ಸುಂದರ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳ ಪಾತ್ರ ಮುಖ್ಯ
ಕೊಡಗು

ಸುಂದರ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳ ಪಾತ್ರ ಮುಖ್ಯ

December 11, 2019

ವಿರಾಜಪೇಟೆ, ಡಿ.10- ಸುಂದರ ಸಮಾಜ ನಿರ್ಮಾಣ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹು ಮುಖ್ಯ, ಸಮಾಜಕ್ಕೆ ಮಾರಕವಾದ ಪಿಡುಗುಗಳಿಗೆ ಯುವಜನತೆ ದಾಸರಾಗುತ್ತಿರು ವುದು ಕಳವಳಕಾರಿ ಸಂಗತಿ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಎನ್.ವಿ.ಕೊನಪ್ಪ ಹೇಳಿದರು.

ಇಲ್ಲಿನ ಸ್ಥಳೀಯ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ವಿರಾಜಪೇಟೆ ನಗರ ಪೊಲೀಸ್ ಠಾಣೆಯಿಂದ ಅಪರಾಧÀ ತಡೆ ಮಾಸಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ನಾಗರಿಕರು ಕಾನೂನÀನ್ನು ಪ್ರತಿಯೊಂದು ಹಂತದಲ್ಲೂ ಪಾಲಿಸುವಂತಾಗಬೇಕು. ಇತ್ತೀಚೆಗೆ ದೇಶದ ಕೆಲವು ಸ್ಥಳಗಳಲ್ಲಿ ನಡೆದಿರುವ ಸಮಾಜ ಘಾತುಕ ಕೃತ್ಯಗಳಲ್ಲಿ ಯುವ ಜನಾಂಗ ಭಾಗಿಯಾಗಿರುವುದು ದುರದೃಷ್ಟಕರ. ಯುವ ಜನತೆಯು ಸಾಮಾಜಿಕ ಪಿಡುಗು ಗಳಿಂದ ದೂರವಿರಬೇಕು ಎಂದರು.

ಕಾಲೇಜಿನ ವ್ಯವಸ್ಥಾಪಕ ರೆ.ಫಾ. ಮದಲೈ ಮುತ್ತು, ವಿರಾಜಪೇಟೆ ಡಿವೈಎಸ್‍ಪಿ ಜಯಕುಮಾರ್, ಅಧ್ಯ ಕ್ಷತೆ ವಹಿಸಿದ್ದ ವೃತ್ತ ನಿರೀಕ್ಷಕ ಕ್ಯಾತೆ ಗೌಡ, ನಗರ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ಮಾತನಾಡಿದರು.  ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಕಾವೇರಮ್ಮ, ಕಾಲೇಜು ವಿದ್ಯಾರ್ಥಿಗಳು, ಉಪ ನ್ಯಾಸಕ ವೃಂದ ಹಾಜರಿದ್ದರು.

 

Translate »