ಮೀಸಲಾತಿ ಮೂಲಭೂತ ಹಕ್ಕಲ್ಲ ಎಂಬ ಸುಪ್ರೀಂ ತೀರ್ಪು ಆಘಾತಕಾರಿ
ಮೈಸೂರು

ಮೀಸಲಾತಿ ಮೂಲಭೂತ ಹಕ್ಕಲ್ಲ ಎಂಬ ಸುಪ್ರೀಂ ತೀರ್ಪು ಆಘಾತಕಾರಿ

February 15, 2020

ಮೈಸೂರು, ಫೆ.14 (ಆರ್‍ಕೆ)- ಸರ್ಕಾರಿ ಉದ್ಯೋಗ ಹಾಗೂ ಬಡ್ತಿ ಮೀಸಲಾತಿ ಸೌಲಭ್ಯ ಮೂಲಭೂತ ಹಕ್ಕಲ್ಲ ಎಂದು ಸುಪ್ರೀಂಕೋರ್ಟ್ ನೀಡಿ ರುವ ತೀರ್ಪು ಆಘಾತ ಉಂಟು ಮಾಡಿದೆ ಎಂದು ಮಾಜಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.

ಮೈಸೂರಿನ ಇಂದಿರಾ ಗಾಂಧಿ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಬಡ್ತಿಯಲ್ಲಿ ಮೀಸಲಾತಿ ಒದಗಿ ಸಬೇಕು ಎಂದು ಉತ್ತರಾಖಂಡ ಉಚ್ಛ ನ್ಯಾಯಾಲಯವು ನೀಡಿದ್ದ ತೀರ್ಪನ್ನು ರದ್ದುಗೊಳಿಸಿದೆ. ನೇಮಕಾತಿ ಮತ್ತು ಬಡ್ತಿ ಯಲ್ಲಿ ಮೀಸಲಾತಿ ನೀಡುವ ಅಧಿಕಾರ ವನ್ನು ಸಂವಿಧಾನದ 16(4) ಮತ್ತು 16 (4ಎ) ಪರಿಚ್ಛೇಧದಲ್ಲಿ ಉಲ್ಲೇಖಿಸ ಲಾಗಿದೆ ಎಂದು ತಿಳಿಸಿದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಂಸದರು ಸುಪ್ರೀಂ ಕೋರ್ಟ್‍ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಿ ಸಾಮಾಜಿಕ ನ್ಯಾಯದ ಪರಿಕಲ್ಪನೆ ಯಡಿ ಸಮರ್ಥವಾಗಿ ವಾದ ಮಂಡಿಸ ಬೇಕು ಎಂದು ಒತ್ತಾಯಿಸಿದರು. ಸುಪ್ರೀಂ ಕೋರ್ಟ್ ತೀರ್ಪು ಸಾಮಾಜಿಕ ನ್ಯಾಯದ ವಿರುದ್ಧವಾಗಿದೆ. ಶತಮಾನಗಳಿಂದ ಶೋಷಣೆಗೊಳಗಾಗಿರುವ ವರ್ಗದ ನಿದ್ದೆ ಗೆಡಿಸಿದೆ. ಇದರಿಂದ ಸಂವಿಧಾನದ ಮೂಲ ಆಶಯವನ್ನೇ ಬುಡಮೇಲು ಮಾಡಿ ದಂತಾಗಿರುವುದಲ್ಲದೇ, ಕೋಮುವಾದವು ಸಂವಿಧಾನದ ಮೇಲೆ ಸವಾರಿ ಮಾಡು ವಂತಾಗಲಿದೆ ಎಂದ ಡಾ.ಮಹದೇವಪ್ಪ, ಈ ಸಂಬಂಧ ದೇಶಾದ್ಯಂತ ಹೋರಾಟ ನಡೆಸಲು ನಿರ್ಧರಿಸಿರುವ ಕಾಂಗ್ರೆಸ್, ನಾಳೆ (ಫೆ.15) ಮೈಸೂರಿನ ಪುರಭವ ನದ ಡಾ.ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿ ಭಟನೆ ನಡೆಸಲಾಗುವುದು ಎಂದರು.

ಲೋಕಸಭೆ ಮತ್ತು ವಿಧಾನಸಭೆ ಸೇರಿ ದಂತೆ ಯಾವುದೇ ಚುನಾವಣೆಗಳಿಗೆ ಸ್ಪರ್ಧೆ ಬಯಸುವ ಅಭ್ಯರ್ಥಿಗಳ ಕ್ರಿಮಿ ನಲ್ ಅಪರಾಧಗಳ ಹಿನ್ನೆಲೆಯನ್ನು ಆಯಾ ರಾಜಕೀಯ ಪಕ್ಷಗಳು ತಮ್ಮ ಅಧಿಕೃತ ವೆಬ್‍ಸೈಟ್‍ನಲ್ಲಿ ಪ್ರಕಟಿಸಬೇಕೆಂಬ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿ ಸುವುದಾಗಿಯೂ ಅವರು ತಿಳಿಸಿದರು.

ಚುನಾವಣಾ ಪ್ರಕ್ರಿಯೆಯಲ್ಲಿ ಮತ್ತಷ್ಟು ಪಾರದರ್ಶಕತೆ, ಸಮಾನತೆ ತರುವ ನಿಟ್ಟಿ ನಲ್ಲಿ ನ್ಯಾಯಾಲಯದ ಆದೇಶ ಸಮರ್ಪಕ ವಾದುದ್ದಾಗಿದ್ದು, ಚುನಾವಣಾ ಆಯೋ ಗವು ತೀರ್ಪನ್ನು ಚಾಚೂ ತಪ್ಪದೆ ಪಾಲಿಸ ಬೇಕು ಮತ್ತು ರಾಜ್ಯ ಸರ್ಕಾರಗಳಿಗೂ ನಿರ್ದೇಶನ ನೀಡಬೇಕೆಂದೂ ಡಾ. ಮಹ ದೇವಪ್ಪ ತಿಳಿಸಿದ್ದಾರೆ. ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಮುಖಂಡರಾದ ಮಂಜುಳಾ ಮಾನಸ, ಎಂ.ಶಿವಣ್ಣ, ಮಂಜುನಾಥ, ಭಾಸ್ಕರ್ ಎಲ್.ಗೌಡ ಸೇರಿದಂತೆ ಹಲವರು ಸುದ್ದಿ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »