ಕುಶಾಲನಗರ: ಈಜಲು ತೆರಳಿದ ಮೂವರು ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ಇಲ್ಲಿಗೆ ಸಮೀಪದ ಮಾದಾಪಟ್ಟಣ ಸರ್ಕಾರಿ ಇಂಜಿ ನಿಯರಿಂಗ್ ಕಾಲೇಜು ಬಳಿ ಕಾವೇರಿ ನದಿಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ. ಇವರೆಲ್ಲಾ ಮಡಿಕೇರಿ ಸರ್ಕಾರಿ ಜೂನಿಯರ್ ಕಾಲೇಜಿನ ವಾಣಿಜ್ಯ ವಿಭಾ ಗದ ವಿದ್ಯಾರ್ಥಿಗಳಾಗಿದ್ದು, ಮಡಿಕೇರಿಯ ಉಕ್ಕಡ ಗ್ರಾಮದ ರಮೇಶ್ ಪುತ್ರ ಆಕಾಶ್, ಮ್ಯಾನ್ಸ್ ಕಾಂಪೌಂಡ್ ಸಮೀಪದ ನಿವಾಸಿ ಚೆಲುವರಾಜು ಪುತ್ರ ಗಗನ್ ಮತ್ತು ಮೇಕೇರಿಯ ಉಮೇಶ್ ಪುತ್ರ ಶಶಾಂಕ್ ಎಂದು ಗುರುತಿಸಲಾಗಿದೆ. ಇಂದು ರಂಜಾನ್ ಪ್ರಯುಕ್ತ ಮೃತರು ಸೇರಿದಂತೆ 9 ವಿದ್ಯಾರ್ಥಿಗಳು ಮಡಿಕೇರಿ ಯಿಂದ ತಮ್ಮ ಸ್ನೇಹಿತ ಸ್ಯಾಂಡಲ್ ವುಡ್ ನಿವಾಸಿ ಮನ್ಸೂರ್ ಅವರ ಮನೆಗೆ ಊಟಕ್ಕೆ ಬಂದಿದ್ದರು. ಊಟ ಮುಗಿದ ನಂತರ ಎಲ್ಲರೂ ಮಾದಾಪಟ್ಟಣ ದಲ್ಲಿರುವ ಮನ್ಸೂರ್‍ನ ದೊಡ್ಡಮ್ಮನ ಮನೆಗೆ ಹೋಗಲು ನಿರ್ಧರಿಸಿದ್ದಾರೆ. ಆಕಾಶ್, ಗಗನ್ ಮತ್ತು ಶಶಾಂಕ್ ಬೈಕ್‍ನಲ್ಲಿ ಉಳಿದವರಿಗಿಂತ ಮುಂಚೆಯೇ ಮಾದಾ ಪಟ್ಟಣಕ್ಕೆ ತೆರಳಿದರೆ, ಉಳಿದವರು ಬಸ್‍ನಲ್ಲಿ ತೆರಳಿದರು ಎನ್ನಲಾಗಿದೆ. ಎಲ್ಲರಿಗಿಂತ ಮುನ್ನವೇ ಮಾದಾಪಟ್ಟ ಣಕ್ಕೆ ಹೋದ ಮೂವರು ಅಲ್ಲಿನ ಸರ್ಕಾರಿ ಇಂಜಿ ನಿಯರಿಂಗ್ ಕಾಲೇಜು ಬಳಿ ಕಾವೇರಿ ನದಿಯಲ್ಲಿ ಈಜುತ್ತಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದರು ಎಂದು ಹೇಳಲಾಗಿದೆ. ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಸಬ್ ಇನ್ಸ್‍ಪೆಕ್ಟರ್ ಜಗದೀಶ್, ಸಿಬ್ಬಂದಿಗಳಾದ ರವೀಂದ್ರ, ಮಾಚಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
