ಇಂದು ಚಿಕ್ಕಬೆಟ್ಟಗೇರಿಯಲ್ಲಿ ‘ಹುತ್ತರಿ ಹಬ್ಬ’
ಕೊಡಗು

ಇಂದು ಚಿಕ್ಕಬೆಟ್ಟಗೇರಿಯಲ್ಲಿ ‘ಹುತ್ತರಿ ಹಬ್ಬ’

December 11, 2019

ಮಡಿಕೇರಿ, ಡಿ.10- ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಸಂಘಟನೆಯಿಂದ ಕೊಡಗಿನ ಸುಗ್ಗಿ ಹಬ್ಬವಾದ ಹುತ್ತರಿಯನ್ನು ಡಿ.11ರಂದು ಚಿಕ್ಕಬೆಟ್ಟಗೇರಿಯ ನಂದಿನೆರವಂಡ ಉತ್ತಪ್ಪ ಅವರ ಭತ್ತÀದ ಗದ್ದೆಯಲ್ಲಿ ಸಾರ್ವತ್ರಿಕವಾಗಿ ಆಚರಿಸಲಾಗುವುದು ಎಂದು ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದರು.

ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾಷೆ ಹಾಗೂ ಸಂಸ್ಕøತಿ ಉಳಿಯ ಬೇಕಾದರೆ ಆಯಾ ಪ್ರದೇಶದ ಹಬ್ಬ ಹರಿದಿನಗಳನ್ನು ಸಾರ್ವತ್ರಿಕವಾಗಿ ಆಚರಿಸುವಂತಾಗಬೇಕು. ಆ ಮೂಲಕ ಜಗತ್ತಿನ ಗಮನ ಸೆಳೆಯುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ಸಿಎನ್‍ಸಿ ಸಂಘಟನೆಯು ಕೊಡವ ಬುಡಕಟ್ಟು ಜಗತ್ತಿನ ಸಂಸ್ಕøತಿಯ ಪ್ರಧಾನ ಹಬ್ಬವಾದ ‘ಹುತ್ತರಿ’ಯನ್ನು ಕಳೆದ 26 ವರ್ಷಗಳಿಂದ ಸಾರ್ವತ್ರಿಕವಾಗಿ ಆಚರಿಸುತ್ತಾ ಬಂದಿದ್ದು, ಕೊಡವರ ಉನ್ನತ ಪರಂಪರೆ ಹಾಗೂ ಶ್ರೇಷ್ಠ ಸಂಸ್ಕøತಿಯನ್ನು ಸಾರುವ ಮೂಲಕ ಭೂ ತಾಯಿಗೂ ಕೊಡ ವರಿಗೂ ಇರುವ ಅವಿನಾಭಾವ ಸಂಬಂಧವನ್ನು ಜಗತ್ತಿಗೆ ಪರಿಚಯಿಸುತ್ತಿದೆ ಎಂದು ಹೇಳಿದರು.

ಡಿ.11ರಂದು ಪೂರ್ವಾಹ್ನ 10:30ಕ್ಕೆ ಕುಶಾಲ ನಗರ ಹೋಬಳಿ ಚಿಕ್ಕಬೆಟ್ಟಗೇರಿ ಗ್ರಾಮದ ನಂದಿ ನೆರವಂಡ ಉತ್ತಪ್ಪನವರ ಭತ್ತದ ಗದ್ದೆಯಲ್ಲಿ ಕದಿರು ತೆಗೆಯುವ ಕೈಂಕರ್ಯ ತನ್ನ ಮುಂದಾ ಳತ್ವದಲ್ಲಿ ನಡೆಯಲಿದೆ. ಇದಕ್ಕೂ ಮೊದಲು ನೆಲ್ಲಕ್ಕಿಯಡಿ ಯಲ್ಲಿ ಗುರುಕಾರೋಣರು ಮತ್ತು ದೇವಾನುದೇವತೆಗಳಿಗೆ ಭಕ್ತಿಪೂರ್ವಕ ನಮನ ಸಲ್ಲಿಸಿ ಅರಳಿ, ಮಾವು, ಹಲಸು, ಕುಂಬಳಿ ಮತ್ತು ಗೇರು ಮರಗಳ ಎಲೆಗಳಿಂದ ನೆರೆಕಟ್ಟುವ ವಿಧಿಮುಗಿಸಿ, ಕುತ್ತಿ, ತೋಕ್-ಕತ್ತಿ, ದುಡಿಕೊಟ್ಟ್‍ಪಾಟ್, ತಳಿಯತಕ್ಕಿಯೊಂದಿಗೆ ಮೆರವಣಿಗೆಯಲ್ಲಿ ಭತ್ತದ ಗದ್ದೆಗೆ ತೆರಳಲಾಗುವುದು. ಗದ್ದೆಯಲ್ಲಿ ಕದಿರು ತೆಗೆದು ಹಿಂದಿರುಗಿ ಬಂದು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳಾದ ವಾಲಗತಾಟ್, ಪರಿಯಕಳಿ ಮತ್ತು ಬೊಳಕಾಟ್ ನಡೆಸಿ ತದನಂತರ ಗುರುಕಾರೋಣ- ದೇವಾನುದೇವತೆಗಳಿಗೆ ನೈವೇದ್ಯ ಅರ್ಪಿಸಿ ಕೊಡವ ಸಾಂಪ್ರ್ರದಾಯಿಕ ಭೋಜನ ಸವಿಯುವ ಮೂಲಕ ಹುತ್ತರಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುವುದು ಎಂದರು.

ರಾಜ್ಯದ ವಿವಿಧೆಡೆಗಳಲ್ಲಿ ನೆಲೆಸಿರುವ ಕೊಡವರು ಭಾಗವಹಿಸಲು ಅನುಕೂಲವಾಗುವಂತೆ ಸರ್ಕಾರ ಕನಿಷ್ಠ 20 ದಿನಗಳ ಸಾರ್ವತ್ರಿಕ ರಜೆ ಘೋಷಿಸುವಂತಾಗಬೇಕು ಎಂದು ನಾಚಪ್ಪ ಆಗ್ರಹಿಸಿದರು. ಕೊಡವ ಬುಡಕಟ್ಟು ಜಗತ್ತಿನ ಪ್ರಧಾನ ಹಬ್ಬವಾದ ಈ ಬಾರಿ ರಾಜ್ಯ ಸರ್ಕಾರ ಅಧಿಕೃತ ಸಾರ್ವತ್ರಿಕ ರಜೆ ಘೋಷಣೆ ಮಾಡಿರುವುದು ಸಿ.ಎನ್.ಸಿಯ ಸಾಧನೆಯಾಗಿದೆ ಎಂದು ಹೇಳಿದ ಅವರು, ಇದೇ ಸಂದರ್ಭ ನಾಡಿನ ಜನತೆಗೆ ಹುತ್ತರಿ ಹಬ್ಬದ ಶುಭಾಶಯಗಳನ್ನು ಕೋರಿದರು.

ಸುದ್ದಿಗೋಷ್ಠಿಯಲ್ಲಿ ಸಿಎನ್‍ಸಿ ಪ್ರಮುಖರಾದ ಕಲಿಯಂಡ ಪ್ರಕಾಶ್, ಪುಲ್ಲೇರ ಕಾಳಪ್ಪ, ಕೂಪದಿರ ಸಾಬು, ಚೆಂಬಂಡ ಜನತ್ ಉಪಸ್ಥಿತರಿದ್ದರು.

Translate »