ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ  ವ್ಯಕ್ತಪಡಿಸಲು ಯಾವುದೇ ನಿರ್ಬಂಧ ಇಲ್ಲ
ಮೈಸೂರು

ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಯಾವುದೇ ನಿರ್ಬಂಧ ಇಲ್ಲ

March 15, 2019

ಮೈಸೂರು: ಚುನಾ ವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿ ಪ್ರಾಯ ವ್ಯಕ್ತಪಡಿಸಲು ನಿಷೇಧ ಹೇರಲಾ ಗಿದೆ ಎಂಬುದು ಸತ್ಯಕ್ಕೆ ದೂರವಾಗಿದ್ದು, ಅಭಿಪ್ರಾಯ ವ್ಯಕ್ತಪಡಿಸಲು ಯಾವುದೇ ನಿರ್ಬಂಧವಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾ ವಣೆ ಘೋಷಣೆ ಆಗುತ್ತಿದ್ದಂತೆ ಜಾರಿ ಗೊಂಡ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿ ಪ್ರಾಯ ವ್ಯಕ್ತಪಡಿಸಲು ನಿಷೇಧವಿದೆ ಎಂದು ಕೆಲ ಕನ್ನಡ ಮಾಧ್ಯಮಗಳು ಸುದ್ದಿ ಮಾಡಿ ದವು. ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯ ಕರ್ತರೂ ಸೇರಿದಂತೆ ಸಾರ್ವಜನಿಕರು ಫೇಸ್ ಬುಕ್, ವಾಟ್ಸಪ್, ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಲು ಆತಂಕಗೊಂಡಿ ದ್ದರು. ಆದರೆ ಆ ರೀತಿಯ ಯಾವುದೇ ನಿರ್ಬಂಧವಿಲ್ಲ ಎಂದು ಹೇಳಿದರು.
ಕೆಲ ಮಾಧ್ಯಮಗಳು ತಪ್ಪಾಗಿ ಗ್ರಹಿಸಿ ಈ ರೀತಿ ಸುದ್ದಿ ಮಾಡಿದ್ದವು. ಇದರಿಂದ ಫೇಸ್ ಬುಕ್‍ನಲ್ಲಿ ಅಭ್ಯರ್ಥಿ ಛಾಯಾಚಿತ್ರ ಪ್ರಕಟಗೊಂಡರೆ ಪೊಲೀಸರು ಕ್ರಮ ಕೈಗೊಳ್ಳು ತ್ತಾರೆ ಎಂಬುದು ಸೇರಿದಂತೆ ಅನೇಕ ಬಗೆ ಯಲ್ಲಿ ಆತಂಕ ಸೃಷ್ಟಿಯಾಗಿತ್ತು. ಆದರೆ ಇದೆ ಲ್ಲವೂ ಸತ್ಯಕ್ಕೆ ದೂರವಾದವು ಎಂದರು.

ಹಿರಿಯ ವಕೀಲ ಪಿ.ಡಿ.ಮೇದಪ್ಪ ಮಾತ ನಾಡಿ, ಪ್ರತಿ ನಾಗರಿಕನಿಗೂ ಭಾರತೀಯ ಸಂವಿಧಾನವು `19 (1) ಎ’ ವಿಧಿಯಡಿ ಯಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ. ಆದರೆ ಸ್ವಾತಂತ್ರ್ಯ ಮಿತಿಯಲ್ಲಿ ರಬೇಕೆಂಬ ಉದ್ದೇಶದಿಂದ ಉಪವಿಧಿ ಯಲ್ಲಿ ಗುರುತರ ಜವಾಬ್ದಾರಿಗಳನ್ನು ಹೇಳ ಲಾಗಿದೆ. ಸಂವಿಧಾನದತ್ತವಾದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ದೇಶ ಹಾಗೂ ಪ್ರಜೆಗಳ ಅಭಿವೃದ್ಧಿಗೆ ಯಾವ ರೀತಿ ಬಳಸಬೇಕೆಂದು ಟ್ರಾಯ್ ಕಾಯ್ದೆ ಮತ್ತು ಐಟಿ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣಗಳ ಆರೋಗ್ಯ ಕರ ಬಳಕೆಗೆ ಈ ಎರಡು ಕಾಯ್ದೆಗಳು ಇದ್ದಾಗ್ಯೂ ನಿರ್ಬಂಧದ ಮಾತುಗಳು ಕೇಳಿ ಬರುತ್ತಿವೆ. ಜಾಲತಾಣಗಳ ಮಿತಿ ಮೀರಿದ ಅಭಿವ್ಯಕ್ತಿ ಸ್ವಾತಂತ್ರ್ಯ ವಿರುದ್ಧ ಕ್ರಮ ವಹಿ ಸಲು ಬೇಕಾದಷ್ಟು ಕಾನೂನು ಇದ್ದರೂ ಈ ಮಾತು ಕೇಳಿ ಬರುತ್ತಿರುವುದು ಅನ ಗತ್ಯ. ಸಾಮಾಜಿಕ ಜಾಲತಾಣದಲ್ಲಿ ಅಭಿ ಪ್ರಾಯವನ್ನೇ ನಿರ್ಬಂಧಿಸುವುದು ವ್ಯಕ್ತಿ ಸ್ವಾತಂತ್ರ್ಯದ ದಮನವಾಗಿದೆ. ತಲೆ ನೋವು ಎಂಬ ಕಾರಣಕ್ಕೆ ತಲೆಯನ್ನೇ ತೆಗೆಯ ಲಾದೀತೆ? ಎಂದು ಪ್ರಶ್ನಿಸಿದರು.

