ಪಿಡಿಓ ವರ್ಗಾವಣೆಗೆ ಗ್ರಾಮಸ್ಥರ ಆಗ್ರಹ
ಕೊಡಗು

ಪಿಡಿಓ ವರ್ಗಾವಣೆಗೆ ಗ್ರಾಮಸ್ಥರ ಆಗ್ರಹ

July 23, 2018

ಗೋಣಿಕೊಪ್ಪಲು:  ಗ್ರಾಮಸ್ಥ ರೊಂದಿಗೆ ಸರಿಯಾಗಿ ಸ್ಪಂದಿಸದ ಪಿಡಿಒ ಶಿವನಂಜಯ್ಯ ಅವರನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದ ಘಟನೆ ನಿಟ್ಟೂರು ಗ್ರಾಮ ಪಂಚಾಯ್ತಿಯ ಗ್ರಾಮ ಸಭೆಯಲ್ಲಿ ನಡೆಯಿತು.

ನಿಟ್ಟೂರು ಗ್ರಾಪಂ ಅಧ್ಯಕ್ಷೆ ಕಡೇಮಾಡ ಅನಿತಾ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದರು. ಗ್ರಾಮಸ್ಥರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಎಲ್ಲದಕ್ಕೂ ಹಣ ಕೇಳುತ್ತಾರೆ ಎಂಬ ಆರೋಪ ಗ್ರಾಮಸ್ಥ ರಿಂದ ವ್ಯಕ್ತವಾಯಿತು. ಇವರಿಂದ ಗ್ರಾಮದ ಅಭಿವೃದ್ಧಿ ಅಸಾಧ್ಯ, ಜನಪ್ರತಿನಿಧಿ ಹಾಗೂ ಗ್ರಾಮಸ್ಥರನ್ನು ಕಡೆಗಣಿಸಿ ಅಭಿವೃದ್ಧಿಗೆ ತೊಂದರೆ ನೀಡುತ್ತಿದ್ದಾರೆ. ಇವರನ್ನು ವರ್ಗಾವಣೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಕಳೆದ ಒಂದು ವರ್ಷ ದಿಂದ ಪಂಚಾಯ್ತಿ ನಡವಳಿ ಪುಸ್ತಕದಲ್ಲಿ ಸಭೆಗಳ ನಡವಳಿ ದಾಖಲಿಸದ ಬಗ್ಗೆ ಆಕ್ಷೇಪ ವ್ಯಕ್ತವಾಯಿತು.

