ವಿದ್ಯುತ್ ಉಳಿತಾಯದ ಬಗ್ಗೆ ಚಿತ್ರಕಲೆ ಮೂಲಕ ಅರಿವು ಮೂಡಿಸಿದ ಮಕ್ಕಳು
ಮೈಸೂರು

ವಿದ್ಯುತ್ ಉಳಿತಾಯದ ಬಗ್ಗೆ ಚಿತ್ರಕಲೆ ಮೂಲಕ ಅರಿವು ಮೂಡಿಸಿದ ಮಕ್ಕಳು

December 1, 2019

ಮೈಸೂರು, ನ.30(ಎಂಕೆ)- ಬಲ್ಬ್, ಸೋಲಾರ್, ಟಿವಿ, ಫ್ಯಾನ್ ಮತ್ತು ಇತರೆ ವಿದ್ಯುತ್ ಉಪಕರಣಗಳ ಬಳಸುವ ವಿಧಾನಗಳ ಕುರಿತು ಬಗೆ ಬಗೆಯ ಬಣ್ಣಗಳನ್ನು ತುಂಬಿ ಚಿತ್ರ ಬಿಡಿಸುವ ಮೂಲಕ ವಿದ್ಯುತ್ ಉಳಿ ತಾಯದ ಅರಿವು ಮೂಡಿಸಲಾಯಿತು.

ನಗರದ ಸರಸ್ವತಿಪುರಂನಲ್ಲಿರುವ ರೋಟರಿ ಪಶ್ಚಿಮ ಶಾಲೆಯಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ(ಕೆಆರ್‍ಇಡಿಎಲ್) ವತಿಯಿಂದ ಆಯೋಜಿಸಲಾಗಿದ್ದ ‘ಶಾಲಾ ಮಕ್ಕಳಿಗೆ ವಿದ್ಯುತ್ ಸಂರ ಕ್ಷಣೆಯ ಬಗ್ಗೆ ಚಿತ್ರ ಕಲಾ ಸ್ಪರ್ಧೆ’ಯಲ್ಲಿ ಇಂಧನ ಉಳಿ ಸುವ ಜತೆಗೆÉ ಭೂಮಿಯನ್ನು ಸಂರಕ್ಷಿಸಿ ಎಂಬುದನ್ನು ವಿದ್ಯಾರ್ಥಿಗಳು ತಮ್ಮ ಚಿತ್ರಕಲೆಗಳಲ್ಲಿ ಅಭಿವ್ಯಕ್ತಪಡಿಸಿದರು.

ಚಿತ್ರಕಲಾ ಸ್ಪರ್ಧೆಯಲ್ಲಿ ಜಿಲ್ಲೆಯ 58 ಶಾಲೆಗಳ 210 ವಿದ್ಯಾರ್ಥಿಗಳು ಕಲಾ ಪ್ರೌಢಿಮೆಯನ್ನು ಮೆರೆದರು. ವಿದ್ಯುತ್ ಉಳಿತಾಯಕ್ಕೆ 5 ಸ್ಟಾರ್‍ಗಳಿರುವ ವಿದ್ಯುತ್ ಉಪಕರಣ ಗಳನ್ನು ಬಳಸಬೇಕು. ಮನೆಗಳು ಮತ್ತು ಕಾರ್ಖಾನೆಗಳಲ್ಲಿ ಯುಪಿಎಸ್ ಬದಲು ಸೋಲಾರ್ ಬಳಕೆ ಮಾಡಬೇಕು ಎಂಬುದನ್ನು ತಿಳಿಸಿಕೊಟ್ಟರು. ನವೀಕರಿಸಬಹುದಾದ ಇಂಧನ ಗಳನ್ನು ಹೆಚ್ಚಾಗಿ ಬಳಸುವುದುರಿಂದ ಪೆÀಟ್ರೋಲಿಯಂ ಉತ್ಪನ್ನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಹುದು. ಸೌರಶಕ್ತಿಯ ಬಳಕೆ ಮತ್ತು ಉತ್ಪಾ ದನೆಯಿಂದ ಹಣವನ್ನು ಸಂಪಾದಿಸಬಹುದು ಎಂದು ಮನವರಿಕೆ ಮಾಡಿಕೊಟ್ಟರು.