ಇದೇ ವೇಳೆ ಮಾಧ್ಯಮದವರಿಗೆ ಪ್ರತಿ ಕ್ರಿಯಿಸಿದ ಪ್ರತಾಪ್ ಸಿಂಹ, ಸಂವಿಧಾನ ಬದಲು ಮಾಡಬೇಕೆಂಬ ಅಭಿಪ್ರಾಯ ವ್ಯಕ್ತ ಪಡಿಸಿದ್ದ ಸಚಿವ ಅನಂತಕುಮಾರ್ ಹೆಗಡೆ ಈಗಾಗಲೇ ಸಂಸತ್ತಿನಲ್ಲೇ ಕ್ಷಮೆ ಕೇಳಿದ್ದು, ಮತ್ತೆ ಅದೇ ಸವಕಲು ಪ್ರಶ್ನೆ ಕೇಳಬೇಡಿ ಎಂದು ಬೇಸರ ವ್ಯಕ್ತಪಡಿಸಿದರಲ್ಲದೆ, ಸಂಸ ತ್ತಿನ ಸೆಂಟ್ರಲ್ ಹಾಲ್‍ನಲ್ಲಿ ಅಂಬೇಡ್ಕರ್ ಭಾವಚಿತ್ರ ಅಳವಡಿಸಿದ್ದು ಬಿಜೆಪಿ ಬೆಂಬ ಲಿತ ಸರ್ಕಾರ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿಯವರು ಪಂಚಪೀಠದ ಹೆಸರಿನಲ್ಲಿ ಅಂಬೇಡ್ಕರ್ ಅವರ ಸ್ಮಾರಕಗಳನ್ನು ಅಭಿವೃದ್ಧಿ ಪಡಿಸುವ ಯೋಜನೆಗೆ ಚಾಲನೆ ನೀಡಿದ್ದಾರೆ. ಸಂವಿಧಾನ ದಿನ ಆಚರಣೆಗೂ ಮೋದಿ ಯವರೇ ಚಾಲನೆ ನೀಡಿದ್ದಾರೆ ಎಂದರು.

ಚುನಾವಣೆಗೆ ಒಳ್ಳೆಯ ತಯಾರಿ ಎಂದರೆ ಅಧಿಕಾರಾವಧಿಯಲ್ಲಿ ಒಳ್ಳೆಯ ಕೆಲಸ ಮಾಡು ವುದಾಗಿದ್ದು, ಅದನ್ನು ಪಕ್ಷ ಹಾಗೂ ನಾನು ಮಾಡಿದ್ದೇನೆ. ನರೇಂದ್ರ ಮೋದಿಯವರ ಜನಪರ ಯೋಜನೆಗಳು ಜನತೆಯ ಮುಂದಿವೆ ಎಂದ ಅವರು, ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿ ಕೊಂಡಿವೆ ಎಂದು ಟೀಕಿಸಿದ ಅವರು, ಟಿಕೆಟ್ ವಿಚಾರದಲ್ಲಿ ನನಗೆ ಯಾವುದೇ ಗೊಂದಲ ವಿಲ್ಲ. ಈಗಾಗಲೇ ರಾಜ್ಯಾಧ್ಯಕ್ಷರಾದ ಬಿ.ಎಸ್. ಯಡಿಯೂರಪ್ಪ ಅವರು ಹಾಲಿ ಸಂಸದ ರಿಗೆ ಟಿಕೆಟ್ ನೀಡಲಾಗುವುದು ಎಂದು ಪ್ರಕ ಟಿಸಿದ್ದಾರೆ ಎಂದು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ ದರು. ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ. ರಾಜೇಂದ್ರ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆ ಸಂಚಾಲಕ ಎನ್.ವಿ. ಫಣೀಶ್, ಕಾನೂನು ವಿಭಾಗದ ಪ್ರಮುಖ್, ಉಮೇಶ್‍ಕುಮಾರ್, ವಕೀಲ ಶಿವರಾಜ್ ಗೋಷ್ಠಿಯಲ್ಲಿದ್ದರು.

Translate »