ಲಖನೌ,ಜ.5-ಪೌರತ್ವ ತಿದ್ದುಪಡಿ ಕಾಯ್ದೆ ಅಂಗೀಕಾರ ಗೊಂಡ ನಂತರ ಮೊದಲ ಬಾರಿಗೆ ಕಾಯ್ದೆ ಜಾರಿಗೊಳಿ ಸಲಿರುವ ರಾಜ್ಯ ಉತ್ತರ ಪ್ರದೇಶವಾಗಿರಲಿದೆ. ಈ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರ್ಕಾರ ಜಿಲ್ಲಾ ಮ್ಯಾಜಿಸ್ಟ್ರೇಟ್‍ಗಳಿಗೆ ಸೂಚನೆ ನೀಡಿದ್ದು, ಬಾಂಗ್ಲಾ, ಪಾಕಿಸ್ತಾನ, ಆಫ್ಘಾನಿ ಸ್ತಾನದಿಂದ ದೌರ್ಜನ್ಯಕ್ಕೊಳಗಾಗಿದ್ದ ಅಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರ ಪಟ್ಟಿ ಯನ್ನು ತಯಾರಿಸುವಂತೆ ತಿಳಿಸಿದೆ. ಈ ಬಗ್ಗೆ ಉತ್ತರಪ್ರದೇಶದ ಗೃಹ ಸಚಿವಾಲ ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವಿನಾಶ್ ಅವಸ್ಥಿ ಮಾತನಾಡಿದ್ದು, ಅಫ್ಘಾನಿಸ್ಥಾನದಿಂದ ಉತ್ತರ ಪ್ರದೇಶಕ್ಕೆ ಬಂದು ದಶಕಗಳಿಂದ ಪೌರತ್ವವಿಲ್ಲದೇ ಜೀವಿಸುತ್ತಿರುವವರ ಸಂಖ್ಯೆ ಕಡಿಮೆ ಇದೆ, ಪಟ್ಟಿ ತಯಾರಿಸುವಿಕೆ ಸಿಎಎ ಜಾರಿಗೊಳಿ ಸುವುದಕ್ಕೆ ಮೊದಲ ಹೆಜ್ಜೆ. ಸರ್ಕಾರ ನೈಜ ವಲಸಿಗರನ್ನು ಪತ್ತೆ ಮಾಡಿ ದೇಶದ ಪೌರತ್ವ ಪಡೆಯುವುದಕ್ಕೆ ಅರ್ಹರಾಗಿ ರುವವರನ್ನು ಪತ್ತೆ ಮಾಡಲಿದೆ. ಸಿಎಎ ನಿಯಮಾವಳಿ ಪ್ರಕಾರ ಪೌರತ್ವ ನೀಡ ಲಾಗುತ್ತದೆ. ರಾಜ್ಯದಲ್ಲಿರುವ ಮುಸ್ಲಿಂ ವಲಸಿಗರ ಕುರಿತು ಕೇಂದ್ರ ಗೃಹ ಸಚಿವಾ ಲಯಕ್ಕೆ ಸರ್ಕಾರ ಮಾಹಿತಿ ನೀಡಲಿದೆ ಎಂದು ಮಾಹಿತಿ ನೀಡಿದ್ದಾರೆ.
