ವಶಪಡಿಸಿಕೊಂಡ ಹಣ ದುರ್ಬಳಕೆ   ಮೇಲುಕೋಟೆ ಠಾಣೆ ಎಎಸ್‍ಐ   ಸೇರಿ ಇಬ್ಬರ ಅಮಾನತು
ಮೈಸೂರು

ವಶಪಡಿಸಿಕೊಂಡ ಹಣ ದುರ್ಬಳಕೆ  ಮೇಲುಕೋಟೆ ಠಾಣೆ ಎಎಸ್‍ಐ  ಸೇರಿ ಇಬ್ಬರ ಅಮಾನತು

December 1, 2019

ಪಾಂಡವಪುರ,ನ.30-ವಶಪಡಿಸಿಕೊಂಡ ಹಣ ದುರ್ಬಳಕೆ ಮಾಡಿಕೊಂಡ ಹಿನ್ನೆಲೆ ಯಲ್ಲಿ ಮೇಲುಕೋಟೆ ಠಾಣೆ ಎಎಸ್‍ಐ ಹಾಗೂ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿ ಷ್ಠಾಧಿಕಾರಿ ಕೆ.ಪರಶುರಾಮ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಮೇಲುಕೋಟೆ ಠಾಣೆ ಎಎಸ್‍ಐ ಸುರೇಶ್ ನಾಯಕ ಹಾಗೂ ಸಿಬ್ಬಂದಿ ಕೇಶವಗೌಡ ಅಮಾನತುಗೊಂಡವರು.

ತಿಂಗಳ ಹಿಂದೆ ತಾಲೂಕಿನ ಶಂಭೂನಹಳ್ಳಿ ಸಮೀಪದ ಅರಣ್ಯದಲ್ಲಿ ಕೆಲವು ಯುವ ಕರು ಜೂಜಾಟದಲ್ಲಿ ನಿರತರಾಗಿದ್ದರು. ಈ ವೇಳೆ ಜೂಜು ಅಡ್ಡೆ ಮೇಲೆ ಎಎಸ್‍ಐ ಸುರೇಶ್‍ನಾಯಕ ಹಾಗೂ ಸಿಬ್ಬಂದಿ ಕೇಶವಗೌಡ ದಾಳಿ ನಡೆಸಿ ಸಾವಿರಾರು ರೂ. ವಶಪಡಿಸಿಕೊಂಡಿದ್ದರು. ಈ ಸಂಬಂಧ ಠಾಣೆಯಲ್ಲಿ ಯಾವುದೇ ದೂರು ದಾಖಲಿಸಿ ರಲಿಲ್ಲ. ವಶಪಡಿಸಿಕೊಂಡ ಹಣವನ್ನು ಈ ಇಬ್ಬರೂ ಸೇರಿ ದುರ್ಬಳಕೆ ಮಾಡಿಕೊಂಡಿ ದ್ದರು. ಈ ಸಂಬಂಧ ಜೂಜಾಟದಲ್ಲಿ ನಿರತನಾಗಿದ್ದ ವ್ಯಕ್ತಿಯೊಬ್ಬ ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು 2 ಲಕ್ಷ ರೂ. ವಶಪಡಿಸಿಕೊಂಡು, ದೂರು ದಾಖಲಿಸಿಲ್ಲ ಎಂಬುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಅವರಿಗೆ ದೂರು ನೀಡಿದ್ದರು. ಈ ಸಂಬಂಧ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಪಾಂಡವಪುರ ಸಿಪಿಐ ರವೀಂದ್ರ ಅವರಿಗೆ ಸೂಚಿಸಿದ್ದರು. ತನಿಖೆ ವೇಳೆ ಇಬ್ಬರು ಪೊಲೀಸರು ದಾಳಿ ನಡೆಸಿ 22 ಸಾವಿರ ರೂ. ವಶಪಡಿಸಿಕೊಂಡಿದ್ದೆವು ಎಂಬುದಾಗಿ ತಪ್ಪು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಎಎಸ್‍ಐ ಸುರೇಶ್ ನಾಯಕ ಹಾಗೂ ಕೇಶವಗೌಡ ನನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಮಾನತುಗೊಳಿಸಿ ಆದೇಶಿಸಿದ್ದಾರೆ.

Translate »