ಮೈಸೂರು: ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋ ಪಿಸಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಈ ಸಂಬಂಧ ರಾಜ್ಯಪಾಲರಿಗೆ ದೂರು ನೀಡಲು ನಿರ್ಧ ರಿಸಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ರಾಜ್ಯದ 164 ತಾಲೂಕು ಗಳಲ್ಲಿ ಬರವಿದ್ದು, ಕುಡಿಯಲು ನೀರಿಲ್ಲದೆ ದುಸ್ಥಿತಿ ಎದುರಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನತೆ ಕಂಗಾಲಾಗಿದ್ದು, ಇದಕ್ಕೆ ಪರಿಹಾರೋಪಾಯ ನೀಡಬೇಕಿದ್ದ ರಾಜ್ಯ ಮೈತ್ರಿ ಸರ್ಕಾರ ಅಧಿಕಾರ ಉಳಿಸಿ ಕೊಳ್ಳಲು ಪರದಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಮತ್ತೊಂದೆಡೆ ವಿರೋಧ ಪಕ್ಷವಾದ ಬಿಜೆಪಿಯೂ ಮೈತ್ರಿ ಸರ್ಕಾರ ಬೀಳುವ ಸನ್ನಿವೇಶಕ್ಕೆ ಕಾದು ಕೂತಂ ತಿದ್ದು, ಬರ ಪರಿಹಾರದಲ್ಲಿ ಸರ್ಕಾರ ಸಕ್ರಿಯ ವಾಗಿ ತೊಡಗಿಸಿಕೊಳ್ಳಲು ಛಾಟಿ ಬೀಸದೇ ನಿರ್ಲಕ್ಷ್ಯ ವಹಿಸಿದೆ. ಹೀಗಾಗಿ ಈ ಇಬ್ಬರ ಬಗ್ಗೆಯೂ ಜನ ವಿಶ್ವಾಸ ಕಳೆದುಕೊಂಡಿ ದ್ದಾರೆ. ಬರ ಪರಿಹಾರಕ್ಕೆ ಸೂಕ್ತ ಕ್ರಮ ಜರು ಗಿಸಲು ಮೈತ್ರಿ ಸರ್ಕಾರ ಮುಂದಾಗುವಂತೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ರೈತ ಸಂಘ ರಾಜ್ಯಪಾಲರ ಮೊರೆ ಹೋಗಲು ನಿರ್ಧರಿಸಿದೆ. ಈ ಸಂಬಂಧ ಶೀಘ್ರದಲ್ಲಿ ಸಂಘದ ನಿಯೋಗ ರಾಜ್ಯಪಾರನ್ನು ಭೇಟಿ ಮಾಡಲಿದೆ. ಇದೇ ವೇಳೆ ರಾಜ್ಯ ಸರ್ಕಾ ರದ ಭೂಸ್ವಾಧೀನ ಕಾಯ್ದೆ-2013ರ ತಿದ್ದು ಪಡಿಗೆ ಅಂಕಿತ ಹಾಕದಂತೆ ರಾಜ್ಯಪಾಲ ರನ್ನು ಕೋರಲಾಗುವುದು ಎಂದರು.
ಬರ ಪರಿಹಾರದ ಬಗ್ಗೆ ಸರ್ಕಾರ ಇದೇ ಮಂದಗತಿ ಧೋರಣೆ ಅನುಸರಿಸಿದರೆ ಮುಂದಿನ ದಿನಗಳಲ್ಲಿ `ವಿಧಾನಸೌಧ ಖಾಲಿ ಮಾಡಿ’ ಎಂಬ ಚಳವಳಿ ರೂಪಿಸಲಾಗು ವುದು. ಮಾಜಿ ಸಿಎಂ ಯಡಿಯೂರಪ್ಪ ನೆಪ ಮಾತ್ರಕ್ಕೆ ಬರ ಅಧ್ಯಯನದ ಪ್ರವಾಸ ಮಾಡು ತ್ತಿದ್ದು, ಇದನ್ನು ಬಿಟ್ಟರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎಂದು ಆರೋಪಿಸಿದರು.
ವಾರದೊಳಗೆ ಭತ್ತ ಖರೀದಿ ಕೇಂದ್ರ ಗಳನ್ನು ತೆರೆಯಬೇಕು. ಪಾಂಡವಪುರ ಸಕ್ಕರೆ ಕಾರ್ಖಾನೆ ಖಾಸಗಿಯವರಿಗೆ ಮಾರಾಟ ಮಾಡುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು. ಇಲ್ಲವಾದರೆ ತೀವ್ರ ತರದ ಹೋರಾಟ ಅನಿವಾರ್ಯವಾಗ ಲಿದೆ. ಅದೇ ರೀತಿ ಜಿಂದಾಲ್ ಕಂಪನಿಗೆ ಭೂಮಿ ನೀಡುವುದನ್ನು ಸರ್ಕಾರ ಕೈಬಿಡ ಬೇಕು. ಇಲ್ಲದಿದ್ದರೆ ದೊಡ್ಡ ಮಟ್ಟದ ಹೋರಾಟವನ್ನು ರೈತ ಸಂಘ ಸಂಘಟಿಸ ಲಿದೆ ಎಂದು ಎಚ್ಚರಿಸಿದರು.
ರೈತರ ಸಾಲ ಮನ್ನಾಕ್ಕೆ ಸಂಬಂಧಿಸಿ ದಂತೆ ಕೂಡಲೇ ಶ್ವೇತಪತ್ರ ಹೊರಡಿಸ ಬೇಕು. ರೈತರಿಗೆ ವಾರ್ಷಿಕ 6 ಸಾವಿರ ರೂ. ಸಹಾಯಧನ ನೀಡುವ ಕೇಂದ್ರ ಸರ್ಕಾ ರದ ಯೋಜನೆ ಅಪ್ರಯೋಜಕ. ಇದು ಭಿಕ್ಷೆ ನೀಡಿದಂತೆ ಇದಕ್ಕೆ ಬದಲು ಕನಿಷ್ಠ ಆದಾಯ ಖಾತ್ರಿ ಯೋಜನೆ ಜಾರಿಗೊಳಿ ಸಲಿ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿ ಸಿದರು. ರೈತ ಸಂಘದ ಮುಖಂಡ ಹೊಸ ಕೋಟೆ ಬಸವರಾಜು ಮಾತನಾಡಿ, ನಂಜನ ಗೂಡು ತಾಲೂಕಿನ ಹುಲ್ಲಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಮಳೆ-ಗಾಳಿಯಿಂದಾಗಿ ನೂರಾರು ಎಕರೆ ಬಾಳೆ ಬೆಳೆಗೆ ಹಾನಿ ಯಾಗಿದೆ. ಈ ಸಂಬಂಧ ಎಕರೆ 2 ಲಕ್ಷ ರೂ. ಪರಿಹಾರ ನೀಡಲು ಸರ್ಕಾರ ಕ್ರಮ ವಹಿ ಸಬೇಕು ಎಂದು ಒತ್ತಾಯಿಸಿದರು. ಸಂಘದ ಕೊಡಗು ಜಿಲ್ಲಾಧ್ಯಕ್ಷ ಮಧು ಸೋಮಯ್ಯ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.