ಕೊಡಗು

ಮುಂದಿನ ವರ್ಷದಿಂದ ಟಿಪ್ಪು ಜಯಂತಿ ನಡೆಯಲ್ಲ

November 13, 2018

ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಭವಿಷ್ಯ
ಗೋಣಿಕೊಪ್ಪಲು: ಯಾರಿಗೂ ಬೇಡವಾದ ಟಿಪ್ಪು ಜಯಂತಿ ಮುಂದಿನ ವರ್ಷ ನಡೆಯುವುದಿಲ್ಲ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.

ಗೋಣಿಕೊಪ್ಪ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಈ ವರ್ಷ ರಾಜ್ಯ ಸರ್ಕಾರದ ನಿರಾಸಕ್ತಿ ನೋಡಿದಾಗ ಮುಂದಿನ ವರ್ಷ ಟಿಪ್ಪು ಜಯಂತಿ ಆಚರಣೆ ನಡೆಯುವುದಿಲ್ಲ ಎಂದೇ ನಿಸುತ್ತದೆ ಎಂದು ಹೇಳಿದರು.
ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ ಸಿಎಂ ಹಾಗೂ ಡಿಸಿಎಂ ಆಚರಣೆಯಿಂದ ದೂರ ಉಳಿದಿದ್ದಾರೆ. ಎಲ್ಲ್ಲರಿಗೂ ಟಿಪ್ಪುವಿನ ಬಗ್ಗೆ ಅರ್ಥವಾಗಿದೆ. ಇದಕ್ಕೆ ಹಿಂದೂಪರ ಸಂಘಟನೆಗಳ ಹೋರಾಟ ಕಾರಣ ವಾಯಿತು ಎಂದರು. ಮೊದಲ ವರ್ಷ ಹೆಚ್ಚು ವೈಭವೀಕರಿಸಿ ಟಿಪ್ಪು ಜಯಂತಿ ಆಚರಿಸಲಾಯಿತು. ನಂತರ ಸಾರ್ವಜನಿಕವಾಗಿಯೂ ಆಚರಿಸಲಾಯಿತು. ಈ ವರ್ಷ ಸಣ್ಣ ಕೋಣೆಯೊಳಗೆ ಆಚರಿಸಲ್ಪಟ್ಟಿತು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಕೂಡ ಆಚರಣೆ ಯಿಂದ ಹಿಂದೆ ಸರಿದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಕ್ಕೂ ಕೂಡ ಅವನ ಆಚರಣೆ ಬೇಡ ಎಂಬಂತಾ ಗಿದೆ. ಇದು ಅವನ ಆಚರಣೆ ಬೇಡ ಎಂಬ ಹಿಂದೂ ಪರ ಸಂಘಟನೆಗಳ ಹೋರಾಟಕ್ಕೆ ದೊರೆತ ಜಯವಾ ಗಿದೆ. ಯಾರಿಗೂ ಬೇಡವಾದ ಆಚರಣೆ ಮುಂದಿನ ದಿನಗಳಲ್ಲಿ ಕಾಣುವುದಿಲ್ಲ ಎಂದರು.

ಹಿಂದುತ್ವ ಹಾಗೂ ಅಭಿವೃದ್ಧಿಯನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಉದ್ದೇಶದಿಂದ ಪ್ರಧಾನಿ ನರೇಂದ್ರಮೋದಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ತಮ್ಮ ಅಧಿಕಾರ ಅವಧಿಯಲ್ಲೆ ಮುಂದಾಗಬೇಕು. ತಪ್ಪಿದಲ್ಲಿ ಸೋಲನುಭವಿಸಬೇಕಾಗುತ್ತದೆ. ಇದನ್ನು ಅರಿತು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜಯ ಗಳಿಸಬೇಕಾದರೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

ಅವರ ಅಧಿಕಾರ ಅವಧಿಯಲ್ಲೇ ರಾಮ ಮಂದಿರ ನಿರ್ಮಾಣವಾಗಬೇಕು. ತಪ್ಪಿದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಬೇ ಕಾಗುತ್ತದೆ. ಸಾರ್ವಜನಿಕವಾಗಿ ಅಭಿವೃದ್ಧಿಯೊಂದಿಗೆ ಹಿಂದುತ್ವಕ್ಕೆ ಅವಕಾಶ ನೀಡಬೇಕಾಗಿದೆ. ಬೇರೆ ಯಾವ ನಾಯಕರಿಂದಲೂ ರಾಮಮಂದಿರ ನಿರ್ಮಾಣ ಅಸಾಧ್ಯ ಎಂಬುವುದನ್ನು ಅರಿತುಕೊಳ್ಳಬೇಕು ಎಂದರು.

