ವಿದ್ಯೆಯ ಪರಿಜ್ಞಾನ ಇಲ್ಲದವರು ರಾಜ್ಯದ ಆಡಳಿತ ನಡೆಸುತ್ತಿದ್ದಾರೆ!
ಮೈಸೂರು

ವಿದ್ಯೆಯ ಪರಿಜ್ಞಾನ ಇಲ್ಲದವರು ರಾಜ್ಯದ ಆಡಳಿತ ನಡೆಸುತ್ತಿದ್ದಾರೆ!

January 3, 2019

ಮೈಸೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿ ಯಿಂದಲೇ ಇಂಗ್ಲಿಷ್ ಮಾಧ್ಯಮ ಆರಂಭಿಸುವ ಮೈತ್ರಿ ಸರ್ಕಾರದ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿ ರುವ ಸರಸ್ವತಿ ಸಮ್ಮಾನ್ ಪುರಸ್ಕøತ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ, ವಿದ್ಯೆ ಎಂದರೇನು ಎಂಬ ಪರಿಜ್ಞಾನ ಇಲ್ಲದವರು ಇಂದು ರಾಜ್ಯದ ಆಡಳಿತ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನ ತಮ್ಮ ನಿವಾಸದ ಆವರಣದಲ್ಲಿ ಬುಧವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ವಿದ್ಯೆ ಎಂಬುದು ಯಾವಾಗಲೂ ಆಯಾ ಸಮಾಜದ ಸ್ಥಳೀಯ ಭಾಷೆಯ ಮಾಧ್ಯಮದ ಮೂಲಕವೇ ಮಕ್ಕಳಿಗೆ ದೊರೆಯ ಬೇಕು. ಬಳಿಕ ಬೇರೆ ಭಾಷೆಗೆ ಆದ್ಯತೆ ನೀಡಬಹುದು ಎಂದು ತಿಳಿಸಿದರು. ಇಂಗ್ಲಿಷ್ ಮಾಧ್ಯಮ ಎಂಬುದನ್ನು ವ್ಯಾಪಾರದ ದೃಷ್ಟಿಕೋನ ದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಬಳಸಿಕೊಳ್ಳುತ್ತಿವೆ. ಸರ್ಕಾರದ ಈ ಉದ್ದೇಶ ಸರಿಯಲ್ಲ. ಸರ್ಕಾರದ ಈ ನಡೆಯ ವಿರುದ್ಧ ಈಗಾಗಲೇ ಹೋರಾಟದ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದರು.

ಕೋರ್ಟ್‍ಗೆ ಹೋಗುವುದು ಸರಿಯಲ್ಲ: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಮಹಿಳೆಯರ ಪ್ರವೇಶದ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಾ.ಭೈರಪ್ಪ, ಒಂದೊಂದು ದೇವಸ್ಥಾನದಲ್ಲಿ ಒಂದೊಂದು ರೀತಿಯ ನಂಬಿಕೆ ಇರುತ್ತದೆ. ದೇವಾಲಯದ ನಂಬಿಕೆಗಳನ್ನು ಕೋರ್ಟ್‍ಗೆ ತೆಗೆದುಕೊಂಡು ಹೋಗುವುದು ಸರಿಯಲ್ಲ ಎಂದರು.

ಸಮಾಜಕ್ಕೆ ಕಂಟಕಪ್ರಾಯನಾಗಿದ್ದ ಮಹಿಷಾಸುರನನ್ನು ಸಂಹರಿಸಲು ಗಂಡು ದೇವತೆಗಳಿಂದ ಸಾಧ್ಯವಾಗಲಿಲ್ಲ. ಅವರೆಲ್ಲಾ ಒಟ್ಟುಗೂಡಿ ಶಕ್ತಿ ದೇವತೆ ಚಾಮುಂಡೇಶ್ವರಿಯಲ್ಲಿ ಸಹಾಯ ಯಾಚಿಸುತ್ತಾರೆ. `ನಮ್ಮ ಶಕ್ತಿಯನ್ನು ಧಾರೆ ಎರೆಯುತ್ತೇವೆ. ಮಹಿಷಾಸುರನನ್ನು ಸಂಹರಿಸು’ ಎಂದು ಕೇಳಿಕೊಳ್ಳುತ್ತಾರೆ. ಈ ವಿಷಯವನ್ನೇ ತೆಗೆದುಕೊಂಡು ಗಂಡಸರಿಗೆ ಅವಮಾನ ಮಾಡಲಾಗಿದೆ. ಚಾಮುಂಡೇಶ್ವರಿ ದೇವಿಯನ್ನೇ ರದ್ದುಗೊಳಿಸಿ ಎಂದು ನ್ಯಾಯಾ ಲಯಕ್ಕೆ ಹೋದರೆ ಆಗ ಕೋರ್ಟ್ ಏನು ಮಾಡಬೇಕು? ಎಂದು ಪ್ರಶ್ನಿಸಿದ ಭೈರಪ್ಪ ಅವರು, ದೇವಾಲಯದ ನಂಬಿಕೆಗಳನ್ನು ಕೋರ್ಟ್‍ಗೆ ತೆಗೆದು ಕೊಂಡು ಹೋಗುವುದು ಸರಿಯಲ್ಲ ಎಂದು ಪುನರುಚ್ಚರಿಸಿದರು.

Translate »