ಡಿಸೆಂಬರ್‍ನಲ್ಲಿ ಮೈಸೂರು, ಚಾ.ನಗರ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ
ಮೈಸೂರು

ಡಿಸೆಂಬರ್‍ನಲ್ಲಿ ಮೈಸೂರು, ಚಾ.ನಗರ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ

November 30, 2019

ಮೈಸೂರು, ನ.29(ಆರ್‍ಕೆ)- ಡಿಸೆಂ ಬರ್ ತಿಂಗಳಲ್ಲಿ ಮೈಸೂರು ಮತ್ತು ಚಾಮ ರಾಜನಗರ ಜಿಲ್ಲೆಯಾದ್ಯಂತ ಹೆದ್ದಾರಿಗಳಲ್ಲಿ ವಾಹನಗಳಿಂದ ಟೋಲ್ ಸಂಗ್ರಹ ಮಾಡಲು ಭಾರತ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರವು ಸಿದ್ಧತೆ ನಡೆಸುತ್ತಿದೆ.

ಈ ಕುರಿತಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ನವೆಂಬರ್ 20ರಂದು ಗೆಜೆಟ್ ಅಧಿಸೂಚನೆ ಹೊರಡಿ ಸಿದ್ದು, ಭಾರತ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರವು ಮೈಸೂರು ಜಿಲ್ಲೆಯ ನಂಜನ ಗೂಡು ರಸ್ತೆ, ಟಿ.ನರಸೀಪುರ ರಸ್ತೆ ಹಾಗೂ ಗುಂಡ್ಲುಪೇಟೆ ರಸ್ತೆಗಳಲ್ಲಿ ನಿರ್ಮಿಸಿರುವ ಪ್ಲಾಜಾಗಳಲ್ಲಿ ಆ ಮಾರ್ಗ ಸಂಚರಿ ಸುವ ಎಲ್ಲಾ ಬಗೆಯ ವಾಹನಗಳಿಂದ ಟೋಲ್ ಸಂಗ್ರಹಿಸುವ ಬಗ್ಗೆ ತಯಾರಿ ನಡೆಸುತ್ತಿದೆ. ಮೈಸೂರಿನಿಂದ ಊಟಿ ಸಂಪರ್ಕಿಸುವ ರಸ್ತೆ, ಮೈಸೂರಿನಿಂದ ಟಿ.ನರಸೀಪುರ ಮೂಲಕ ಕೊಳ್ಳೇಗಾಲ ಸಂಪರ್ಕಿಸುವ ರಸ್ತೆ, ಗುಂಡ್ಲು ಪೇಟೆಯಿಂದ ಕೇರಳ ಸಂಪರ್ಕಿಸುವ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಿಸಲು ಪ್ರಾಧಿ ಕಾರವು ಸದ್ಯದಲ್ಲೇ ಮತ್ತೊಂದು ಅಧಿಸೂ ಚನೆ ಹೊರಡಿಸಲಿದೆ. ನಂತರ ಟೋಲ್ ಸಂಗ್ರಹ ಆರಂಭದ ದಿನಾಂಕ, ಯಾವ ವಾಹನ ಗಳಿಗೆ ಎಷ್ಟು ಶುಲ್ಕ, ಪಾಸ್ ವಿತರಣೆ ಇತ್ಯಾದಿ ಮಾಹಿತಿಗಳನ್ನು ಪ್ರಕಟಿಸಲಾಗುವುದು ಎಂದು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‍ಎಚ್‍ಎಐ)ದ ಯೋಜನಾ ನಿರ್ದೇಶಕ ಬಿ.ಟಿ.ಶ್ರೀಧರ್ `ಮೈಸೂರು ಮಿತ್ರ’ ನಿಗೆ ತಿಳಿಸಿದ್ದಾರೆ. ಗುಂಡ್ಲುಪೇಟೆ ಸಮೀಪದ ಮದ್ದೂರು, ಮೈಸೂರು-ನಂಜನಗೂಡು ನಡುವಿನ ಕಡಕೊಳ ಹಾಗೂ ಟಿ.ನರಸೀ ಪುರ ರಸ್ತೆಯ ಎಡ ತೊರೆ ಬಳಿ ಇರುವ ಟೋಲ್ ಪ್ಲಾಜಾಗಳಲ್ಲಿ ಶುಲ್ಕ ವಸೂಲಿ ಮಾಡಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳು ತ್ತಿದ್ದು, ಸಿಸಿ ಕ್ಯಾಮೆರಾ, ಟೋಲ್ ಸಂಗ್ರಹ ಕ್ಯಾಬಿನ್‍ಗಳು, ವಾಹನ ಚಾಲಕರಿಗೆ ಸೂಚನಾ ಫಲಕಗಳು, ರಸ್ತೆ ಡುಬ್ಬಗಳು ಹಾಗೂ ಇನ್ನಿ ತರ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತಿದೆ. ಈ ಸಂಬಂಧ ಸಾರ್ವಜನಿಕ ತಿಳುವಳಿಕೆ ಗಾಗಿ ನಾವು ಇಷ್ಟರಲ್ಲೇ ಅಧಿಕೃತ ಅಧಿ ಸೂಚನೆಯನ್ನು ಪತ್ರಿಕೆಗಳಲ್ಲಿ ಪ್ರಕಟಿಸಿ ನಂತರ ಟೋಲ್ ಸಂಗ್ರಹ ಕಾರ್ಯ ಆರಂಭಿ ಸುತ್ತೇವೆ ಎಂದು ಅವರು ತಿಳಿಸಿದರು.

