ಇಂದು 61 ನಗರ ಸ್ಥಳೀಯ ಸಂಸ್ಥೆಗಳಿಗೆ ಮತದಾನ
ಮೈಸೂರು

ಇಂದು 61 ನಗರ ಸ್ಥಳೀಯ ಸಂಸ್ಥೆಗಳಿಗೆ ಮತದಾನ

May 29, 2019

ಬೆಂಗಳೂರು: ರಾಜ್ಯದ ಮಿನಿ ಸಮರವೆಂದೇ ಪರಿಗಣಿತ ವಾಗಿರುವ 61 ನಗರ ಸ್ಥಳೀಯ ಸಂಸ್ಥೆ ಗಳಿಗೆ ನಾಳೆ(ಮೇ29) ಮತದಾನ ನಡೆ ಯಲಿದೆ. ರಾಜ್ಯದ ಪಟ್ಟಣ ಪಂಚಾಯ್ತಿ, ಪುರಸಭೆ, ನಗರಸಭೆ ಸೇರಿದಂತೆ 61 ನಗರ ಸ್ಥಳೀಯ ಸಂಸ್ಥೆಗಳಿಗೆ ಮತ ದಾನ ನಡೆಯಲಿದ್ದು, 1296 ವಾರ್ಡ್ ಗಳಲ್ಲಿ 4360 ಅಭ್ಯರ್ಥಿಗಳು ಸ್ಪರ್ಧಿ ಸಿದ್ದಾರೆ. ಬೆಳಿಗ್ಗೆ 7 ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದ್ದು, ಮತದಾನ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಸಾರ್ವಜನಿಕ ಉದ್ದಿಮೆಗಳು, ಖಾಸಗಿ ಕಂಪೆನಿಗಳು ಸೇರಿದಂತೆ ಎಲ್ಲಾ ಸಂಸ್ಥೆ ಗಳಿಗೂ ರಜೆ ಘೋಷಿಸಲಾಗಿದ್ದು, ತುರ್ತು ಸೇವೆ ಅಗತ್ಯವಿರುವ ಸಂಸ್ಥೆಗಳಲ್ಲಿ ಮತದಾರರಿಗೆ ಮತ ಚಲಾಯಿಸಲು ಅವಕಾಶ ಕಲ್ಪಿಸುವಂತೆ ರಾಜ್ಯ ಚುನಾ ವಣಾ ಆಯೋಗ ಸೂಚಿಸಿದೆ. ಆಯೋ ಗದ ಮಾಹಿತಿ ಪ್ರಕಾರ 61 ಸ್ಥಳೀಯ ಸಂಸ್ಥೆಗಳ 1326 ವಾರ್ಡ್‍ಗಳ ಪೈಕಿ 30 ವಾರ್ಡ್‍ಗಳಲ್ಲಿ ಈಗಾಗಲೇ ಅವಿ ರೋಧವಾಗಿ ಆಯ್ಕೆಯಾಗಿದೆ. ಕಾಂಗ್ರೆಸ್‍ನಿಂದ 1224, ಬಿಜೆಪಿಯಿಂದ 1125, ಜೆಡಿಎಸ್ 780 ಅಭ್ಯರ್ಥಿಗಳು ಸೇರಿದಂತೆ ಒಟ್ಟು 4360 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ಅಗತ್ಯಬಿದ್ದರೆ ಮೇ 30ಕ್ಕೆ ಮರು ಮತದಾನ ನಡೆಸಲಾಗುತ್ತದೆ. ಮೇ 31 ರಂದು ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಹೊರ ಬೀಳಲಿದೆ. ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿ ಆಯಾ ಕ್ಷೇತ್ರದ ಮತಗಟ್ಟೆಗಳಿಗೆ ಮತಯಂತ್ರ ಮತ್ತಿತರ ಸಾಮಗ್ರಿಗಳೊಂದಿಗೆ ಇಂದೇ ತೆರಳಿದ್ದಾರೆ. ಬೆಂಗಳೂರು ಪೂರ್ವ ತಾಲೂಕಿನ ಕಣ್ಣೂರು ತಾಲೂಕು ಪಂಚಾಯ್ತಿ ಕ್ಷೇತ್ರಕ್ಕೆ ಅವಿರೋಧ ಆಯ್ಕೆಯಾಗಿದ್ದು, ಉಳಿದ 9 ತಾಲೂಕು ಪಂಚಾಯ್ತಿ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್‍ನಿಂದ 9, ಬಿಜೆಪಿಯಿಂದ 9, ಜೆಡಿಎಸ್‍ನಿಂದ 4 ಅಭ್ಯರ್ಥಿ ಗಳು ಸೇರಿದಂತೆ ಒಟ್ಟು 25 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

Translate »