ಮೈಸೂರು: ನಾನು ಅಧಿಕಾರದಲ್ಲಿದ್ದಾಗ ಆದಂತಹ ಕೆಲಸ ಗಳನ್ನು ನಾನು ಮಾಡಿದ್ದು ಎಂದು ನಾನೇ ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ಮಾಡಿದ ಸಮಾಜಸೇವೆ ಮಾತ್ರ ನಮ್ಮನ್ನು ಹಾಗೂ ನಮ್ಮ ವ್ಯಕ್ತಿತ್ವವನ್ನು ಗುರುತಿಸುತ್ತದೆ ಎಂದು ಮಾಜಿ ಶಾಸಕ ವಾಸು ಅಭಿಪ್ರಾಯಪಟ್ಟರು.
ಮೈಸೂರಿನ ಕೆ.ಆರ್.ಆಸ್ಪತ್ರೆ ರಸ್ತೆಯಲ್ಲಿ ರುವ ಶ್ರೀ ರಾಮಂದಿರದಲ್ಲಿ ಕಟ್ಟೆಮನೆ ಒಕ್ಕಲಿಗ ಶ್ರೀ ರಾಮಮಂದಿರದ ವತಿಯಿಂದ ನಡೆದ ಅಭಿನಂದನಾ ಸಮಾರಂಭವನ್ನು ಉದ್ಘಾ ಟಿಸಿ ಮಾತನಾಡಿದ ಅವರು, ಮೈಸೂರಿನ ದೊಡ್ಡ ಆಸ್ಪತ್ರೆಗೆ ತಕ್ಕಂತೆ ಜಿಲ್ಲಾ ಮಟ್ಟದ ಆಸ್ಪತ್ರೆ, ಜಯ ದೇವ ಆಸ್ಪತ್ರೆ, ಮಹಾರಾಣಿ ಕಾಲೇಜು ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದವು. ಆದರೆ, ನಾನೇ ಮಾಡಿದ್ದು ಎಂದು ಹೇಳಿಕೊಂಡಿಲ್ಲ. ಕಾರಣ
ನನಗಿಂತಲೂ ಈ ಭಾಗದಲ್ಲಿ ಹೆಚ್ಚಿನ ಕೆಲಸ ಮಾಡಿದವರಿದ್ದಾರೆ ಎಂದರು.
ನಾವೆಲ್ಲರು ಕೇವಲ ಸಾಂಕೇತಿಕವಷ್ಟೆ. ನಮಗಿಂತಲೂ ಮಹತ್ವದ ಕೆಲಸಗಳನ್ನು ನಮ್ಮ ಹಿರಿಯರು ಮಾಡಿದ್ದಾರೆ. ಹಿರಿ ಯರ ದಾರಿಯಲ್ಲಿ ಸಾಗಿದವರೆಲ್ಲರೂ ದೇಶದಲ್ಲಿ ಉನ್ನತ ಸ್ಥಾನ-ಮಾನಗಳನ್ನು ಪಡೆದಿದ್ದಾರೆ. ಮೈಸೂರಿನಲ್ಲಿ ಆದರ ಲ್ಲಿಯೂ ಒಕ್ಕಲಿಗ ಜನಾಂಗದಲ್ಲಿ ಹಲ ವಾರು ಮಂದಿ ಜಾತಿಯನ್ನು ಹೊರತು ಪಡಿಸಿ ಸಮಾಜಸೇವೆಯನ್ನು ಮಾಡಿ ದ್ದಾರೆ. ಅಂತಹವರನ್ನು ನಾವೆಲ್ಲರು ಸ್ಮರಿಸ ಬೇಕಾಗಿದೆ ಎಂದು ತಿಳಿಸಿದರು.
ರಾಜಕೀಯ ಹಿತಾಶಕ್ತಿ ಹಾಗೂ ಮೀಸ ಲಾತಿಯಿಂದ ಜಾತಿ ಎಂಬುದು ಬೆಳೆದು ಬಂದಿದೆ. ಇವತ್ತು ಯಾವ ಜಾತಿಯವರು ಪ್ರಾಬಲ್ಯವಿದ್ದಾರೆ, ನಮ್ಮ ಜಾತಿಯವರು ಯಾರು ಚುನಾವಣೆಗೆ ನಿಂತಿದ್ದಾರೆ ಎನ್ನುತ್ತಾ ಅರ್ಹತೆ ಇಲದಿದ್ದರೂ ಮತ ನೀಡುವ ಪ್ರವೃತ್ತಿ ಯನ್ನು ರೂಢಿಸಿಕೊಂಡಿದ್ದೇವೆ. ಜಾತಿ ಯನ್ನು ಮೀರಿ ಸಮಾಜಮುಖಿ ಕೆಲಸಗಳನ್ನು ಮಾಡಬೇಕು. ಎತ್ತರ ಎಂದರೆ ಸ್ಥಾನ ಮಾನ ಪಡೆಯುವುದಲ್ಲ. ಸಮಾಜಸೇವೆ ಯಿಂದ ಬೆಳೆಯುವುದಾಗಿದೆ ಎಂದರು.
ಇದೇ ವೇಳೆ ಮೇಯರ್ ಪುಷ್ಪಲತಾ ಜಗನ್ನಾಥ್, ನಗರ ಪಾಲಿಕೆ ಸದಸ್ಯರಾದ ಆರ್.ನಾಗರಾಜ್, ಎಸ್.ಬಿ.ಎಂ.ಮಂಜು, ಸತೀಶ್, ರಮೇಶ್(ರಮಣಿ) ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಕಟ್ಟೆಮನೆ ಒಕ್ಕಲಿಗರ ಶ್ರೀರಾಮಮಂದಿರ ಉಪಾಧ್ಯಕ್ಷ ಎಸ್. ಸೋಮಣ್ಣ, ನಗರ ಪಾಲಿಕೆ ಮಾಜಿ ಸದಸ್ಯ ರಾದ ಬಿ.ಕೆ.ಪ್ರಕಾಶ್, ಎಂ.ಶಿವಣ್ಣ, ಕಟ್ಟೆಮನೆ ಒಕ್ಕಲಿಗರ ಶ್ರೀರಾಮಮಂದಿರ ಪದಾಧಿ ಕಾರಿಗಳಾದ ಎಲ್.ದೇವರಾಜ್ ಸಿ.ಎಸ್. ಚಂದ್ರಶೇಖರ್, ಪಿ.ಪುಟ್ಟೇಗೌಡ, ಎಲ್.ಅನಂತ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.