ಸ್ವಚ್ಛತೆಗೆ ಕೊಡಗಿಗೆ ತೆರಳಿದ ಪೌರಕಾರ್ಮಿಕರ ತಂಡ
ಮೈಸೂರು

ಸ್ವಚ್ಛತೆಗೆ ಕೊಡಗಿಗೆ ತೆರಳಿದ ಪೌರಕಾರ್ಮಿಕರ ತಂಡ

August 13, 2019

ಮೈಸೂರು,ಆ.12(ಎಸ್‍ಬಿಡಿ)- ಮೈಸೂರು ನಗರ ಪಾಲಿಕೆ ಪೌರಕಾರ್ಮಿ ಕರ ತಂಡ ಸೋಮವಾರ ನೆರೆ ಪೀಡಿತ ಕೊಡಗು ಜಿಲ್ಲೆಗೆ ತೆರಳಿತು.

ಕೊಡಗು ಜಿಲ್ಲಾಡಳಿತದ ಕೋರಿಕೆ ಮೇರೆಗೆ 20 ಮಂದಿ ಯುವ ಪೌರ ಕಾರ್ಮಿಕರನ್ನು ನಿಯೋಜಿಸಲಾಗಿದ್ದು, ಸ್ವಚ್ಛತಾ ಕಾರ್ಯಕ್ಕೆ ಅಗತ್ಯವಾದ ಬ್ಲೀಚಿಂಗ್ ಪೌಡರ್, ಹ್ಯಾಂಡ್ ಗ್ಲೋಸ್, ಶೂ, ಮಾಸ್ಕ್ ಇನ್ನಿತರ ಪರಿಕರಗ ಳೊಂದಿಗೆ ಇಂದು ಮಧ್ಯಾಹ್ನ ಮುಡಾ ವಾಹನದಲ್ಲಿ ಕೊಡಗಿಗೆ ತೆರಳಿದರು.

ಇದಕ್ಕೂ ಮುನ್ನ ಪುರಭವನದ ಬಳಿ ಪಾಲಿಕೆ ಆರೋಗ್ಯಾಧಿಕಾರಿ ಡಾ.ಎಂ. ಎಸ್.ಜಯರಾಂ ಅವರು, ಪೌರಕಾರ್ಮಿ ಕರಿಗೆ ಕೆಲ ಸಲಹೆ ಸೂಚನೆ ನೀಡಿ, ಬೀಳ್ಕೊಟ್ಟರು. ಈ ಸಂಬಂಧ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಡಾ.ಜಯರಾಂ, ಕೊಡಗು ಜಿಲ್ಲಾಡಳಿತದ ಕೋರಿಕೆ ಮೇರೆಗೆ ಮೈಸೂರು ಜಿಲ್ಲಾಧಿಕಾರಿಗಳು ಪಾಲಿಕೆಗೆ ಸೂಚನೆ ನೀಡಿದ್ದರ ಹಿನ್ನೆಲೆ ಯಲ್ಲಿ ಇಂದು 20 ಪೌರಕಾರ್ಮಿಕರ ತಂಡ ಕಳುಹಿಸಲಾಗಿದೆ. ಇವರೊಂದಿಗೆ ಇಬ್ಬರು ಆರೋಗ್ಯ ನಿರೀಕ್ಷಕರು ತೆರಳಿದ್ದು, ಒಂದೆರಡು ದಿನ ಕಾರ್ಮಿಕರಿಗೆ ಮಾರ್ಗ ದರ್ಶನ ನೀಡಿ ವಾಪಸ್ಸಾಗಲಿದ್ದಾರೆ. ಅಗತ್ಯವಿದ್ದರೆ ನಾಳೆ ಮತ್ತೆ 10 ಮಂದಿ ಯನ್ನು ಕಳುಹಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಕಳೆದ ವರ್ಷವೂ ನೆರೆಯಿಂದ ತತ್ತರಿಸಿದ್ದ ಕೊಡಗಿನಲ್ಲಿ ಮೈಸೂರಿನ ಪೌರಕಾರ್ಮಿಕರು ಸೇವೆ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Translate »