ಡಿಸೆಂಬರ್‍ನಲ್ಲಿ ಹಾರಂಗಿ ಜಲಾಶಯದ ಹೂಳೆತ್ತುವ ಕಾರ್ಯ ಆರಂಭ
ಮೈಸೂರು

ಡಿಸೆಂಬರ್‍ನಲ್ಲಿ ಹಾರಂಗಿ ಜಲಾಶಯದ ಹೂಳೆತ್ತುವ ಕಾರ್ಯ ಆರಂಭ

November 30, 2019

ಕುಶಾಲನಗರ,ನ.29(ಆರ್‍ಕೆ, ಅಕ್ಷಯ್) -ಕುಶಾಲನಗರ ಬಳಿಯ ಹಾರಂಗಿ ಜಲಾಶಯದ ಹೂಳೆತ್ತುವ ಕಾರ್ಯ ಡಿಸೆಂಬರ್‍ನಲ್ಲಿ ಆರಂಭವಾಗಲಿದೆ.ಉಪ ಚುನಾವಣೆ ನಂತರ ಈ ಕಾರ್ಯಕ್ಕೆ ಚಾಲನೆ ದೊರೆಯಲಿದ್ದು, ಅದಕ್ಕಾಗಿ ಸರ್ಕಾರ 130 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಹಾರಂಗಿ ಡ್ಯಾಂನಲ್ಲಿ ಒಂದು ಟಿಎಂಸಿಎಫ್‍ಟಿ (1 ಸಾವಿರ ಮಿಲಿಯನ್ ಕ್ಯೂಬಿಕ್ ಫೀಟ್)ಯಷ್ಟು ಹೂಳು ಶೇಖರಣೆ ಯಾಗಿದೆ. ಮಂಡ್ಯ ಜಿಲ್ಲೆಯ ಕೆಆರ್‍ಎಸ್ ಜಲಾಶಯಕ್ಕೂ ನೀರು ಹರಿದು ಬರುವ ಪ್ರಮುಖ ನೀರಿನ ಮೂಲವಾದ ಹಾರಂಗಿ ಜಲಾಶಯದಲ್ಲಿ ಹೂಳು ತುಂಬಿಕೊಂಡಿ ರುವುದರಿಂದ ನೀರು ಸಂಗ್ರಹ ಸಾಮಥ್ರ್ಯ ಕಡಿಮೆಯಾಗಿದೆ ಎಂಬ ಕರ್ನಾಟಕ ಇಂಜಿ ನಿಯರ್‍ಗಳ ಸಂಶೋಧನಾ ಕೇಂದ್ರ (ಕೆಇ ಆರ್‍ಸಿ)ದ ವರದಿಯನ್ನಾಧರಿಸಿ ಈ ಯೋಜನೆ ಯನ್ನು ಸರ್ಕಾರ ಕೈಗೆತ್ತಿಕೊಂಡಿದೆ.

ನೀರಾವರಿ ಇಲಾಖೆ ಮೂಲಗಳು ಈ ಕುರಿತಂತೆ ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ್ದು, ಹಾರಂಗಿ ಜಲಾಶಯದಲ್ಲಿ ಹೂಳು ತೆಗೆಯುವ ಕಾರ್ಯ ಮುಗಿದ ನಂತರ ಕೃಷ್ಣರಾಜ ಸಾಗರ ಜಲಾಶಯದಲ್ಲಿ ಶೇಖ ರಣೆಯಾಗಿರುವ ಹೂಳನ್ನು ತೆಗೆಯಬೇ ಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಹಣಕಾಸು ಇಲಾಖೆ ಯಿಂದ ಹಸಿರು ನಿಶಾನೆ ದೊರೆತ ನಂತರ ಡಿಸೆಂಬರ್ ಕೊನೆಯ ವಾರದಲ್ಲಿ ಹಾರಂಗಿ ಜಲಾಶಯದ ಹೂಳೆತ್ತುವ ಕಾರ್ಯ ಆರಂಭ ವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಹಾರಂಗಿ ಉಪವಿಭಾಗದ ಎಗ್ಸಿಕ್ಯೂಟಿವ್ ಇಂಜಿನಿಯರ್ ನಾಗರಾಜ್ ‘ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಜಲಾಶಯದ ಹಿನ್ನೀರಿನ ಭಾಗದಲ್ಲಿ ನೀರು ಕಡಿಮೆ ಇರು ವೆಡೆ ಮೊದಲು ಹೂಳೆತ್ತುವ ಕಾರ್ಯ ಆರಂಭವಾಗಲಿದೆ. ಕೆಲ ತಿಂಗಳುಗಳ ಹಿಂದೆ ಭಾರೀ ಮಳೆ ಸುರಿದು ಕೆಲವೆಡೆ ಭೂ ಕುಸಿತ ಉಂಟಾದ ಕಾರಣ ಕೂಟುಪೋಲ್, ಹಟ್ಟಿ ಹೊಳೆ, ಮಾದಾಪುರ ಮತ್ತು ಇತರ ಪ್ರದೇಶ ಗಳಿಂದ ನೀರಿನೊಂದಿಗೆ ಮಣ್ಣು ಜಲಾ ಶಯದ ಒಡಲು ಸೇರಿದೆ. ಇದು ಚುನಾ ವಣಾ ಸಮಯವಾಗಿರುವುದರಿಂದ ಈಗ ಹಣಕಾಸು ಇಲಾಖೆಯು ಅನುದಾನ ಬಿಡು ಗಡೆ ಮಾಡುವುದಿಲ್ಲ. ಉಪಚುನಾವಣೆ ಮುಗಿದ ನಂತರ ಹಣ ಬಿಡುಗಡೆ ಸಾಧ್ಯತೆ ಎಂದರು.

