ಮೈಸೂರಲ್ಲಿ ಮೆಡಿಕಲ್ ಅಂಡ್ ಸೇಲ್ಸ್   ರೆಪ್ರೆಸೆಂಟೇಟಿವ್‍ಗಳ ಸಮ್ಮೇಳನ ಆರಂಭ
ಮೈಸೂರು

ಮೈಸೂರಲ್ಲಿ ಮೆಡಿಕಲ್ ಅಂಡ್ ಸೇಲ್ಸ್  ರೆಪ್ರೆಸೆಂಟೇಟಿವ್‍ಗಳ ಸಮ್ಮೇಳನ ಆರಂಭ

February 15, 2020

ಮೈಸೂರು,ಫೆ.14(ಆರ್‍ಕೆ)- ಮೈಸೂ ರಿನ ಜೆಕೆ ಮೈದಾನದಲ್ಲಿರುವ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಪ್ಲಾಟಿನಂ ಜುಬಿಲಿ ಹಾಲ್‍ನಲ್ಲಿ ಮೆಡಿಕಲ್ ಮತ್ತು ಸೇಲ್ಸ್ ರೆಪ್ರೆಸೆಂಟೇಟಿವ್ ಗಳ ಮೂರು ದಿನಗಳ ಸಮ್ಮೇಳನ ಇಂದಿ ನಿಂದ ಆರಂಭವಾಯಿತು.

ಫೆಡರೇಷನ್ ಆಫ್ ಮೆಡಿಕಲ್ ಅಂಡ್ ಸೇಲ್ಸ್ ರೆಪ್ರೆಸೆಂಟೇಟಿವ್ಸ್ ಅಸೋಸಿಯೇ ಷನ್ ಆಫ್ ಇಂಡಿಯಾ (ಈಒಖಂI) ಆಯೋ ಜಿಸಿರುವ ಜನರಲ್ ಕೌನ್ಸಿಲ್ ಸಭೆಯನ್ನು ಸಿಐಟಿಯು ಅಖಿಲ ಭಾರತ ಉಪಾಧ್ಯಕ್ಷ ಎ.ಕೆ.ಪದ್ಮನಾಭನ್ ಅವರು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ರಾಜ್ಯ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಹೆಚ್.ಎನ್.ನಾಗ ಮೋಹನ್‍ದಾಸ್ ಅವರು ಮಾತ ನಾಡಿ, ಪ್ರಪಂಚದಲ್ಲೇ ಸರ್ವ ಶ್ರೇಷ್ಠ ಭಾರತದ ಸಂವಿಧಾನವನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಳ್ಳದಿರುವುದರಿಂದ ಸಮಾಜ ದಲ್ಲಿ ಎದುರಾಗಿರುವ ಸಮಸ್ಯೆಗಳಿಗೆ ಪರಿ ಹಾರ ಸಿಗುತ್ತಿಲ್ಲ ಎಂದರು.

ಭಾರತ ದೇಶವನ್ನು ಸುಮಾರು 600 ರಾಜರು ಆಳಿದ್ದಾರೆ. ಪ್ರಸ್ತುತ 136 ಕೋಟಿ ಜನಸಂಖ್ಯೆ ಇರುವ ಇಲ್ಲಿ ಕೃಷಿ ಆಧರಿಸಿರು ವವರ ಸಂಖ್ಯೆ ಹೆಚ್ಚಾಗಿದೆ. ಆಮದು-ರಫ್ತು ವಹಿವಾಟುಗಳಿವೆ. ಜನರಿಗೆ ವಸತಿ, ಆರೋಗ್ಯ, ಶಿಕ್ಷಣದಂತಹ ಮೂಲ ಸೌಲಭ್ಯವನ್ನು ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಸಮರ್ಪಕವಾಗಿ ನೀಡಲಾಗುತ್ತಿಲ್ಲ ಎಂದರೆ ಅದಕ್ಕೆ ಸಂವಿಧಾನದ ಜ್ಞಾನವಿಲ್ಲದಿರು ವುದು ಕಾರಣ ಎಂದರು.

ಭಯೋತ್ಪಾದನೆ, ಜಾತಿ ವ್ಯವಸ್ಥೆ, ಅಪ ರಾಧ ಪ್ರಕರಣಗಳೂ ಸೇರಿದಂತೆ ಹಲವು ಪ್ರಬಲ ಸವಾಲುಗಳು ನಮ್ಮ ಮುಂದಿವೆ. ಚುನಾವಣೆಗಳು ಬಂದಾಗ ಮತ ಹಾಕು ವುದು, ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ ಸರ್ಕಾರ ರಚಿಸುವುದಕ್ಕಷ್ಟೇ ಪ್ರಜಾ ಪ್ರಭು ತ್ವವನ್ನು ಸೀಮಿತಗೊಳಿಸಿಕೊಂಡಿರುವುದು ದುರದೃಷ್ಟಕರ ಎಂದಿರುವ ಅವರು, ದೇಶದ ಜನರಿಗೆ ಉದ್ಯೋಗ ಸೃಷ್ಟಿ, ರೈತರ ಆತ್ಮಹತ್ಯೆ ತಡೆಗಟ್ಟುವ ಬಗ್ಗೆ ಗಂಭೀರ ಚರ್ಚೆಗಳೇ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೆಲಸ ಮಾಡುವ ಕಾರ್ಮಿಕ ವರ್ಗ ತಮ್ಮ ಹಕ್ಕುಗಳನ್ನು ಹೋರಾಟದ ಮೂಲಕ ಪಡೆಯ ಬೇಕಾಗಿದೆ, ಎಲ್ಲಾ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ಹಾಗೂ ಸಮಾನತೆ ಒದಗಿಸಬೇಕೆಂಬ ಜವಾಬ್ದಾರಿಯೂ ಮರೆ ಯಾಗಿದೆ ಎಂದು ನ್ಯಾಯಮೂರ್ತಿಗಳು ನುಡಿದರು. ಎಫ್‍ಎಂಆರ್‍ಎಐ ಅಧ್ಯಕ್ಷ ಆರ್.ಮಹೇಶ ಸುಂದರ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಖ್ಯಾತ ವೈದ್ಯ ಡಾ.ಕೆ.ಜಾವೀದ್ ನಯೀಮ್, ಫೆಡ ರೇಷನ್ನಿನ ಪ್ರಧಾನ ಕಾರ್ಯದರ್ಶಿ ಸಂತನು ಚಟರ್ಜಿ, ಬಿ.ಚಂದ್ರಕುಮಾರ್, ಎಲ್.ಎಂ. ಪೇಶ್ವಾ, ಸಿಐಟಿಯುನ ಮೀನಾಕ್ಷಿ ಸುಂದರಂ, ಕೆ.ಎನ್. ಉಮೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

 

Translate »