ಕಾರ್ಮಿಕರ ಮುಂದಾಳತ್ವದಲ್ಲೇ ಫಾಲ್ಕನ್ ಟೈರ್ಸ್ ಪುನರಾರಂಭಕ್ಕೆ ಸರ್ಕಾರದ ಸಮ್ಮತಿ
ಮೈಸೂರು

ಕಾರ್ಮಿಕರ ಮುಂದಾಳತ್ವದಲ್ಲೇ ಫಾಲ್ಕನ್ ಟೈರ್ಸ್ ಪುನರಾರಂಭಕ್ಕೆ ಸರ್ಕಾರದ ಸಮ್ಮತಿ

May 29, 2019

ಬೆಂಗಳೂರು: ಕಾರ್ಮಿಕರ ಮುಂದಾಳತ್ವ ದಲ್ಲಿ ಮೈಸೂರಿನ ರೋಗಗ್ರಸ್ಥ ಫಾಲ್ಕನ್ ಟೈರ್ಸ್ ಕಾರ್ಖಾನೆ ಪುನರಾರಂಭಕ್ಕೆ ರಾಜ್ಯ ಸರ್ಕಾರ ಸಮ್ಮತಿಸಿದೆ.

ಗೃಹ ಕಚೇರಿ ಕೃಷ್ಣಾದಲ್ಲಿ ಕಾರ್ಖಾನೆ ಪುನರಾರಂಭ ಸಂಬಂಧ ಕಾರ್ಮಿಕರು, ಅಧಿಕಾರಿಗಳು ಮತ್ತು ಸಂಸ್ಥೆಯ ಆಡಳಿತ ಮಂಡಳಿ ಜೊತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸುದೀರ್ಘ ಸಮಾಲೋಚನೆ ನಂತರ ಪುನಶ್ಚೇತನಕ್ಕೆ ಸರ್ಕಾರದ ವತಿಯಿಂದ ಅಗತ್ಯ ಕ್ರಮಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸುವಂತೆ ಕಾರ್ಮಿಕರಿಗೆ ಸೂಚಿಸಿದ್ದಾರೆ. ಜೂನ್ 4 ರಂದು ಕಾರ್ಖಾನೆಗೆ ಸಂಬಂಧಿಸಿದಂತೆ ನ್ಯಾಯಾ ಲಯದಲ್ಲಿ ವಿಚಾರಣೆಗೆ ಬರಲಿದ್ದು, ಈ ಸಂದರ್ಭದಲ್ಲಿ ಸರ್ಕಾರ ತನ್ನ ನಿರ್ಧಾರ ತಿಳಿಸಲಿದೆ. ಸಂಸ್ಥೆಯ 3700 ಕಾರ್ಮಿಕರು ಕಾರ್ಖಾನೆ ಯನ್ನು ಪುನರಾರಂಭಿಸಲು ಮುಂದೆ ಬಂದಿರುವುದು ಪ್ರಶಂಸ ನೀಯ ಎಂದ ಮುಖ್ಯಮಂತ್ರಿಯವರು ಪುನ ರಾರಂಭಕ್ಕೆ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ ಎಂದರು. ಕಾರ್ಖಾನೆ ಪುನರಾರಂಭಿಸಲು 120 ಕೋಟಿ ರೂ.ಗಳ ಬ್ಯಾಂಕ್ ಗ್ಯಾರಂಟಿ ಹಾಗೂ ಕಚೇರಿಯ ಮೂಲಭೂತ ಸೌಕರ್ಯಕ್ಕಾಗಿ 20 ಕೋಟಿ ರೂ., ಇದಲ್ಲದೆ 150 ಕೋಟಿ ರೂ. ದುಡಿ ಯುವ ಬಂಡವಾಳದ ಅಗತ್ಯವಿದೆ. ಅಗತ್ಯವಿರುವ ಹಣ ಬ್ಯಾಂಕ್‍ನಿಂದ ಸಾಲದ ರೂಪವಾಗಿ ಪಡೆಯಲು ಗ್ಯಾರಂಟಿ ನೀಡಲಾಗುವುದು. ಮತ್ತೆ ಪುನರಾರಂಭಗೊಳ್ಳುವ ಕಾರ್ಖಾ ನೆಗೆ ವ್ಯವಸ್ಥಾಪಕ ಮಂಡಳಿ ಸ್ಥಾಪಿಸುವ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪವಾಯಿತು. ಮುಖ್ಯಮಂತ್ರಿಯವರಲ್ಲದೆ, ಮೈಸೂರು ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ, ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್, ಲೋಕೋಪ ಯೋಗಿ ಸಚಿವ ಹೆಚ್.ಡಿ. ರೇವಣ್ಣ, ಆರ್ಥಿಕ ಇಲಾಖೆ ಅಪರ ಕಾರ್ಯದರ್ಶಿ ಐಎಸ್‍ಎನ್ ಪ್ರಸಾದ್, ಕೈಗಾರಿಕಾ ಇಲಾಖಾ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತಾ, ಫಾಲ್ಕನ್ ಟೈರ್ಸ್ ಕಾರ್ಖಾನೆ ಪ್ರತಿನಿಧಿಗಳು ಉಪಸ್ಥಿತರಿದ್ದರು.

Translate »