ಈಗ ನಾವು ಒಣ ಪ್ರದೇಶವನ್ನು ಗುರುತಿ ಸಿದ್ದು, ಹೂಳು ಜಾಸ್ತಿ ಶೇಖರಣೆಯಾಗಿ ರುವ ಕಡೆ ಅರ್ಥ್ ಮೂವರ್ಸ್ ಯಂತ್ರಗಳನ್ನು ಬಳಸಿ ಕಾಮಗಾರಿಗೆ ಟೆಂಡರ್ ಕರೆಯಲಾಗು ವುದು ಹಾಗೂ ಆ ಬಗ್ಗೆ ತಜ್ಞರಿಂದ ತಾಂತ್ರಿಕ ಸಲಹೆಗಳನ್ನು ಪಡೆದು ಅದರಂತೆ ಕಾಮ ಗಾರಿ ಮಾಡಲಾಗುವುದು ಎಂದರು. ಈ ಸಂಬಂಧ ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಸಚಿವ ಸಂಪುಟದ ಸಭೆಯಲ್ಲಿ ಅನುಮೋದನೆ ಪಡೆದ ನಂತರ ಸರ್ಕಾರ ಹಾರಂಗಿ ಜಲಾ ಶಯದಲ್ಲಿ ಹೂಳೆತ್ತಲು 130 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ಸ್ಪಷ್ಟಪಡಿಸಿದರು.

ಜಿಯೋ ಮೇರಿನ್ ಸರ್ವೆ: ಜಲಾಶಯ ದಲ್ಲಿ ಎಷ್ಟು ಪ್ರಮಾಣದ ಹೂಳು ಶೇಖರಣೆ ಯಾಗಿದೆ ಎಂಬುದನ್ನು ಕರ್ನಾಟಕ ಇಂಜಿ ನಿಯರ್ಸ್ ರೀಸರ್ಚ್ ಸೆಂಟರ್ (ಕೆಇಆರ್‍ಸಿ) ಇಂಜಿನಿಯರ್‍ಗಳಿಂದ ಸರ್ವೆ ಮಾಡಿಸಿ ಸರ್ಕಾರ ವರದಿ ಪಡೆದುಕೊಂಡಿದೆ. ಅದ ರಂತೆ ಜಿಯೋ ಮೇರಿನ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ತಂಡದ ಸಹಾಯ ದೊಂದಿಗೆ ಈ ವರ್ಷದ ಫೆಬ್ರವರಿ ಮಾಹೆ ಯಲ್ಲಿ ಸಮೀಕ್ಷೆ ನಡೆಸಿ ನೀಡಿದ ವರದಿ ಯಂತೆ ಕಾಮಗಾರಿ ನಡೆಸಲು ಉದ್ದೇಶಿಸ ಲಾಗಿದೆ. ತಂಡವು ಹೈಡ್ರಾಲಿಕ್ ಮತ್ತು ಬೇತಿ ಮೆಟ್ರಿಕ್ ಮಾದರಿಯನ್ನನುಸರಿಸಿ ಸರ್ವೆ ಕಾರ್ಯ ಮಾಡಲಾಗಿದ್ದು, ಹಾರಂಗಿ ಜಲಾ ಶಯದ ಹಿನ್ನೀರಿನಲ್ಲಿ ಎಷ್ಟು ಆಳದವರೆಗೆ ಹೂಳು ತುಂಬಿದೆ ಎಂಬುದನ್ನು ಪತ್ತೆ ಮಾಡಿ ವರದಿಯಲ್ಲಿ ತಿಳಿಸಿದೆ.

ಅದೇ ವೇಳೆ ಡ್ರೋಣ್ ಕ್ಯಾಮರಾ ಬಳಸಿ ಜಲಾನಯನ ಪ್ರದೇಶ ಹಾಗೂ ಒಣಗಿದ ಪ್ರದೇಶದ ಚಿತ್ರಣವನ್ನು ದಾಖಲಿಸಲಾ ಗಿದ್ದು, ಈ ಸರ್ವೆಯಲ್ಲಿ 1 ಟಿಎಂಸಿಎಫ್ ಟಿಯಷ್ಟು ಹೂಳು ಶೇಖರಣೆಯಾಗಿರು ವುದು ಕಂಡುಬಂದಿದೆ. ಹೂಳು ತೆಗೆ ಯುವ ಕಾರ್ಯಕ್ಕೆ ಕಾವೇರಿ ನೀರಾವರಿ ನಿಗಮವು 130 ಕೋಟಿ ರೂ. ಅಂದಾಜು ವೆಚ್ಚದ ಸಮಗ್ರ ಯೋಜನಾ ವರದಿ (ಡಿಪಿಆರ್)ಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು.

Translate »