ಮೈಸೂರು,ಆ.12(ಪಿಎಂ)-ನೆರೆ ಸಂತ್ರ ಸ್ತರು ತಮ್ಮ ಮನೆಗೆ ಹಿಂತಿರುಗುವಾಗ ಅವರಿಗೆ ತಕ್ಷಣಕ್ಕೆ ಕಿಟ್ ವ್ಯವಸ್ಥೆ ಮೂಲಕ ಅಗತ್ಯ ವಸ್ತುಗಳ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಿದೆ.
ಇದಕ್ಕಾಗಿ ನಾಲ್ಕು ವಿಧದ ಕಿಟ್‍ಗಳನ್ನು `ವೆಲ್‍ಕಮ್ ಹೋಮ್ ಕಿಟ್’ ಶೀರ್ಷಿಕೆ ಯಡಿ ಸಿದ್ಧಪಡಿಸಲು ಉದ್ದೇಶಿಸಿದ್ದು, ಆಸಕ್ತ ದಾನಿಗಳೂ ಕಿಟ್ ಮಾದರಿಯಲ್ಲಿ ಸಾಮಗ್ರಿಗಳನ್ನು ನೀಡಬಹುದು. ಆದರೆ ಹೀಗೆಯೇ ಕೊಡಬೇಕೆಂದು ಕಡ್ಡಾಯ ವೇನಿಲ್ಲ. ತಮಗೆ ಅನುಕೂಲವಾದಂತಹ ಸಾಮಗ್ರಿಗಳನ್ನು ನೀಡಬಹುದು ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಕುಟುಂಬವೊಂದಕ್ಕೆ ಆಹಾರ ಪದಾರ್ಥ ಮತ್ತು ಇತರೆ ಸಾಮಗ್ರಿಗಳು ಒಳಗೊಂಡ ಕಿಟ್, ಓರ್ವ ಪುರುಷ ಇಲ್ಲವೆ ಓರ್ವ ಮಹಿಳೆಗೆ ಅಗತ್ಯವಿರುವ ವಸ್ತುಗಳ ಕಿಟ್ ಹಾಗೂ ಮಗುವಿಗೆ ಅಗತ್ಯವಿರುವ ವಸ್ತುಗಳ ಕಿಟ್ ಎಂದು ನಾಲ್ಕು ವಿಧದಲ್ಲಿ ಕಿಟ್‍ಗಳನ್ನು ವಿಂಗಡಿಸಲಾಗಿದೆ.
ಕುಟುಂಬವೊಂದರ ಕಿಟ್‍ನಲ್ಲಿ ತಲಾ 5 ಕೆಜಿ ಅಕ್ಕಿ, ಒಂದೊಂದು ಕೆಜಿ ಬೇಳೆ, ಸಕ್ಕರೆ 1 ಲೀ. ಅಡುಗೆ ಎಣ್ಣೆ, 1 ಕೆಜಿ ಅಯೋ ಡಿನ್ ಉಪ್ಪು, ಅರ್ಧ ಕೆಜಿ ಖಾರದ ಪುಡಿ, 2 ಬೆಡ್‍ಶೀಟ್, 2 ಚಾಪೆ ಅಥವಾ ಕಾರ್ಪೆಟ್, ಪಾತ್ರೆಗಳು (ತಟ್ಟೆ, ಲೋಟ ಹಾಗೂ ಅಡುಗೆ ಪಾತ್ರೆ 2), 1 ಪ್ಯಾಕ್ ಬ್ಲೀಚಿಂಗ್ ಪೌಡರ್, 1 ಲೀ. ಫಿನಾಯಿಲ್ ಒಳಗೊಂಡಂತೆ ಸಾಮಗ್ರಿಗಳನ್ನು ಪಟ್ಟಿ ಮಾಡಲಾಗಿದೆ.
ಅದೇ ರೀತಿ ಓರ್ವ ಪುರುಷನ ಕಿಟ್‍ನಲ್ಲಿ ಪಂಚೆ, ಶರ್ಟ್, ಒಳ ಉಡುಪು, ಟವಲ್, ಟೂತ್ ಬ್ರಷ್, ಟೂತ್ ಪೇಸ್ಟ್, ಮೈ ಸೋಪು ಹಾಗೂ ಬಟ್ಟೆ ಸೋಪು ಸೇರಿದಂತೆ ಈ ಎಲ್ಲಾ ಸಾಮಗ್ರಿಗಳನ್ನು ಒಂದೊಂದು ಸೇರಿಸಿ ಕಿಟ್ ಸಿದ್ಧಪಡಿ ಸಲು ಉದ್ದೇಶಿಸಲಾಗಿದೆ.