ಈ ವೇಳೆ ಕೆಆರ್‍ಇಡಿಎಲ್ ಯೋಜನಾ ಅಭಿಯಂತರ ದಿನೇಶ್ ಮಾತನಾಡಿ, ಮಕ್ಕಳು ಮನೆಯಲ್ಲಿ ಯಾವ ರೀತಿ ವಿದ್ಯುತ್ ಉಳಿತಾಯ ಮಾಡುವ ಪರಿಕಲ್ಪನೆಯಲ್ಲಿ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. 1 ಯೂನಿಟ್ ವಿದ್ಯುತ್ ಉಳಿತಾಯ 2 ಯೂನಿಟ್ ವಿದ್ಯುತ್ ಉತ್ಪಾ ದನೆಗೆ ಸಮವಾಗಿದೆ. ಈ ನಿಟ್ಟಿನಲ್ಲಿ ನವೀಕರಿಸಬಹುದಾದ ಇಂಧನ ಹಾಗೂ ಇಂಧನ ಸಂರಕ್ಷಣೆ ಕುರಿತು ಮಕ್ಕಳ ಜಾಗೃತಿಯನ್ನು ಮೂಡಿಸುವ ಪ್ರಯತ್ನ ಇದಾಗಿದೆ. ಅಲ್ಲದೆ ಮಕ್ಕಳು ವಿದ್ಯುತ್ ಬಳಕೆ ಕುರಿತು ತಮ್ಮ ತಂದೆ-ತಾಯಿ ಮತ್ತು ಶಿಕ್ಷಕರೊಂದಿಗೆ ಚರ್ಚೆ ಮಾಡುವುದರಿಂದ ಅವ ರಲ್ಲೂ ಅರಿವು ಮೂಡುತ್ತದೆ ಎಂದರು.

ಸಾಮಾನ್ಯವಾಗಿ ಟಿವಿಯನ್ನು ರಿಮೋಟ್ ಮೂಲಕ ಆಫ್ ಮಾಡುತ್ತೇನೆ. ಆದರೆ ರಿಮೋಟ್ ಮೂಲಕ ಆಫ್ ಮಾಡಿ ದಾಗ ಟಿವಿಯ ಮೊನಿಟರ್ ಮಾತ್ರ ಆಫ್ ಆಗುತ್ತದೆ. ಇದ ರಿಂದ ಟಿವಿ ಮೆಲ್ನೋಟಕ್ಕೆ ಆಫ್ ಆಗಿದ್ದರೂ ವಿದ್ಯುತ್ ಬಳಕೆ ಮಾಡುತ್ತಲೇ ಇರುತ್ತದೆ. ಅಲ್ಲದೆ ದೇವರ ಕೋಣೆಯಲ್ಲಿ ಜಿರೋ ವ್ಯಾಟ್ ಎಂದು ಉಪಯೋಗಿಸುವ ಬಲ್ಬ್‍ಗಳು ಶೇ.25ರಷ್ಟು ವಿದ್ಯುತ್ ಬಳಕೆ ಮಾಡುತ್ತವೆ ಎಂದರು.

ವಿದ್ಯುತ್ ಉಳಿತಾಯದ ಜಾಗೃತಿಗಾಗಿ ಕೆಎಆರ್‍ಇ ಡಿಎಲ್ ವತಿಯಿಂದ ಪ್ರತಿವರ್ಷ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. 4,5,6 ಮತ್ತು 7,8,9ನೇ ತರ ಗತಿಯ ವಿದ್ಯಾರ್ಥಿಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಿ ಸ್ಪರ್ಧೆ ನಡೆಸಲಾಗುತ್ತದೆ. ವಿಜೇತ ವಿದ್ಯಾರ್ಥಿಗಳಿಗೆ ಬಹು ಮಾನ ವಿತರಣಾ ಕಾರ್ಯಕ್ರಮದಲ್ಲಿ ನಗದು ಬಹುಮಾನ, ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು. ಅಲ್ಲದೆ ಸ್ಪರ್ಧೆ ಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಗುದು ಎಂದು ಹೇಳಿದರು. ಸಿಬ್ಬಂದಿಗಳಾದ ಮನು, ಅಕ್ಷಯ್ ಉಪಸ್ಥಿತರಿದ್ದರು.

Translate »