ಪಹಣಿಪತ್ರದ ಬೆಳೆಗಳ ಕಲಂನಲ್ಲಿ ಬೆಲ್ಲ, ಸಕ್ಕರೆ ನಮೂದಿಸಿರುವ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ಒಳ ಪಡಿಸಿದರು. ಕಾಫಿ ಬೆಳೆಗಾರ ಅರಮಣ ಮಾಡ ಚರ್ಮಣ ಎಂಬುವವರ ಪಹಣಿ ಪತ್ರದಲ್ಲಿ ಕಂದಾಯ ಇಲಾಖೆಯಿಂದ ನಡೆ ದಿರುವ ತಪ್ಪನ್ನು ಗ್ರಾಮಸ್ಥ ಅಳಮೇಂಗಡ ಬೋಸ್ ಮಂದಣ್ಣ ಪ್ರಸ್ತಾಪಿಸಿದರು. ಇಂತಹ ನಿರ್ಲಕ್ಷ್ಯದಿಂದ ಬೆಳೆಗಾರ ಬ್ಯಾಂಕ್ ಸಾಲ ಪಡೆಯಲು ಬೆಳೆಗಾರನಿಗೆ ತೊಂದರೆಯಾಗುತ್ತಿದೆ. ಇಂತಹ ತಪ್ಪು ಗಳು ಕಂದಾಯ ಇಲಾಖೆಯಿಂದ ಹೆಚ್ಚು ನಡೆಯುತ್ತಿದೆ. ಕಾಫಿ ಬೆಳೆಯ ಹೆಸರಿನಲ್ಲಿ ಬೇರೆ ಬೆಳೆಗಳ ಹೆಸರುಗಳನ್ನು ದಾಖಲು ಮಾಡುವುದರಿಂದ ಬ್ಯಾಂಕ್‍ನಲ್ಲಿ ಸಾಲ ಪಡೆಯಲು ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ತಮ್ಮ ನೋವು ಹಂಚಿ ಕೊಂಡರು. ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಗೆ ಬಾರದ ಕಾರಣ ಸಮರ್ಪಕವಾದ ಉತ್ತರ ಗ್ರಾಮಸ್ಥರಿಗೆ ದೊರಕಲಿಲ್ಲ. ಬಾಳೆಲೆ ಗ್ರಾಮ ಲೆಕ್ಕಿಗ ಸುನೀಲ್ ತಪ್ಪನ್ನು ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಕಲ್ಲಳ್ಳ ಅರಣ್ಯ ವಲಯದಲ್ಲಿ ನಡೆಯು ತ್ತಿರುವ ಪ್ರಾಣಿ ಬೇಟೆ, ಕಳ್ಳತನ ವಿಚಾರ ದಲ್ಲಿ ಕಾರ್ಮಿರ ಮೇಲೆ ಅರಣ್ಯ ಇಲಾಖೆ ಪ್ರಕರಣ ದಾಖಲಿಸುತ್ತಿದೆ. ನೈಜ ಕಳ್ಳರ ವಿರುದ್ದ ಕ್ರಮಕ್ಕೆ ಮುಂದಾದರೆ ಕಳ್ಳತನ ಪ್ರಕಣವನ್ನು ನಿಯಂತ್ರಿಸಬಹುದು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಇತ್ತೀಚೆಗಷ್ಟೆ ನಿಟ್ಟೂರು ತಂಗುದಾಣದ ಹಿಂದೆ ಕಡವೆ ಬೇಡೆಯಾಡಿದ ಮಾಂಸ ಅರಣ್ಯ ಇಲಾ ಖೆಗೆ ದೊರೆತಿದೆ. ಆದರೆ, ಈ ಪ್ರಕರಣ ವನ್ನು ಇಲಾಖೆ ಗಂಭಿರವಾಗಿ ಪರಿಗಣಿ ಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

ಕೊಟ್ಟಗೇರಿ ಗ್ರಾಮದ ಮಹಿಳೆ ಕಾವೇರಿ ಶೌಚಗೃಹ ನಿರ್ಮಿಸಿದ್ದರೂ ಕೂಡ ಪಂಚಾ ಯ್ತಿಯಿಂದ ಹಣ ಮಂಜೂರು ಆಗದಿ ರುವ ಬಗ್ಗೆ ಸ್ವತಃ ಕಾವೇರಿ ಸಭೆಯ ಗಮನ ಸೆಳೆದರು. ಕೂಡಲೇ ಹಣ ಮಂಜೂರು ಮಾಡಬೇಕು ಎಂದರು ಒತ್ತಾಯಿಸಿದರು. ಉಪಾಧ್ಯಕ್ಷ ಪವನ್ ಚಿಟ್ಯಪ್ಪ, ಪಿ.ಡಿ.ಒ ಶಿವನಂಜಯ್ಯ, ಸದಸ್ಯರುಗಳಾದ ಸೂರಿ ಅಯ್ಯಪ್ಪ, ದೇವಿ, ಭಾಗ್ಯ ಗಂಗಮ್ಮ, ಜಿಪಂ ಸದಸ್ಯ ಬಾನಂಡ ಪ್ರತ್ಯು, ತಾಪಂ ಸದಸ್ಯೆ ಅನಿತಾ ಉಪಸ್ಥಿತರಿದ್ದರು.

Translate »