ಅಂತೆಯೇ ಓರ್ವ ಮಹಿಳೆ ಕಿಟ್‍ನಲ್ಲಿ ಸೀರೆ, ನೈಟಿ ಹಾಗೂ ಒಳ ಉಡುಪು ಒಂದೊಂದು, ಸ್ಯಾನಿಟರಿ ನ್ಯಾಪ್‍ಕಿನ್, ಟವಲ್, ಟೂತ್ ಬ್ರಷ್, ಟೂತ್ ಪೇಸ್ಟ್, ಮೈ ಸೋಪು ಹಾಗೂ ಬಟ್ಟೆ ಸೋಪು ಸೇರಿಸಲು ಉದ್ದೇಶಿಸಲಾಗಿದೆ. ಮಗು ವೊಂದಕ್ಕೆ ಅಗತ್ಯವಿರುವ ವಸ್ತುಗಳ ಕಿಟ್‍ನಲ್ಲಿ 1 ಟವಲ್, 2 ಜೊತೆ ಬಟ್ಟೆ, 1 ಕೆಜಿ ಹಾಲು ಪೌಡರ್ ಹಾಗೂ ಡೈಪರ್, ಟೂತ್ ಬ್ರಷ್, ಟೂತ್ ಪೇಸ್ಟ್, ಮೈ ಸೋಪು ಈ ಎಲ್ಲವೂ ಒಂದೊಂದು ಇರುವಂತೆ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ.
ಈ ಸಂಬಂಧ `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿದ ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಹಾಗೂ ಪುರಭವನದ ಸಾಮಗ್ರಿ ಸಂಗ್ರಹ ಕೇಂದ್ರದ ನೋಡಲ್ ಅಧಿಕಾರಿ ಡಾ.ಎಂ.ಎಸ್. ಜಯಂತ್, ಕಿಟ್ ಮಾದರಿಯಲ್ಲೇ ದಾನಿ ಗಳು ಸಾಮಗ್ರಿ ನೀಡಬೇಕೆಂದು ಒತ್ತಾಯ ವೇನಿಲ್ಲ. ಆಸಕ್ತರಿದ್ದು ಸಾಧ್ಯವಾದರೆ ನೀಡ ಬಹುದು. ಸಂತ್ರಸ್ತರಿಗೆ ಅನುಕೂಲವಾಗು ತ್ತದೆ ಎಂಬ ಹಿನ್ನೆಲೆಯಲ್ಲಿ ಈ ರೀತಿ ಕಿಟ್ ಮಾದರಿ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ. ದಾನಿಗಳು ಯಾವ ರೀತಿಯಲ್ಲಿ ಕೊಟ್ಟರೂ ತೆಗೆದುಕೊಳ್ಳು ತ್ತೇವೆ. ಆದರೆ ಬಟ್ಟೆ-ಬರೆ ವಿಚಾರದಲ್ಲಿ ಬಳಕೆ ಮಾಡಿರುವುದನ್ನು ತೆಗೆದುಕೊಳ್ಳು ವುದಿಲ್ಲ ಎಂದು ತಿಳಿಸಿದರು.
ಕೇಂದ್ರಕ್ಕೆ ಉದಾರವಾಗಿ ಸಾಮಗ್ರಿಗಳನ್ನು ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆ ಗಳು ತಲುಪಿಸುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇಂದ್ರದಿಂದ ಈಗಾಗಲೇ 6 ಲೋಡ್‍ನಷ್ಟು ಸಾಮಗ್ರಿಗಳನ್ನು ನೆರೆ ಪೀಡಿತ ಪ್ರದೇಶಗಳಿಗೆ ಕಳುಹಿಸಲಾಗಿದೆ. ಈ ಪೈಕಿ 5 ಲಾರಿ ಕೊಡಗು ಜಿಲ್ಲೆಗೆ ಹಾಗೂ ಒಂದನ್ನು ಹಾಸನ ಜಿಲ್ಲೆಗೆ ಕಳುಹಿ ಸಲಾಗಿದೆ. ಜೊತೆಗೆ ಮೈಸೂರು ಜಿಲ್ಲೆಯ 4 ತಾಲೂಕುಗಳ ಪ್ರವಾಹ ಪೀಡಿತ ಪ್ರದೇಶಗಳಿಗೂ ಸಾಮಗ್ರಿ ಕಳುಹಿಸಲಾಗಿದೆ ಎಂದು ವಿವರಿಸಿದರು.