ಮೈಸೂರು, ಜು.11(ಆರ್‍ಕೆಬಿ)- ಹಿಂದೆ ಅಡುಗೆ, ಉಡುಗೆ, ನಡೆ, ನುಡಿ, ಹಾಡು ಎಲ್ಲದರಲ್ಲೂ ಜನಪದವನ್ನು ಪ್ರತಿಬಿಂಬಿ ಸುತ್ತಿದ್ದವು. ನಾಡಿನ ಸಂಸ್ಕøತಿಯನ್ನು ತಿಳಿ ಸುತ್ತಿತ್ತು. ಜನಪದವಿದ್ದಲ್ಲಿ ವಾತಾವರಣ ನೀರಸವಾಗಿರದೆ ಲವಲವಿಕೆಯಿಂದ ಇರು ತ್ತಿತ್ತು. ಅಂತಹ ಜನಪದ ಇಂದು ಇಲ್ಲವಾ ಗಿದೆ ಎಂದು ಜಾನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ್ ತಿಳಿಸಿದರು.
ಮೈಸೂರಿನ ಮಹಾಜನ ಕಾಲೇಜಿನ ವಿವೇ ಕಾನಂದ ಸಭಾಂಗಣದಲ್ಲಿ ಕನ್ನಡ ವಿಭಾಗ ಮತ್ತು ಐಕ್ಯೂಎಸಿ ಕಾರ್ಯಾಗಾರ, ಜಾನ ಪದ ಸಾಹಿತ್ಯ ಮತ್ತು ಜೀವನ ಕುರಿತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ದರು. ಜನಪದ ಸಂಸ್ಕøತಿ ಶುದ್ಧ, ಹೃದಯ ವಂತಿಕೆಯ ಸಂಸ್ಕøತಿ, ಅನಕ್ಷರಸ್ಥ ಅನಾಮಧೇ ಯರ ಅಮೃತ ಕಾವ್ಯಗಳು, ಅವು ಅನುಭವ ಶ್ರೀಮಂತಿಕೆಯನ್ನು ನೀಡುತ್ತಿದ್ದವು ಎಂದರು.
ಅಂದು ಮಹಿಳೆಯರು ಬೆಳಿಗ್ಗೆ ಏಳು ವಾಗಲೇ `ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಾಲಿ, ಎಳ್ಳು, ಜೀರಿಗೆ ಬೆಳೆಯೋಳ, ಭೂಮಿತಾಯಿ ಎದ್ದೊಂದು ಗಳಿಗೆ ನೆನೆ ದೇನು’ ಎಂದು ಜನಪದ ಹಾಡಿನೊಂ ದಿಗೇ ದಿನವನ್ನು ಆರಂಭಿಸುತ್ತಿದ್ದರು. ಜೀರಿಗೆ ಗಂಡು ಹೆಣ್ಣಿನ ಸಂಂಬಂಧವನ್ನು, ಎಳ್ಳು ಸಂತಾನವನ್ನು ತಿಳಿಸುತ್ತದೆ. ಎಳ್ಳಿಗೆ ಸಂಸ್ಕøತಿಯಲ್ಲಿ ಹೆಚ್ಚಿನ ಸ್ಥಾನವಿದೆ. ಅದು ಜನ ಪದರಿಗೆ ಪವಿತ್ರ. ಭೂಮಿ ಸಹನಾಮಯಿ, ಎಲ್ಲವನ್ನೂ ಸಹಿಸಿಕೊಂಡಿದ್ದಾಳೆ. ಹೆಣ್ಣಿಗೂ ಕೂಡ ಅದೇ ಸಹನೆ ಬಂದಿದೆ. ಆ ಸಹನೆ ಗಂಡಿಗೆ ಸಾಧ್ಯವಿಲ್ಲ. ಮಗುವಿನ ಲಾಲನೆ ಹೆಣ್ಣಿನಿಂದ ಮಾತ್ರ ಸಾಧ್ಯ ಎಂದರು.
ಭತ್ತವನ್ನು ಕಟ್ಟುವಾಗ ಅತ್ತಿಗೆ-ನಾದಿನಿ ಜಗಳ ಮಾಡಿಕೊಳ್ಳದೆ ಜಾನಪದ ಹಾಡು ಹೇಳುತ್ತಾ ಒನಕೆ ಹಿಡಿದು ಭತ್ತ ಕುಟ್ಟುತ್ತಿ ದ್ದರು. ಗ್ರಾಮಗಳಲ್ಲಿ ಇವತ್ತಿನ ಮದುವೆ ನೋಡಿದರೆ ಹಾಜರಿ ಹಾಕೋದೊಂದೇ ಅತಿಥಿಗಳ ಕೆಲಸ. ಖಾಲಿ ಕವರ್ ಕೊಟ್ಟು ಹೋದರೂ ಆಯಿತು. ಆದರೆ ಅಂದು ಹಾಗಿರಲಿಲ್ಲ. ಮುಯ್ಯಿ ಬರೆದಿಟ್ಟುಕೊಳ್ಳುತ್ತಿ ದ್ದರು. ಒಂದು ತಿಂಗಳ ಕಾಲ ಮದುವೆ ಇರು ತ್ತಿತ್ತು. ಹಪ್ಪಳ, ಸಂಡಿಗೆ ಹೀಗೆ ಅನೇಕ ಕೆಲಸಗಳಿರುತ್ತಿದ್ದವು. ಇಡೀ ಗ್ರಾಮವೇ ಒಗ್ಗಟ್ಟಿನಿಂದ ಮದುವೆ ತಯಾರಿಯಲ್ಲಿ ಪಾಲ್ಗೊಳ್ಳುತ್ತಿತ್ತು. ಪ್ರತಿಯೊಂದು ಕೆಲಸಕ್ಕೂ ಒಂದು ಹಾಡಿರುತ್ತಿತ್ತು. ಆದರೆ ಇಂದು ಮದುವೆಗಳಲ್ಲಿ ಜನಪದ ಹಾಡುಗಳನ್ನೇ ಕಾಣಲಾಗುತ್ತಿಲ್ಲ. ಅದರ ಬದಲಿಗೆ ಆರ್ಕೆಸ್ಟ್ರಾ ಗಳು ಮನೆ ಮಾಡಿವೆ ಎಂದು ಬೇಸರ ವ್ಯಕ್ತ ಪಡಿಸಿದರು. ಕಾರ್ಯಕ್ರಮದಲ್ಲಿ ಮಹಾ ಜನ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶು ಪಾಲ ಡಾ.ಎಸ್.ವೆಂಕಟರಾಮು, ಮಹಾ ರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವ ಹಣಾ ಕಾಲೇಜಿನ ಸಹ ಪ್ರಾಧ್ಯಾಪಕ ಪ್ರೊ. ಕೃಷ್ಣಮೂರ್ತಿ, ಮಹಾಜನ ಪ್ರಥಮ ದರ್ಜೆ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಡಾ.ಎಸ್.ಆರ್.ರಮೇಶ್, ಕನ್ನಡ ವಿಭಾಗದ ಮುಖ್ಯಸ್ಥ ಡಾ ಹೆಚ್.ಆರ್. ತಿಮ್ಮೇಗೌಡ ಇನ್ನಿತರರು ಉಪಸ್ಥಿತರಿದ್ದರು