ಮನೆಗಳ ಮೇಲಿನ ಬಿಜೆಪಿ  ಧ್ವಜ ತೆರವು ಸರಿಯಲ್ಲ
ಮೈಸೂರು

ಮನೆಗಳ ಮೇಲಿನ ಬಿಜೆಪಿ ಧ್ವಜ ತೆರವು ಸರಿಯಲ್ಲ

March 15, 2019

ಮೈಸೂರು: ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಯಲ್ಲಿ ನಿವಾಸಿಗಳ ಪೈಕಿ ಹಲವರು ತಮ್ಮ ಸ್ವ ಇಚ್ಛೆಯಿಂದ ಅವರ ಮನೆಗಳ ಮೇಲೆ ಬಿಜೆಪಿ ಧ್ವಜ ಹಾರಿಸಿಕೊಂಡಿದ್ದು, ಇದಕ್ಕೂ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಹೀಗಿ ದ್ದರೂ ಪೊಲೀಸ್ ಹಾಗೂ ಮಹಾನಗರಪಾಲಿಕೆ ಅಧಿಕಾರಿ ಗಳು, ಸಿಬ್ಬಂದಿ, ಚುನಾವಣಾ ಸಿಬ್ಬಂದಿ ಮನೆಗಳ ಮೇಲೆ ಹಾಕಿರುವ ಬಿಜೆಪಿ ಧ್ವಜಗಳನ್ನು ತೆರವುಗೊಳಿಸಲು ಮುಂದಾ ಗಿದ್ದಾರೆ. ಇದು ಸರಿಯಲ್ಲ ಎಂದು ಕೃಷ್ಣರಾಜ ಕ್ಷೇತ್ರ ಶಾಸಕ ಎಸ್.ಎ.ರಾಮದಾಸ್ ಆಕ್ಷೇಪಿಸಿದ್ದಾರೆ.

‘ಭಾರತೀಯ ಚುನಾವಣಾ ಆಯೋಗ 08.03.2012ರಲ್ಲಿ ಹೊರಡಿಸಿರುವ ಆದೇಶ ಪತ್ರದಲ್ಲಿ ಯಾರಾದರೂ ತಮ್ಮ ಸ್ವ ಇಚ್ಛೆಯಿಂದ ಅವರ ಮನೆಗಳಿಗೆ ಸೇರಿದ ಆಸ್ತಿಗಳಾದ ಮನೆ, ಅಂಗಡಿ, ನಿವೇಶನಗಳಲ್ಲಿ ರಾಜಕೀಯ ಪಕ್ಷದ ಧ್ವಜಗಳನ್ನು ಹಾಕಿಕೊಂಡರೆ ತಪ್ಪಾಗುವುದಿಲ್ಲ ಎಂದು ಉಲ್ಲೇಖಿಸಿ ಆ ರೀತಿಯ ಧ್ವಜ ತೆರವುಗೊಳಿಸದಂತೆ ತಿಳಿಸಲಾಗಿದೆ.

ಹೀಗಿದ್ದೂ, ಪೊಲೀಸ್ ಹಾಗೂ ನಗರಪಾಲಿಕೆ ಸಿಬ್ಬಂದಿ, ಚುನಾವಣಾ ನಿರತ ಅಧಿಕಾರಿ, ಸಿಬ್ಬಂದಿ ಈ ರೀತಿ ಧ್ವಜಗಳನ್ನು ಹಾಕಿಕೊಂಡ ಮನೆಗಳಿಗೆ ಭೇಟಿ ನೀಡಿ ಧ್ವಜಗಳನ್ನು ತೆರವುಗೊಳಿಸುತ್ತಿದ್ದಾರೆ. ಈ ಬಗ್ಗೆ ತಾವು 08.03.2019ರಂದು ಪೊಲೀಸ್ ಆಯುಕ್ತರು, ನಗರಪಾಲಿಕೆ ಆಯುಕ್ತರಿಗೆ ಪತ್ರ ಬರೆದು, ಇದು ಚುನಾವಣೆಗೆ ಸಂಬಂಧಿಸಿಲ್ಲವಾದ್ದರಿಂದ ಯಾವುದೇ ಕಾರಣಕ್ಕೂ ಈ ಧ್ವಜಗಳನ್ನು ತೆರವುಗೊಳಿಸದೆ ಯಥಾಸ್ಥಿತಿ ಕಾಪಾಡಲು ಇಲಾಖೆ ಅಧಿಕಾರಿ, ಸಿಬ್ಬಂದಿಗೆ ನಿರ್ದೇಶನ ನೀಡಬೇಕು. ಜೊತೆಗೆ ಯಥಾಸ್ಥಿತಿ ಕಾಪಾಡಲು ಆಯಾ ಮನೆಯವರಿಗೆ ಅವಕಾಶ ಮಾಡಿಕೊಡ ಬೇಕು ಎಂದು ಪತ್ರ ಬರೆದು ಕೋರಿರುವುದಾಗಿ ರಾಮದಾಸ್ ತಿಳಿಸಿದ್ದಾರೆ.

ಈ ವಿಚಾರವಾಗಿ ತಮ್ಮ ಸ್ವ ಇಚ್ಛೆಯಿಂದ ಹಾಕಿಕೊಂಡಿರುವ ಬಿಜೆಪಿ ಪಕ್ಷದ ಧ್ವಜ ಗಳನ್ನು ತೆರವುಗೊಳಿಸಲು ಯಾವುದೇ ಅಧಿಕಾರಿಗಳು ಬಂದರೂ ತೆರವುಗೊಳಿಸಲು ಅವಕಾಶ ನೀಡಬಾರದು ಎಂದು ನಿವಾಸಿಗಳಲ್ಲಿ ಅವರು ಮನವಿ ಮಾಡಿದ್ದಾರೆ.

Translate »