ಸಚಿವಾಲಯ ಹೊರಡಿಸಿರುವ ಗೆಜೆಟ್ ಅಧಿಸೂಚನೆಯಲ್ಲಿ 24 ಕಿ.ಮೀ ಉದ್ದದ ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿ 766 ಯೋಜನೆಯನ್ನು ನಾಲ್ಕು ಪಥದ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲಾ ಗಿದ್ದು, ಅದು ಕೊಳ್ಳೇಗಾಲದ ಉತ್ತಂಬಳ್ಳಿ, ಬಂಡೀಪುರದ ಮೂಲೆಹೊಳೆ ಹಾಗೂ ಕೇರಳದ ಕೋಜೀಕೋಡ್‍ಗೆ ಸಂಪರ್ಕ ಕಲ್ಪಿಸ ಲಾಗಿದೆ. ಈ ಯೋಜನೆಗೆ 429.45 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದ್ದು, ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರವು ಈ ರಸ್ತೆಯನ್ನು ನಿರ್ವಹಣೆ ಮಾಡಬೇಕಾ ಗಿರುವುದರಿಂದ ಇಲ್ಲಿ ಸಂಚರಿಸುವ ವಾಹನ ಗಳಿಂದ ಟೋಲ್ ಸಂಗ್ರಹ ಮಾಡಲು ಉದ್ದೇಶಿಸಲಾಗಿದೆ.

ಟೋಲ್‍ಗೆ ವಿರೋಧ: ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಿಸುವ ಪ್ರಸ್ತಾವನೆಗೆ ಈ ಹಿಂದೆ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಆ ಭಾಗದ ರೈತರು ಪ್ರತಿಭಟನೆ ನಡೆಸಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸುತ್ತಮುತ್ತಲಿನ ಗ್ರಾಮಗಳ ಜನರು ನಿರಂತರವಾಗಿ ಈ ರಸ್ತೆಗಳಲ್ಲಿ ಸಂಚ ರಿಸಬೇಕಾಗಿರುವುದರಿಂದ ಅವರ ವಾಹನ ಗಳಿಗೆ ಶುಲ್ಕ ವಿಧಿಸಿದಲ್ಲಿ ಹೊರೆಯಾಗಲಿದೆ. ಆದ್ದರಿಂದ ಈ ಪ್ರಸ್ತಾವನೆಯನ್ನು ಕೈ ಬಿಡ ಬೇಕೆಂದು ಸರ್ಕಾರದ ಟೋಲ್ ಸಂಗ್ರಹ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದ್ದರು. ಅಲ್ಲದೆ ಈ ಹೆದ್ದಾರಿಗಳ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಅನೇಕ ಕಡೆ ಇನ್ನೂ ಕಾಮಗಾರಿ ನಡೆಯುತ್ತಿದೆ. ಕೆಲವೆಡೆ 4 ಪಥದ ಬದಲು ಎರಡೇ ಪಥದ ರಸ್ತೆ ನಿರ್ಮಾಣ ಮಾಡಲಾಗಿದೆ. ಇದರ ನಡುವೆಯೇ ಟೋಲ್ ವಸೂಲಿಗೆ ಸಿದ್ಧತೆ ಮಾಡಿಕೊಳ್ಳುತ್ತಿರುವು ದಕ್ಕೆ ನಂಜನಗೂಡು ಶಾಸಕ ಹರ್ಷವರ್ಧನ್ ತೀರ ವಿರೋಧ ವ್ಯಕ್ತಪಡಿಸಿದ್ದಾರೆ.