ವಾಜಪೇಯಿ ಸರ್ಕಾರ ಉತ್ತಮ ಆಡಳಿತ ನಡೆಸಿದ್ದರೂ ಕೂಡ ರಾಮ ಮಂದಿರ ನಿರ್ಮಾಣಕ್ಕೆ ಮುಂದಾಗದ ಕಾರಣ ವಾಜಪೇಯಿ ಸೋತರು. ಇದೇ ಇತಿಹಾಸ ಮತ್ತೆ ಮರುಕಳಿಸದಂತೆ ಎಚ್ಚರ ವಹಿಸಬೇಕಾದರೆ ರಾಮ ಮಂದಿರ ನಿರ್ಮಾಣಕ್ಕೆ ಮುಂದಾಗಬೇಕಿದೆ. ತಪ್ಪಿದಲ್ಲಿ ಮುಂದಿನ ಚುನಾವಣೆ ಯಲ್ಲಿ ಮೋದಿ ವಿರುದ್ಧವಾಗಿ ಶ್ರೀರಾಮ ಸೇನೆ ಕಾರ್ಯ ನಿರ್ವಹಿಸಲಿದೆ ಎಂದರು.
ಶಬರಿಮಲೆ ವಿಚಾರದಲ್ಲಿ ಧಾರ್ಮಿಕ ಕಟ್ಟುಪಾಡು ಗಳಿಗೆ ಕೇರಳ ಸರ್ಕಾರ ಕಾಳಜಿ ತೋರಿಸಬೇಕಿತ್ತು. ಅದರೆ ಸುಪ್ರಿಂ ತೀರ್ಪನ್ನು ಮರು ಪರಿಶೀಲನೆಗೆ ಮುಂದಾಗದೆ ಕೇರಳ ಸರ್ಕಾರ ದೌರ್ಜನ್ಯವೆಸಗಿದೆ. ಈ ಸರ್ಕಾರವನ್ನು ವಿಸರ್ಜಿಸಿ ಇಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕು. ಧರ್ಮ ಸ್ಥಳದಲ್ಲಿ ಶರ್ಟ್ ಕಳಚಿ ದರ್ಶನ ಪಡೆಯಬೇಕಾಗಿದೆ. ಇದನ್ನು ಅಸಮಾನತೆ ಎನ್ನಲು ಸಾಧ್ಯವಿಲ್ಲ. ಅಲ್ಲಿನ ಆಚರಣೆಗೆ ಗೌರವ ನೀಡಬೇಕಾಗಿದೆ. ಶಬರಿಮಲೆಯಲ್ಲಿ ಮಹಿಳೆಯರಿಗೆ ವಯೋಮಿತಿಯಂತೆ ಅವಕಾಶವಿದೆ ಎಂದರು.
ಸಂತಾಪ: ಕೇಂದ್ರ ಸಚಿವ ಅನಂತ್‍ಕುಮಾರ್ ನಿಧನ ಬಿಜೆಪಿ ಪಕ್ಷಕ್ಕೆ ಹೆಚ್ಚು ನಷ್ಟವಾಗಿದೆ. ಅವರ ಕುಟುಂಬಕ್ಕೆ ದುಖಃವನ್ನು ಸಹಿಸುವ ಶಕ್ತಿ ಕೊಡಲಿ. ಶ್ರೀರಾಮಸೇನೆ ಅವರ ನಿಧನಕ್ಕೆ ಸಂತಾಪ ಸೂಚಿಸುತ್ತದೆ ಎಂದರು. ಗೋಷ್ಠಿಯಲ್ಲಿ ಹಿಂದೂ ಕಾರ್ಯಕರ್ತರುಗಳಾದ ಗಣೇಶ್, ಅಶೋಕ್‍ರೈ ಇತರರು ಉಪಸ್ಥಿತರಿದ್ದರು

Translate »