದಾಯ, ಆಚ ರಣೆಗಳ ದೇಶ. ಈ ಆಚರಣೆ ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. ಧಾರ್ಮಿಕ ಕಟ್ಟುಪಾಡುಗಳನ್ನು ಈಗ ಮುರಿಯುವುದು ತಪ್ಪು. ಮಹಿಳಾ ಸ್ವಾತಂ ತ್ರ್ಯದ ಹೆಸರಿನಲ್ಲಿ ಒಂದು ಧಾರ್ಮಿಕ ಆಚರಣೆ ಮೇಲೆ ಆಕ್ರಮಣವಾದರೆ, ಅದು ಬೇರೆ ಧರ್ಮದ ಮೇಲೂ ವಿಸ್ತರಣೆಯಾ ಗುತ್ತದೆ. ಇಸ್ಲಾಂ ಧರ್ಮದಲ್ಲಿ ಮಹಿಳೆಯ ರಿಗೆ ಇಂದಿಗೂ ಮಸೀದಿಗಳಿಗೆ ಪ್ರವೇಶ ವಿಲ್ಲ. ಅದು ಅವರ ಧಾರ್ಮಿಕ ಕಟ್ಟು ಪಾಡು. ಹಾಗೆಂದು ಆ ಧರ್ಮದ ಭಾವನೆಗೆ ಧಕ್ಕೆ ತರುವುದು ಯಾವ ಧರ್ಮ?ಎಂದು ಪತ್ರಕರ್ತರನ್ನೇ ಪ್ರಶ್ನಿಸಿದರು.

ಧರ್ಮದ ವಿಷಯ ಬಲು ಸೂಕ್ಷ್ಮ. ಪದೇಪದೆ ಧಾರ್ಮಿಕ ಪ್ರಚೋದನೆ ಸರಿ ಯಲ್ಲ. ಪ್ರಜಾಪ್ರಭುತ್ವದಲ್ಲಿ ವ್ಯಕ್ತಿ ಸ್ವಾತಂತ್ರ್ಯ ಎಷ್ಟು ಮುಖ್ಯವೋ, ಅಷ್ಟೇ ಸ್ವಾತಂತ್ರ್ಯ ಧಾರ್ಮಿಕ ಕ್ಷೇತ್ರದಲ್ಲೂ ಇರಬೇಕು. ಅದು ಎಷ್ಟು ಪ್ರಮಾಣದಲ್ಲಿರಬೇಕು ಎಂಬುದನ್ನು ತಜ್ಞರು ನಿರ್ಧರಿಸಬೇಕು.

ಮಹಿಳೆಯರಿಗೆ ಸ್ವಾತಂತ್ರ್ಯ ಎನ್ನುವು ದನ್ನು ಈ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿ ನೋಡಬಾರದು. ದಟ್ಟ ದಾರಿದ್ರ್ಯ ಸ್ಥಳದಲ್ಲಿ ವಾಸಿಸುವ ಮಹಿಳೆಗೂ ಸ್ವಾತಂತ್ರ್ಯ ಸಿಗುವ ಹಕ್ಕುಗಳ ಬಗ್ಗೆ ಇದೇ ಧಾಟಿಯಲ್ಲಿ ಮಾತ ನಾಡಬೇಕು ಎಂದು ನಾಗಲಕ್ಷ್ಮಿಬಾಯಿ ತಿಳಿಸಿದರು.

ಆಂತರಿಕ ಸಮಿತಿಯಲ್ಲಿ ಹೊರಗಿ ನವರಿಗೆ ಆದ್ಯತೆ: ರಾಜ್ಯದ ಖಾಸಗಿ ಕಂಪ ನಿಗಳಲ್ಲಿ ಅಸ್ತಿತ್ವದಲ್ಲಿದ್ದ ಮಹಿಳಾ ನೌಕರರ ಆಂತರಿಕ ಸಮಿತಿಯಲ್ಲಿ ಅಲ್ಲಿನ ಆಡಳಿತ ಮಂಡಳಿ ಸದಸ್ಯರು ಹಾಗೂ ನೌಕರರು ಇರುತ್ತಿದ್ದರು. ಇದರಿಂದ ಮಹಿಳಾ ನೌಕ ರರಿಗೆ ತಮ್ಮ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳ ಬಗ್ಗೆ ಮುಕ್ತವಾಗಿ ಹೇಳಿ ಕೊಳ್ಳಲು ಆಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಖಾಸಗಿ ಕಂಪನಿಗಳಿಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಆಂತರಿಕ ಸಮಿತಿ ಯಿಂದ ಹೊರಗಿಟ್ಟು, ಹೊರಗಿನ ವಕೀ ಲರು, ವೈದ್ಯರು ಅಥವಾ ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರನ್ನು ನೇಮಕ ಮಾಡುವಂತೆ ಅತೀ ಶೀಘ್ರದಲ್ಲೇ ಸುತ್ತೋಲೆ ಹೊರಡಿಸಲಾಗುವುದು ಎಂದರು.

ಕಾರ್ಮಿಕ ಇಲಾಖೆ ವಿಫಲ: ಖಾಸಗಿ ಕಾರ್ಖಾನೆಗಳಲ್ಲಿ ಮಹಿಳಾ ನೌಕರರ ಮೇಲೆ ದಿನನಿತ್ಯ ನಡೆಯುತ್ತಿರುವ ದೌರ್ಜ ನ್ಯವನ್ನು ತಡೆಗಟ್ಟಲು ಕಾರ್ಮಿಕ ಇಲಾಖೆ ಸಂಪೂರ್ಣ ವಿಫಲವಾಗಿದ್ದು, ಅಧಿಕಾರಿ ಗಳು ನಿದ್ರಾವಸ್ಥೆಯಲ್ಲಿದ್ದಾರೆ ಎಂದು ಟೀಕಿಸಿ ದರಲ್ಲದೆ, ರಾಜ್ಯದ ಎಲ್ಲಾ ಶಾಲಾ-ಕಾಲೇಜು ಗಳಲ್ಲಿ ಸಿಸಿಟಿವಿ ಹಾಕಿಸಲು ವ್ಯವಸ್ಥೆ ಮಾಡ ಲಾಗಿದೆ. ನಮ್ಮ ಮೆಟ್ರೋದಲ್ಲಿ ಪ್ರತ್ಯೇಕ ಮಹಿಳಾ ಬೋಗಿ ಅಳವಡಿಸಲು ಸೂಚಿಸಿ, ಹೀಗೆ ಹತ್ತು- ಹಲವು ಸುಧಾರಣಾ ಕ್ರಮ ಗಳನ್ನು ಆಯೋಗದಿಂದ ಕೈಗೊಂಡಿರುವ ಬಗ್ಗೆ ಮಾಹಿತಿ ನೀಡಿದರು.

Translate »