ಹೆದ್ದಾರಿಯಲ್ಲಿ ಫಾಸ್ಟ್‍ಟ್ಯಾಗ್ ಕಡ್ಡಾಯ ಗಡುವು ಡಿ.15ಕ್ಕೆ ವಿಸ್ತರಣೆ
ನವದೆಹಲಿ,ನ.29- ರಾಷ್ಟ್ರೀಯ ಹೆದ್ದಾರಿ ಯಲ್ಲಿ ಸಂಚರಿಸುವ ಎಲ್ಲ ವಾಹನಗಳಿಗೆ ಡಿ.1ರಿಂದ ಫಾಸ್ಟ್‍ಟ್ಯಾಗ್ ಕಡ್ಡಾಯಗೊಳಿ ಸಿದ್ದ ಕೇಂದ್ರ ಸರ್ಕಾರ, ಈ ಗಡುವನ್ನು ಡಿ.15ರವರೆಗೆ ವಿಸ್ತರಿಸಿದೆ. ಈ ಸಂಬಂಧ ಶುಕ್ರವಾರ ಸಂಜೆ ಸುತ್ತೋಲೆಯನ್ನೂ ಹೊರಡಿಸಿದೆ. ಡಿ.15ರ ಬಳಿಕವೂ ಫಾಸ್ಟ್ ಟ್ಯಾಗ್ ಇಲ್ಲದೇ ಹೆದ್ದಾರಿಗಳಲ್ಲಿ ವಾಹನ ಚಲಾಯಿಸಿದರೆ ದುಬಾರಿ ದಂಡ ಪಾವ ತಿಸಬೇಕಾಗುತ್ತದೆ ಎಂದೂ ಎಚ್ಚರಿಸಿದೆ.

ಶುಕ್ರವಾರದವರೆಗೆ 72 ಲಕ್ಷ ಫಾಸ್ಟ್ ಟ್ಯಾಗ್ ಮಾರಾಟವಾಗಿವೆ. ದೇಶಾದ್ಯಂತ ಫಾಸ್ಟ್ ಟ್ಯಾಗ್ ಜಾರಿಗೆ ಕೇಂದ್ರದ ಹೆದ್ದಾರಿ ಅಭಿವೃದ್ಧಿ ಸಚಿವಾಲಯವು ತನ್ನ ಅಧಿಕಾರಿಗಳನ್ನು ಎಲ್ಲಾ ರಾಜ್ಯಗಳಿಗೂ ನಿಯೋಜಿಸುತ್ತಿದೆ. ಡಿ.15ರಿಂದ ಹೆದ್ದಾರಿ ಸಂಚಾರದ ಶುಲ್ಕ ಪಾವತಿಯು ರಾಷ್ಟ್ರೀಯ ಎಲೆಕ್ಟ್ರಾನಿಕ್ ಟೋಲ್ (ಎನ್‍ಇಟಿ) ಸಂಗ್ರಹದಡಿ ಫಾಸ್ಟ್‍ಟ್ಯಾಗ್ ಮೂಲಕವೇ ನಡೆಯುತ್ತದೆ. ಡಿ.15ರಿಂದ ಫಾಸ್ಟ್‍ಟ್ಯಾಗ್ ಕಡ್ಡಾಯವಾಗಿದ್ದರೂ ಎಲ್ಲ ಟೋಲ್ ಪ್ಲಾಜಾಗಳಲ್ಲಿಯೂ ಒಂದು ಪ್ರವೇಶ ದ್ವಾರ ವನ್ನು ಹೈಬ್ರಿಡ್ (ನಗದು-ಡಿಜಿಟಲ್ ಪಾವತಿ ಕೌಂಟರ್) ಆಗಿ ಬಳಸಲಾಗುತ್ತದೆ. ಇದ ರಲ್ಲಿ ಫಾಸ್ಟ್‍ಟ್ಯಾಗ್ ಅಲ್ಲದೇ ಇತರೆ ವಿಧಾನ ದಲ್ಲೂ ಟೋಲ್ ಸ್ವೀಕರಿಸಲಾಗುತ್ತದೆ. ಎಲೆ ಕ್ಟ್ರಾನಿಕ್ ಟೋಲ್ ಸಂಗ್ರಹ ಡಿ.15ರಿಂದ ಶೇ.100ರಷ್ಟು ಜಾರಿಯಾಗುತ್ತದೆ.

Translate »